twitter
    For Quick Alerts
    ALLOW NOTIFICATIONS  
    For Daily Alerts

    ಕಲಾವಿದರೆಂದು ತೋರಿಸಿಕೊಡುವುದೇ ಪೌರಾಣಿಕ, ಐತಿಹಾಸಿಕ ಸಿನಿಮಾ : ದರ್ಶನ್

    |

    ಕುರುಕ್ಷೇತ್ರ ಕನ್ನಡ ಚಿತ್ರರಂಗದ ಬಹು ಕೋಟಿ ವೆಚ್ಚದ, ಬಹು ತಾರಾಗಣದ ಪೌರಾಣಿಕ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಸಿನಿಮಾ ಎನ್ನುವ ವಿಶೇಷದ ಜೊತೆಗೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿರುವ ಚಿತ್ರ ಕುರುಕ್ಷೇತ್ರ. ಪೌರಾಣಿಕ ಸಿನಿಮಾಗಳ ಮಹತ್ವನೇ ಬೇರೆ ಆಗಿರುತ್ತದೆ.

    ಕಮರ್ಷಿಯಲ್ ಚಿತ್ರಗಳು ಸಾಕಷ್ಟು ತಯಾರಾಗುತ್ತವೆ. ಆದ್ರೆ ಪೌರಾಣಿಕ ಸಿನಿಮಾಗಳನ್ನು ಮಾಡುವ ಧೈರ್ಯ ಮಾಡುವವರು ತುಂಬಾ ಕಮ್ಮಿ. ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳನ್ನು ಮಾಡುವುದು ತುಂಬಾ ಕಷ್ಟ ಎನಿಸಿದ್ರು, ದರ್ಶನ್ ಕಮರ್ಷಿಯಲ್ ಸಿನಿಮಾಗಳಿಂದ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗೆ ಮೊದಲ ಆಧ್ಯತೆ ನೀಡುತ್ತೇನೆ ಎಂದು ಯಾವಾಗಲು ಹೇಳುತ್ತಾರೆ.

    ಆಗಸ್ಟ್ 9ಕ್ಕೆ 'ಕುರುಕ್ಷೇತ್ರ' ಎರಡೇ ಭಾಷೆಯಲ್ಲಿ ರಿಲೀಸ್ಆಗಸ್ಟ್ 9ಕ್ಕೆ 'ಕುರುಕ್ಷೇತ್ರ' ಎರಡೇ ಭಾಷೆಯಲ್ಲಿ ರಿಲೀಸ್

    ಇದಕ್ಕೆ ಕಾರಣ ಏನು ಅಂತಾನು ದರ್ಶನ್ ಬಹಿರಂಗ ಪಡಿಸಿದ್ದಾರೆ. "ಕಲಾವಿದರು ಅಂತ ತೋರಿಸಿಕೊಳ್ಳಬೇಕು ಅಂದ್ರೆ ಇಂತಹ ಸಿನಿಮಾಗಳನ್ನು ಮಾಡಬೇಕು. ಸಾವಿರ ಕಮರ್ಷಿಯಸ್ ಸಿನಿಮಾ ಮಾಡಿದ್ರು ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾ ಕಲಾವಿದ ಅಂತ ತೋರಿಸಿಕೊಡುತ್ತಿದೆ. ಅಲ್ಲಿ ವಾಯ್ಸ್ ಮಾಡ್ಯುಲೇಶನ್ ಬದಲಾಗುತ್ತೆ, ವರ್ಡಿಂಗ್ಸ್ ಬದಲಾಗುತ್ತದೆ, ತುಂಬಾ ವಿಭಿನ್ನವಾಗಿರುತ್ತೆ" ಎಂದು ಹೇಳಿದ್ದಾರೆ.

    Darshan Is Giving First Preference To Historical And Mythical Film

    ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳಿಗೆ ಸಾಕಷ್ಟು ತಯಾರಿ ಮತ್ತು ಶ್ರಮ ವಹಿಸಬೇಕಾಗುತ್ತೆ. ಪೌರಾಣಿಕ ಸಿನಿಮಾಗಳನ್ನು ಕೈಗೆತ್ತಿಕೊಂಡರೆ ಅದಕ್ಕೆ ಸರಿಯಾದ ನ್ಯಾಯ ಒದಗಿಸಬೇಕು, ಕಿಂಚಿತ್ತು ಎಡವಿದರು ದೊಡ್ಡ ಪ್ರಮಾದವೆ ಆಗುತ್ತೆ. ಆದ್ರೂ ಧೈರ್ಯ ಮಾಡಿ ಪೌರಾಣಿಕ ಸಿನಿಮಾ ಮಾಡಿ ಈಗ ರಿಲೀಸ್ ಹಂತದಲ್ಲಿದ್ದಾರೆ ಮುನಿರತ್ನ.

    English summary
    Kannada actor Darshan reveals why he is giving first preference to Historical and Mythical cinema.
    Monday, August 5, 2019, 12:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X