Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ರಾಂತಿ vs ಪಠಾಣ್: ಬೆಂಗಳೂರು ಅಡ್ವಾನ್ಸ್ ಬುಕಿಂಗ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದವರಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಚಿತ್ರ ಗಣರಾಜ್ಯೋತ್ಸವದ ವಿಶೇಷ ದಿನದಂದು ತೆರೆಗೆ ಬರುತ್ತಿದ್ದು, ಚಿತ್ರದ ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. ಇನ್ನು ಈ ವರ್ಷ ತೆರೆಗೆ ಬರುತ್ತಿರುವ ಕನ್ನಡದ ಮೊದಲ ಸ್ಟಾರ್ ಸಿನಿಮಾ ಇದಾಗಿದೆ. 2021ರ ಮಾರ್ಚ್ ತಿಂಗಳ ಬಳಿಕ ಬರೋಬ್ಬರಿ 22 ತಿಂಗಳ ನಂತರ ತೆರೆಗೆ ಬರಲಿರುವ ದರ್ಶನ್ ನಟನೆಯ ಚಿತ್ರ ಇದಾಗಿದ್ದು, ಅಭಿಮಾನಿಗಳು ಟಿಕೆಟ್ ಖರೀದಿಗಾಗಿ ಮುಗಿಬಿದ್ದಿದ್ದಾರೆ.
ಕ್ರಾಂತಿ ಜನವರಿ 26ರಂದು ತೆರೆಗೆ ಬರುತ್ತಿದ್ದರೆ, ಇದಕ್ಕೂ ಹಿಂದಿನ ದಿನ ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪಠಾಣ್ ತೆರೆಗೆ ಬರುತ್ತಿದೆ. ಕ್ರಾಂತಿ ಚಿತ್ರ 22 ತಿಂಗಳುಗಳ ಬಳಿಕ ತೆರೆಗೆ ಬರಲಿರುವ ದರ್ಶನ್ ಅಭಿನಯದ ಚಿತ್ರವಾದರೆ, ಶಾರುಖ್ ಖಾನ್ ನಟನೆಯ ಪಠಾಣ್ ಬರೋಬ್ಬರಿ 4 ವರ್ಷಗಳ ಬಳಿಕ ತೆರೆಗೆ ಬರಲಿರುವ ಶಾರುಖ್ ಖಾನ್ ನಟನೆಯ ಚಿತ್ರವಾಗಿದೆ.
ಹೀಗಾಗಿ ಈ ಎರಡೂ ಚಿತ್ರಗಳ ಮೇಲೂ ಸಹ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ ಹಾಗೂ ಎಲ್ಲಾ ಭಾಷೆಗಳ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಈ ಎರಡೂ ಚಿತ್ರಗಳ ನಡುವೆ ಪೈಪೋಟಿಯೂ ಸಹ ಏರ್ಪಟ್ಟಿದೆ. ಅದರಲ್ಲಿಯೂ ವಿಶೇಷವಾಗಿ ಈ ಎರಡೂ ಚಿತ್ರಗಳ ಶೋಸ್ ಮತ್ತು ಅಡ್ವಾನ್ಸ್ ಬುಕಿಂಗ್ ವಿಷಯವಾಗಿ ರೇಸ್ ಏರ್ಪಟ್ಟಿದೆ ಎಂದೇ ಹೇಳಬಹುದು. ಹಾಗಿದ್ದರೆ ಈ ಎರಡೂ ಚಿತ್ರಗಳು ಜನವರಿ 23ರ ಸೋಮವಾರದ ಅಂತ್ಯಕ್ಕೆ ಮುಂಗಡ ಬುಕಿಂಗ್‌ನಲ್ಲಿ ಎಷ್ಟು ಗಳಿಕೆ ಮಾಡಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಮುಂಗಡ ಬುಕಿಂಗ್‌ನಲ್ಲಿ ಹೆಚ್ಚು ಗಳಿಸಿದ ಚಿತ್ರ?
ಪಠಾಣ್ ಚಿತ್ರದ ಮುಂಗಡ ಬುಕಿಂಗ್ ಬುಕಿಂಗ್ ಆರಂಭವಾಗಿ ಜನವರಿ 23ರ ಸೋಮವಾರ ಮೂರು ದಿನಗಳು ಕಳೆದಿದ್ದು, ಈ ಮೂರು ದಿನಗಳ ಪೈಕಿ ಪಠಾಣ್ ಕರ್ನಾಟಕದಲ್ಲಿ 2.38 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಅತ್ತ ದರ್ಶನ್ ನಟನೆಯ ಕ್ರಾಂತಿ ಚಿತ್ರ ಜನವರಿ 23ರ ಸೋಮವಾರಕ್ಕೆ ಎರಡು ದಿನಗಳ ಅಡ್ವಾನ್ಸ್ ಬುಕಿಂಗ್ ಅನ್ನು ಪೂರೈಸಿದ್ದು, 3.25 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ಕರ್ನಾಟಕದ ಮುಂಗಡ ಬುಕಿಂಗ್ ಕಲೆಕ್ಷನ್‌ನಲ್ಲಿ ಪಠಾಣ್ ಚಿತ್ರವನ್ನು ಕ್ರಾಂತಿ ಚಿತ್ರ ಹಿಂದಿಕ್ಕೆ ಮೇಲುಗೈ ಸಾಧಿಸಿದೆ.

