For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸಾರಥಿ ಭೇಟಿಯಾದ ಸ್ಯಾಂಡಲ್ ವುಡ್ ಸಾರಥಿ: ಫೋಟೋ ಹಂಚಿಕೊಂಡ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಯಶಸ್ಸಿನ ಸಂತಸದಲ್ಲಿದ್ದಾರೆ. ನಿರೀಕ್ಷೆಗೂ ಮೀರಿ ರಾಬರ್ಟ್ ಗೆಲುವು ಸಾಧಿಸಿದ್ದು, ಇಡೀ ಸಿನಿಮಾತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ. ಇದೇ ಖುಷಿಯಲ್ಲಿ ದರ್ಶನ್ ಇತ್ತೀಚಿಗಷ್ಟೆ ಗುರು ರಾಯರ ಸನ್ನಿಧಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು.

  Darshan meets real Sarathi who used to be KSRTC bus driver of darshan's school

  ಮಂತ್ರಾಲಯದಿಂದ ವಾಪಸ್ ಆಗುತ್ತಿದ್ದಂತೆ ಮತ್ತೋರ್ವ ವಿಶೇಷ ವ್ಯಕ್ತಿಯನ್ನು ದರ್ಶನ್ ಭೇಟಿಯಾಗಿದ್ದಾರೆ. ದರ್ಶನ್ ಅವರನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಡ್ರೈವರ್ ಅವರನ್ನು ದರ್ಶನ್ ಭೇಟಿಯಾಗಿದ್ದಾರೆ.

  ಫೋಟೋ ವೈರಲ್: ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್

  80ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ದರ್ಶನ್ ಅವರ ಪ್ರೀತಿಯ ಚಾಲಕನ ಮನೆಗೆ ಡಿ ಬಾಸ್ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್ ನೋಡಿ ಇಡೀ ಕುಟುಂಬ ಸಂತಸ ಪಟ್ಟಿದೆ. ಮೈಸೂರಿನಲ್ಲಿರುವ ಚಾಲಕನ ಪುಟ್ಟ ಮನೆಗೆ ದರ್ಶನ್ ಮತ್ತು ಸ್ನೇಹಿತರು ಎಂಟ್ರಿ ಕೊಟ್ಟಿರುವ ಫೋಟೋವನ್ನು ಚಾಲೆಂಜಿಂಗ್ ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಸಾರಥಿ ನಿಜವಾದ ಸಾರಥಿಯನ್ನು ಭೇಟಿಯಾಗಿದ್ದು. ನಮ್ಮ ಶಾಲೆಯ ಕೆ ಎಸ್ ಆರ್ ಟಿ ಸಿ ಡ್ರೈವರ್ ಆಗಿದ್ದವರು. ಇಂದು ಅವರನ್ನು ಭೇಟಿಯಾಗಿ ಅವರ 80ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ ಅವರ ಆಶೀರ್ವಾದ ಪಡೆದೆವು' ಎಂದು ಬರೆದುಕೊಂಡಿದ್ದಾರೆ.

  ದರ್ಶನ್ ಅವರ ಈ ಸರಳತೆಯ ಗುಣಗಳೇ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿರುವುದು ಮತ್ತು ಅಭಿಮಾನಿ ಬಳಗ ದೊಡ್ಡದಾಗಿ ಬೆಳೆಯಲು ಕಾರಣವಾಗಿದ್ದು. ಕಷ್ಟದಲ್ಲಿ ಬೆಳೆದು ಬಂದ ದರ್ಶನ್ ತಾನು ನಡೆದು ಬಂದ ದಾರಿಯನ್ನು ಎಂದು ಮರೆತಿಲ್ಲ. ತನ್ನ ಬೆಳವಣಿಗೆಗೆ ಹಾಗೂ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಂತ ಎಲ್ಲರನ್ನು ದರ್ಶನ್ ನೆನಪಿಸಿಕೊಳ್ಳುತ್ತಾರೆ ಮತ್ತು ಅವರಿಗೆ ನೆರವಾಗಿದ್ದಾರೆ.

  ದರ್ಶನ್ ಅವರು ರಿಯಲ್ ಸಾರಥಿ ಭೇಟಿಯಾದ ಫೋಟೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರಳತೆಯ ಸಾಮ್ರಾಟ್ ಎಂದು ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ. ಸದ್ಯ ರಾಬರ್ಟ್ ಮುಗಿಸಿರುವ ದರ್ಶನ್ ಮುಂದಿನ ಸಿನಿಮಾ ಯಾವುದು ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

  English summary
  Actor Darshan meets real Sarathi who used to be KSRTC bus driver of darshan's school.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X