»   » ಅಪರೂಪದ ಅಭಿಮಾನಿಯನ್ನ ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್

ಅಪರೂಪದ ಅಭಿಮಾನಿಯನ್ನ ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್

Posted By:
Subscribe to Filmibeat Kannada
ದರ್ಶನ ಭೇಟಿ ಮಾಡಿದ ಅಪರೂಪದ ಅಭಿಮಾನಿ ಶ್ಯಾಮ್ ಗಜ ತೂಗುದೀಪ | Filmibeat Kannada

ಸಿನಿಮಾರಂಗದಲ್ಲಿ ಚಾಲ್ತಿಯಲ್ಲಿರುವ ಸ್ಟಾರ್ ಗಳ ಹೆಸರುಗಳನ್ನ ಅಭಿಮಾನಿಗಳು ಕೈಗಳ ಮೇಲೆ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ, ಇನ್ನು ಕೆಲವು ಅಭಿಮಾನಿಗಳು ಕೈಗಳ ಮೇಲೆ ಸ್ಟಾರ್ ಗಳಿಂದ ಆಟೋಗ್ರಾಫ್ ಪಡೆದುಕೊಂಡು ನಂತರ ಅದರ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ನೋಡುವುದಕ್ಕೆ ಸಿಗುತ್ತೆ.

ಕಳೆದ ತಿಂಗಳು ಇದೇ ಫಿಲ್ಮೀಬೀಟ್ ನಲ್ಲಿ ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯ ಸ್ಟೋರಿಯನ್ನ ಓದಿದ್ರಿ . ಆ ಅಭಿಮಾನಿ ಈಗ ಸಖತ್ ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿ ಹಾಕಿಸಿಕೊಂಡಿರುವ ಹಚ್ಚೆ ಕೂಡ ಟ್ರೇಂಡ್ ಸೆಟ್ ಮಾಡುತ್ತಿದೆ.

ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ 'ತೂಗುದೀಪ ಶ್ರೀನಿವಾಸ್'

ಹಾಗಾದ್ರೆ ತೂಗುದೀಪ ಶ್ರೀನಿವಾಸ್ ಅವರ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಯಾರು? ಅವರದ್ದೇ ಹಚ್ಚೆ ಹಾಕಿಸಿಕೊಳ್ಳಲು ಕಾರಣವೇನು? ಟ್ಯಾಟೂ ಹಾಕಿಸಿಕೊಂಡವರು ಚಾಲೆಂಜಿಂಗ್ ಸ್ಟಾರ್ ಅವರನ್ನ ಭೇಟಿ ಮಾಡಿದ್ದು ಹೇಗೆ? ಟ್ರೇಂಡ್ ಸೆಟ್ ಮಾಡುತ್ತಿರುವ ಹಚ್ಚೆ ಹೇಗೆ ಫೇಮಸ್ ಆಗಿದೆ? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಅಪರೂಪದ ಅಭಿಮಾನಿ ಶ್ಯಾಮ್

ಶ್ಯಾಮ್ ಮೂಲತಃ ಬೆಂಗಳೂರಿನವರು. ಸಾಕಷ್ಟು ವರ್ಷಗಳಿಂದ ದರ್ಶನ್ ಹಾಗೂ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರ ಅಭಿಮಾನಿ. ಚಾಲೆಂಜಿಂಗ್ ಸ್ಟಾರ್ ಅಭಿನಯದ ಪ್ರತಿ ಸಿನಿಮಾವನ್ನ ನೋಡುವುದರ ಜೊತೆಗೆ ಚಿತ್ರ ಬಿಡುಗಡೆಯ ದಿನವನ್ನ ಹಬ್ಬದಂತೆ ಆಚರಣೆ ಮಾಡುತ್ತಾರೆ.

ಹೆಸರು ಬದಲಿಸಿಕೊಂಡ ಅಭಿಮಾನಿ

ದರ್ಶನ್ ಅವರ ಮೇಲಿನ ಅಭಿಮಾನಕ್ಕಾಗಿ ಶ್ಯಾಮ್ ತಮ್ಮ ಹೆಸರಿನ ಜೊತೆಗೆ ಗಜ ತೂಗುದೀಪ ಎಂದು ಸೇರಿಸಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳ ಸಮೂಹದಲ್ಲಿ ಶ್ಯಾಮ್ ಗಜ ತೂಗುದೀಪ ಎಂದೇ ಗುರುತಿಸಿಕೊಂಡಿದ್ದಾರೆ.

ಅಪ್ಪನ ಹಚ್ಚೆಯನ್ನ ಮೆಚ್ಚಿದ ಮಗ

ಹಚ್ಚೆ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ ಶ್ಯಾಮ್ ದರ್ಶನ್ ಅವರನ್ನ ಭೇಟಿ ಮಾಡಿದ್ದಾರೆ. ತಾವು ಹಾಕಿಸಿಕೊಂಡಿರುವ ಹಚ್ಚೆಯನ್ನ ದರ್ಶನ್ ಅವರಿಗೆ ತೋರಿಸಿ ಮೆಚ್ಚುಗೆಯನ್ನ ಪಡೆದಿದ್ದಾರೆ.

ಟ್ರೇಂಡ್ ಸೆಟ್ ಮಾಡುತ್ತಿದೆ ಹಚ್ಚೆ

ತೂಗುದೀಪ ಶ್ರೀನಿವಾಸ್ ಅವರ ಹಚ್ಚೆ ಅಭಿಮಾನಿಗಳ ಮಧ್ಯೆ ಟ್ರೇಂಡ್ ಸೆಟ್ ಮಾಡುತ್ತಿದೆ. ಸಾಕಷ್ಟು ಜನರು ಇದೇ ರೀತಿಯ ಟ್ಯಾಟೂ ಹಾಕಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ. ಸದ್ಯ ಹಚ್ಚೆ ಹಾಕಿಸಿಕೊಂಡಿರುವ ಶ್ಯಾಮ್ ಅವರ ಜೊತೆ ನಿಂತು ಟ್ಯಾಟೂ ತೋರಿಸಿಕೊಂಡು ಫೋಟೋಗಳನ್ನ ತೆಗಿಸಿಕೊಳ್ಳುತ್ತಿದ್ದಾರೆ.

English summary
Kannada actor darshan meet his fan shyam gaja toogudeepa who has been tattooed Thugugudeep Srinivas. is tattoo photo viral in social media

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X