ಬಿಡುಗಡೆ ದಿನ ಪಠಾಣ್‌ಗೆ ಹೆಚ್ಚು ಪ್ರದರ್ಶನಗಳು
ಪಠಾಣ್ ಚಿತ್ರ ಬೆಂಗಳೂರಿನಲ್ಲಿ ತನ್ನ ಬಿಡುಗಡೆ ದಿನದಂದು ( ಜವನರಿ 25 ) 683 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನು ದರ್ಶನ್ ನಟನೆಯ ಕ್ರಾಂತಿ ಚಿತ್ರ ತನ್ನ ಬಿಡುಗಡೆ ದಿನ ( ಜನವರಿ 26 ) ಬೆಂಗಳೂರಿನಲ್ಲಿ 549 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ವಿಷಯದ ಕುರಿತು ಚರ್ಚೆಗಳು ಜೋರಾಗಿದ್ದು, ಪಠಾಣ್ ಚಿತ್ರಕ್ಕೆ ತೆರೆದಿರುವಷ್ಟು ಪ್ರದರ್ಶನಗಳನ್ನು ಕ್ರಾಂತಿ ಚಿತ್ರಕ್ಕೇಕೆ ತೆರೆದಿಲ್ಲ ಎಂಬ ಅಸಮಾಧಾನ ಮೂಡಿದೆ. ಇನ್ನು ಎರಡೂ ಚಿತ್ರಗಳೂ ಬೇರೆ ಬೇರೆ ದಿನ ಬಿಡುಗಡೆಯಾಗುತ್ತಿದ್ದರೂ ಹಿಂದಿ ಚಿತ್ರಕ್ಕಿಂತ ಕನ್ನಡ ಚಿತ್ರದ ಮುಂಗಡ ಬುಕಿಂಗ್‌ಗೆ ಕಡಿಮೆ ಪ್ರದರ್ಶನವನ್ನು ತೆರೆದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಕ್ರಾಂತಿ ಬಿಡುಗಡೆಯಾಗಲಿರುವ ದಿನ ಅಂದರೆ ಜನವರಿ 26ರಂದು ಬೆಂಗಳೂರಿನಲ್ಲಿ ಪಠಾಣ್ ಚಿತ್ರಕ್ಕೆ ಸದ್ಯ 357 ಪ್ರದರ್ಶನಗಳು ಮಾತ್ರ ಲಭಿಸಿದ್ದು, ಪಠಾಣ್ ತೆರೆಕಂಡ ಮರುದಿನವೇ ಬೆಂಗಳೂರಿನಲ್ಲಿ ತನ್ನ ಅರ್ಧದಷ್ಟು ಶೋಗಳನ್ನು ಕ್ರಾಂತಿ ಚಿತ್ರದ ಪ್ರಭಾವದಿಂದ ಕಳೆದುಕೊಳ್ಳಲಿದೆ.

ಕ್ರಾಂತಿ ಚಿತ್ರಕ್ಕೆ ಹೆಚ್ಚು ಮುಂಜಾನೆ ಪ್ರದರ್ಶನ
ಇನ್ನು ಕ್ರಾಂತಿ ಚಿತ್ರಕ್ಕೆ ಬಿಡುಗಡೆ ದಿನ ಬರೋಬ್ಬರಿ ಬೆಂಗಳೂರು ನಗರದಲ್ಲಿ 108 ಪ್ರದರ್ಶನಗಳನ್ನು ಪಡೆದುಕೊಂಡಿದ್ದು, ಬೆಂಗಳೂರಿನಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಪಡೆದುಕೊಂಡ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಈ ಪಟ್ಟಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರ 149 ಪ್ರದರ್ಶನಗಳ ಜತೆಗೆ ಎರಡನೇ ಸ್ಥಾನದಲ್ಲಿದ್ದರೆ, 255 ಮುಂಜಾನೆ ಪ್ರದರ್ಶನಗಳನ್ನು ಕಂಡಿದ್ದ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.