For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ರಾಜವೀರ ಮದಕರಿ ನಾಯಕ' ಸೆಟ್‌ನಿಂದ ಹೊರಬಿದ್ದ ಲೇಟೆಸ್ಟ್ ಸುದ್ದಿ

  |

  ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನಿನ್ನೆಯಷ್ಟೆ ಬಿಡುಗಡೆ ಆಗಿರುವ ''ಡಿ..ಡಿ..ಡಿ..ಬಾಸ್'' ಹಾಡು ಸಖತ್ ಹಿಟ್ ಆಗಿದ್ದು, ಅಭಿಮಾನಿಗಳ ಬಾಯಲ್ಲಿ ನಲಿದಾಡುತ್ತಿದೆ.

  ಹಾಡು ಬಿಡುಗಡೆ ಆದ ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ದರ್ಶನ್ ಅಭಿನಯದ 'ರಾಜವೀರ ಮದಕರಿ ನಾಯಕ' ಚಿತ್ರತಂಡ ನೀಡಿದೆ.

  ಡಿ ಡಿ ಡಿ... 'ಡಿ ಬಾಸ್' ಅಭಿಮಾನಿಗಳು ಫಿದಾ: 'ರಾಬರ್ಟ್' ಹಾಡು ಹೇಗಿದೆ?ಡಿ ಡಿ ಡಿ... 'ಡಿ ಬಾಸ್' ಅಭಿಮಾನಿಗಳು ಫಿದಾ: 'ರಾಬರ್ಟ್' ಹಾಡು ಹೇಗಿದೆ?

  ದರ್ಶನ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿರುವ 'ರಾಜವೀರ ಮದಕರಿ ನಾಯಕ' ಚಿತ್ರತಂಡದ ಸೆಟ್‌ನಿಂದ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಚಿತ್ರತಂಡವು ಶರವೇಗದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿ ಎರಡನೇ ಹಂತದತ್ತ ಸಾಗಿದೆ.

  ಮತ್ತೊಂದು ಬ್ಲಾಕ್ ಬಸ್ಟರ್ ಗೆ ದರ್ಶನ್ ಸಜ್ಜು

  ಮತ್ತೊಂದು ಬ್ಲಾಕ್ ಬಸ್ಟರ್ ಗೆ ದರ್ಶನ್ ಸಜ್ಜು

  ಐತಿಹಾಸಿಕ ಕತೆ ಆಧರಿತ ಚಿತ್ರದಲ್ಲಿ ದರ್ಶನ್ ಮದಕರಿ ನಾಯಕರಾಗಿ ಮಿಂಚಲಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣನಾಗಿ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ದರ್ಶನ್, 'ರಾಜವೀರ ಮದಕರಿ ನಾಯಕ' ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಅನ್ನು ಖಾತೆಗೆ ಹಾಕಿಕೊಳ್ಳಲು ಸಜ್ಜಾಗಿದ್ದಾರೆ.

  ಸಂಸದೆ ಸುಮಲತಾ ಬಣ್ಣ ಹಚ್ಚಿದ್ದಾರೆ

  ಸಂಸದೆ ಸುಮಲತಾ ಬಣ್ಣ ಹಚ್ಚಿದ್ದಾರೆ

  ಚಿತ್ರದಲ್ಲಿ ಮಂಡ್ಯ ಸಂಸದೆ ಸುಮಲತಾ ಅವರು ರಾಜಮಾತೆ ಪಾತ್ರ ನಿರ್ವಹಿಸಿದ್ದು, ಅವರೂ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಂಸದೆ ಆದ ಬಳಿಕ ಸುಮಲತಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ದರ್ಶನ್-ಸುಮಲತಾ ಬಹು ದಿನಗಳ ಬಳಿಗೆ ಒಟ್ಟಿಗೆ ನಟಿಸುತ್ತಿದ್ದಾರೆ.

  ವಿದೇಶದಲ್ಲಿ ನಡೆಯಬೇಕಿದ್ದ ಸ್ಟಾರ್ ನಟರ ಶೂಟಿಂಗ್ ರದ್ದುವಿದೇಶದಲ್ಲಿ ನಡೆಯಬೇಕಿದ್ದ ಸ್ಟಾರ್ ನಟರ ಶೂಟಿಂಗ್ ರದ್ದು

  ಚಿತ್ರದ ಕುರಿತು ವಿವಾದಗಳೂ ಎದ್ದಿದ್ದವು

  ಚಿತ್ರದ ಕುರಿತು ವಿವಾದಗಳೂ ಎದ್ದಿದ್ದವು

  ಈ ಚಿತ್ರದ ಕುರಿತು ವಿವಾದಗಳೂ ಎದ್ದಿದ್ದವು. ಮದಕರಿ ನಾಯಕ ಪಾತ್ರವನ್ನು ಸುದೀಪ್ ಮಾಡಬೇಕು ಎಂದು ಕೆಲವು ಸ್ವಾಮೀಜಿಗಳು, ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಕೊನೆಗೆ ದರ್ಶನ್ ಅವರೇ ಮದಕರಿ ನಾಯಕರಾಗಿ ಬಣ್ಣ ಹಚ್ಚಿದ್ದಾರೆ.

  ಎಲ್ಲೆಲ್ಲಿ ಚಿತ್ರೀಕರಣ?

  ಎಲ್ಲೆಲ್ಲಿ ಚಿತ್ರೀಕರಣ?

  ಚಿತ್ರವು ವೇಣು ಅವರ ಕಾದಂಬರಿ ಆಧರಿತ ಎಂದು ಹೇಳಲಾಗುತ್ತಿದೆ. ಚಿತ್ರೀಕರಣವು ಕೇರಳದ, ಚಿತ್ರದುರ್ಗ, ಮುಂಬೈ ಗಳಲ್ಲಿ ನಡೆಯಲಿದೆ. ಕೇರಳದಲ್ಲಿ ಚಿತ್ರೀಕರಣ ಈಗಷ್ಟೆ ಮುಗಿದಿದೆ. ದೊಡ್ಡ-ದೊಡ್ಡ ಸೆಟ್‌ಗಳನ್ನು ಚಿತ್ರೀಕರಣಕ್ಕಾಗಿ ಚಿತ್ರತಂಡ ನಿರ್ಮಿಸಿದೆ. ಗ್ರಾಫಿಕ್ಸ್ ಭಾಗವೂ ಹೆಚ್ಚಿಗೆ ಇರಲಿದೆ.

  ದರ್ಶನ್ 'ರಾಬರ್ಟ್' ಚಿತ್ರದಿಂದ ಸಿಗುವ ಸರ್ಪ್ರೈಸ್ ಇದೇನಾ?ದರ್ಶನ್ 'ರಾಬರ್ಟ್' ಚಿತ್ರದಿಂದ ಸಿಗುವ ಸರ್ಪ್ರೈಸ್ ಇದೇನಾ?

  English summary
  Darshan's movie Rajaveera Madakari Nayaka completes its first schedule of shooting in Kerala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X