Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಆ ಕೇಸ್ ಬಗ್ಗೆ ಮಾಹಿತಿ ಕೊಟ್ಟ ದಾಸ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ಫಾರ್ಮ್ ಹೌಸ್‌ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿತ್ತು. ಒಂದೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ ಬಗ್ಗೆ ದರ್ಶನ್ ಮತ್ತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಟಿ. ನರಸೀಪುರ ರಸ್ತೆಯಲ್ಲಿರುವ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಶಿವಮೊಗ್ಗ ಮೂಲದ ಕುಟುಂಬ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಅದೇ ತೋಟದಲ್ಲಿ ಕುದುರೆಗೆ ಲಾಳ ಹೊಡೆಯುವ ಕೆಲಸ ಮಾಡುತ್ತಿದ್ದವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯ ಪೋಷಕರು ದೂರು ದಾಖಲಿಸಿದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ದರ್ಶನ್
ಯಾಕೆ
ಪ್ರಾಣಿಗಳ
ಮೇಲೆ
ಸಿನಿಮಾ
ಮಾಡ್ತಿಲ್ಲ?
ಅಂಬಿಯ
ಮೃಗಾಯಲ
ಕಥೆ
ಹೇಳಿದ್ದೇಕೆ?
ಆ ಬಳಿಕ ಈ ಕೇಸ್ ಏನಾಯ್ತು ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ. ಇತ್ತೀಚೆಗ ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಮಾಡುವುದಕ್ಕೆ ಮೈಸೂರಿಗೆ ಹೋಗಿದ್ದ ವೇಳೆ ಅತ್ಯಾಚಾರದ ಪ್ರಕರಣದ ಕೇಸ್ ಏನಾಯ್ತು? ಅನ್ನೋದನ್ನು ದರ್ಶನ್ ತಿಳಿಸಿದ್ದಾರೆ. ಹಾಗೇ ಈ ಪ್ರಕರಣದ ಆರೋಪಿಗೆ ಶಿಕ್ಷೆಯ ಕೊಡಿಸಲು ಹೋರಾಡಿದ್ದೇವೆ. ಆ ಬಗ್ಗೆ ಯಾರೂ ಮಾತಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆರೋಪಿಗೆ 43 ವರ್ಷ ಶಿಕ್ಷೆ
ಒಂದೂವರೆ ವರ್ಷದ ಹಿಂದೆ ದರ್ಶನ್ ತೋಟದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಶಿಕ್ಷೆ ಕೊಡಿಸಲು ಮುಂದಾಗಿದ್ದರು. ಮಾಧ್ಯಮದವರ ಮುಂದೆ ದರ್ಶನ್ ದಾಖಲೆ ಸಮೇತ ಬಂದಿದ್ದರು. ಅತ್ಯಾಚಾರದ ಆರೋಪಿಗೀಗ ಸುಮಾರು 43 ವರ್ಷ ಶಿಕ್ಷೆಯಾಗಿದೆ. ಇದು ಹೆಣ್ಣು ಮಕ್ಕಳನ್ನು ಮುಟ್ಟುವುದಕ್ಕೂ ಭಯ ಪಡುಬೇಕು. ಅಷ್ಟು ದೊಡ್ಡ ಕ್ರಾಂತಿ. ಈ ಬಗ್ಗೆ ಯಾರೂ ಮಾತಾಡಲೇ ಇಲ್ಲ. ದರ್ಶನ್ ತೋಟದಲ್ಲಿ ನೆಡೆದಿದ್ದನ್ನು ಮಾತ್ರ ಪ್ರಸಾರ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಥೆಯನ್ನು
ಯಾರು
ಕೇಳಿ
ಒಪ್ಪಿಕೊಂಡ
ನಂತರ
ದರ್ಶನ್
ನಟಿಸಲು
ಒಪ್ಪಿಕೊಳ್ತಾರೆ?
ಇಂಥ
ಕಥೆ
ಮಾತ್ರ
ಬೇಡ
ಅಂತಾರೆ
ದರ್ಶನ್!

ದರ್ಶನ್ ಮತ್ತೆ ಬೇಸರ
"ಸ್ಟೋರಿ ಶುರು ಮಾಡುತ್ತೀರಾ. ನಾಲ್ಕು ಐದು ದಿನ ನಿರಂತರವಾಗಿ ಓಡಿಸುತ್ತೀರ. ಯಾವುದಾದರೂ ಒಂದು ಸ್ಟೋರಿ ಅಂತ್ಯ ಅಂತ ಕೊಟ್ಟಿದ್ದೀರಾ? ಒಂದೂವರೆ ವರ್ಷದ ಹಿಂದೆ ನನ್ನ ತೋಟದಲ್ಲಿ ಒಂದು ಘಟನೆ ನಡೀತು. ಒಂದು ಮಗು ಮೇಲೆ. ಆ ನಟನ ತೋಟದಲ್ಲಿ ಹಂಗೆ ಮಾಡುತ್ತಿದ್ದಾನೆ. ಹಿಂಗೆ ಮಾಡುತ್ತಿದ್ದಾನೆ ಅಂತ ಬಂತು. ತೋಟ ಮಾಡಿದ್ದೀವಿ ಏನೋ ಆಗುತ್ತೆ ಅಂತ ಸುಮ್ಮನಾದ್ರಾ. ಅವನಿಗೆ ಏನು ಶಿಕ್ಷೆ ಆಯ್ತು ಅಂತ ಯಾರಾದ್ರೂ ಹಾಕಿದ್ರಾ?" ಎಂದು ದರ್ಶನ್ ಪ್ರಶ್ನೆ ಮಾಡಿದ್ದಾರೆ.

ಆತನಿಗೆ ಶಿಕ್ಷೆ ಏನಾಯ್ತು ಯಾಕೆ ಹಾಕಿಲ್ಲ?
"ಅವತ್ತು ಬರೀ ದರ್ಶನ್ ತೋಟದ್ದು ಅಂತ ಹಾಕಿದ್ರಿ. ಆದರೆ, ಆತನಿಗೆ ಶಿಕ್ಷೆ ಆಯ್ತು ಅಂತ ಯಾಕೆ ಹಾಕಿಲ್ಲ. ಈ ಘಟನೆ ನಡೀತು. ಇಷ್ಟು ದಿನ ಹೋರಾಡಿದ್ರು. ಅವನಿಗೆ ಇಷ್ಟು ವರ್ಷ ಶಿಕ್ಷೆ ಆಯ್ತು ಅಂತ ಯಾರಾದ್ರೂ ಹಾಕಿದ್ರಾ? ಆ ಕಥೆ ಒಂದು ಅಂತ್ಯ ಅಂತ ಕೊಡಿ. " ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಸಿನಿಮಾದಲ್ಲಿ ಎಂಡ್ ಇಲ್ಲಾ ಅಂದ್ರೆ ಹೇಗೆ?
" ಸಿನಿಮಾ ಶುರು ಮಾಡಿ ಅದಕ್ಕೆ ಎಂಡ್ ಕೊಡದೇ ಹೋದರೆ ಏನು ಮಾಡುತ್ತೀರಾ? ಹಾಗೇ ಒಂದು ಸೈಡ್ ಇರಬಾರದು. ಇನ್ಮುಂದೆ ಯಾರೇ ಆಗಿದ್ದರೂ, ಒಂದು ಹೆಣ್ಣನ್ನು ಮುಟ್ಟಬೇಕಾದರೆ, ಕಣ್ಮುಂದೆ ಬರಬೇಕು ಈ ಕೇಸ್." ಎಂದು ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.