For Quick Alerts
  ALLOW NOTIFICATIONS  
  For Daily Alerts

  ಹೊಸಪೇಟೆಯಲ್ಲಿ ಅಪ್ಪು ಪುತ್ಥಳಿಗೆ ದರ್ಶನ್ ಮಾಲಾರ್ಪಣೆ: ಫ್ಯಾನ್ಸ್ ವಾರ್‌ಗೆ ತೆರೆ ಎಳೆದ ಚಾಲೆಂಜಿಂಗ್ ಸ್ಟಾರ್

  By ಫಿಲ್ಮಿಬೀಟ್ ಡೆಸ್ಕ್
  |

  'ಕ್ರಾಂತಿ' ಚಿತ್ರದ 'ಬೊಂಬೆ ಬೊಂಬೆ' ಹೊಸಪೇಟೆಯಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ. ಆದರೆ ಕಳೆದೆರಡು ದಿನಗಳಿಂದ ಈ ವಿಚಾರವಾಗಿ ನಟ ದರ್ಶನ್ ಹಾಗೂ ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಭಾರೀ ತಿಕ್ಕಾಟ ನಡೀತಿತ್ತು. ಇನ್ನು ಸಾಂಗ್‌ ರಿಲೀಸ್‌ಗಿಂತ ಮುಂಚೆ 'ಕ್ರಾಂತಿ' ಚಿತ್ರದ ಬ್ಯಾನರ್ ಹರಿದು ಕೆಲವರು ಅಟ್ಟಹಾಸ ಮೆರೆದಿದ್ದರು. ಆದರೆ ಸಂಜೆ ದರ್ಶನ್, ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ವೇದಿಕೆ ಏರಿದ್ದಾರೆ.

  ಕಳೆದ ಕೆಲ ದಿನಗಳಿಂದ ನಟ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ವಾರ್ ನಡೀತಿದೆ. 'ಕ್ರಾಂತಿ' ಚಿತ್ರದ ಹಾಡನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡ್ತಾರೆ ಎಂದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಶುರುವಾಯಿತು. ಹೊಸಪೇಟೆಯಲ್ಲಿ ಯಾರ ಅಭಿಮಾನಿಗಳು ಹೆಚ್ಚು? ಯಾರ ಅಬ್ಬರ, ಹಾವಳಿ ಜೋರು ಎನ್ನುವ ಕಿತ್ತಾಟ ಶುರುವಾಗಿತ್ತು. ಹೊಸಪೇಟೆಯಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಅಪ್ಪು ಫ್ಯಾನ್ಸ್ ಒಂದ್ಕಡೆ ಹೇಳಿದ್ರೆ, ಮತ್ತೊಂದು ಕಡೆ ದರ್ಶನ್ ಫ್ಯಾನ್ಸ್ ನಾವು ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದರು.

  ಸೋಶಿಯಲ್ ಮೀಡಿಯಾದಲ್ಲಿ ಇದ್ದ ಗಲಾಟೆ ಇವತ್ತು ಹೊಸಪೇಟೆಯ ವಾಲ್ಮೀಕಿ ವೃತ್ತದವರೆಗೆ ಸಾಗಿತ್ತು. ಆದರೆ ಸಂಜೆ ದರ್ಶನ್ ವೇದಿಕೆ ಏರುವ ಮುನ್ನ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಎಲ್ಲ ಗಲಾಟೆ ಗದ್ದಲಕ್ಕೆ ತೆರೆ ಎಳೆದರು. ದೊಡ್ಮನೆ ಅಂದರೆ ನಟ ದರ್ಶನ್‌ಗೆ ಮೊದಲಿನಿಂದಲೂ ಅಭಿಮಾನ. ಸಾಕಷ್ಟು ಸಂದರ್ಭಗಳಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಸುಖಾ ಸುಮ್ಮನೆ ಇಂತಹ ಫ್ಯಾನ್ಸ್‌ ವಾರ್ ಮಾಡುತ್ತಿರುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

  darshan-pays-tribute-to-appu-in-hospete-before-kranti-movie-bombe-bombe-song-release

  ವಿ. ಹರಿಕೃಷ್ಣ ಸಂಗೀತದ 'ಬೊಂಬೆ ಬೊಂಬೆ' ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಇದೆ. ಸೋನು ನಿಗಮ್ ವಾಯ್ಸ್‌ನಲ್ಲಿ ಸಾಂಗ್ ಅಭಿಮಾನಿಗಳ ಮನಗೆದ್ದಿದೆ. ಹಾಡಿನಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಕೆಮಿಸ್ಟ್ರಿ ಸೂಪರ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಸಾಂಗ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಮೂಡಿ ಬಂದಿದೆ. ಜನವರಿ 26ಕ್ಕೆ 'ಕ್ರಾಂತಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರ್ತಿದೆ. ವಿ. ಹರಿಕೃಷ್ಣ ನಿರ್ದೇಶನದ ಚಿತ್ರಕ್ಕೆ ಶೈಲಜಾ ನಾಗ್, ಬಿ. ಸುರೇಶ ದಂಪತಿ ಬಂಡವಾಳ ಹಾಡಿದ್ದಾರೆ.

  English summary
  Darshan Pays tribute To Appu in hospete Before Kranti movie Bombe bombe song Release. Pan-India film Kranti to release in theatres on January 26, 2023. Know more.
  Sunday, December 18, 2022, 21:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X