For Quick Alerts
  ALLOW NOTIFICATIONS  
  For Daily Alerts

  ಆಷಾಢ ಶುಕ್ರವಾರ: ಚಾಮುಂಡಿ ತಾಯಿ ದರ್ಶನಕ್ಕೆ ದರ್ಶನ್ ಗಿಲ್ಲ ಅವಕಾಶ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿವರ್ಷ ಮೊದಲ ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ದರ್ಶನ ಮಾಡುತ್ತಿದ್ದರು. ಎಲ್ಲೇ ಇದ್ದರೂ ಆಷಾಢ ಶುಕ್ರವಾರದಂದು ತಪ್ಪದೇ ಚಾಮುಂಡಿ ಬೆಟ್ಟಕ್ಕೆ ಹಾಜರಾಗುತ್ತಿದ್ದರು. ಆದರೆ ಈ ಬಾರಿ ಚಾಮುಂಡಿ ತಾಯಿಯ ದರ್ಶನ ದರ್ಶನ್ ಗೆ ಮಿಸ್ ಆಗಿದೆ.

  ಕೊರೊನಾ ಕಾರಣದಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಲಾಗಿದೆ. ಆಷಾಢ ಶುಕ್ರವಾರ ಮತ್ತು ವಾರಾಂತ್ಯದಲ್ಲಿ ಚಾಮುಂಡಿಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತಾದಿಗಳು ಬರುತ್ತಿದ್ದರು. ಆದರೆ ಈ ಬಾರಿ ಕೊರೊನಾ ನಿಯಮದ ಕಾರಣ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

  ತಾವರಕಟ್ಟೆ ಮುಖ್ಯದ್ವಾರದ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪೊಲೀಸ್ ಭದ್ರತೆ ಹಾಕಲಾಗಿದೆ. ದರ್ಶನ್ ಅವರಿಗೂ ತಾಯಿಯ ದರ್ಶನಕ್ಕೆ ಅನುಮತಿ ನೀಡಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡೇಶ್ವರಿ ತಾಯಿಯ ಅಪ್ಪಟ ಭಕ್ತ. ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಆಷಾಢ ಬಂತೆಂದ್ರೆ ತಪ್ಪದೆ ಭೇಟಿಯಾಗಿ ತಾಯಿಯ ದರ್ಶನ ಪಡೆದು ವಿಶೇಷವಾಗಿ ಪೂಜೆ ಸಲ್ಲಿಸುತ್ತಿದ್ದರು.

  ಆಷಾಢದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಧಿದೇವತೆಯ ಆರಾಧನೆ ಮಾಡುತ್ತಿದ್ದರು. ಆದರೆ ಈ ಬಾರಿ ತಾಯಿಯ ದರ್ಶನಕ್ಕೆ ಕೊರೊನಾ ಅಡ್ಡಿಯಾಗಿದೆ. ದರ್ಶನ ಸಿಗದಿದ್ದರೂ ಚಾಮುಂಡಿತಾಯಿ ಪಾದಕ್ಕೆ ಪೂಜೆ ಸಲ್ಲಿಸುವ ಸಾಧ್ಯತೆ ಇದೆ.

  ಚಾಮುಂಡಿತಾಯಿ ದರ್ಶನಕ್ಕಾಗಿಯೇ ದರ್ಶನ್ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದರು. ಸದ್ಯ ಮೈಸೂರಿನ ತೋಟದ ಮನೆಯಲ್ಲಿ ದರ್ಶನ್ ಉಳಿದುಕೊಂಡಿದ್ದಾರೆ. ನಿನ್ನೆ ರಾತ್ರಿ ಸಂದೇಶ್ ನಾಗರಾಜ್ ಭೇಟಿಯಾಗಿರುವ ದರ್ಶನ್ ಕೆಲಸಮಯ ಮಾತುಕತೆ ನಡೆಸಿ ಬಳಿಕ ಫಾರ್ಮ್ ಹೌಸ್ ಗೆ ತೆರಳಿದ್ದರು.

  ಹೋಟೆಲ್ ಸಪ್ಲೇಯರ್ ಗೆ ಹೊಡೆದ ದರ್ಶನ್ ಅಂಡ್ ಗ್ಯಾಂಗ್ : ಇಂದ್ರಜಿತ್ ಲಂಕೇಶ್ | Filmibeat Kannada

  ಇನ್ನು ದರ್ಶನ್ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿರುವ ಕಾರಣ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯೂ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಮೂಲಗಳ ಪ್ರಕಾರ ದರ್ಶನ್ ಮೌನಕ್ಕೆ ಶರಣಾಗಲಿದ್ದಾರೆ ಎನ್ನಲಾಗುತ್ತಿದೆ. ಏನೇ ಇದ್ದರೂ ಕಾನೂನಿನ ಮೂಲಕ ಹೋರಾಟ ನಡೆಸಲು ದರ್ಶನ್ ಮುಂದಾಗಿದ್ದು, ಮಾಧ್ಯಮಕ್ಕೆ ಯಾವುದೇ ಹೇಳಿಕೆ ನೀಡದಿರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಪ್ರೆಸ್ ಮೀಟ್ ನಡೆಸಿದರೆ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಗಳಿಗೆ ಉತ್ತರ ನೀಡುತ್ತಾರಾ ಎನ್ನುವುದು ಸದ್ಯದ ಕುತೂಹಲ.

  English summary
  Actor Darshan not visit to Chamundeshwari temple because of Covid 19 protocol.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X