»   » ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?

ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?

Posted By:
Subscribe to Filmibeat Kannada

'ಗಲಾಟೆ ಸಂಸಾರ'ದ ಸುದ್ದಿ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈವಾಹಿಕ ಬದುಕಿನ ಬಗ್ಗೆ ಮತ್ತೊಂದು 'ಬ್ರೇಕಿಂಗ್ ನ್ಯೂಸ್' ಹೊರಬಿದ್ದಿದೆ.

ಎರಡು ವರ್ಷಗಳ ಹಿಂದೆಯೇ ಪತ್ನಿ ವಿಜಯಲಕ್ಷ್ಮಿ ಗೆ ವಿಚ್ಛೇದನ ನೀಡಲು 'ದಾಸ' ದರ್ಶನ್ ಮುಂದಾಗಿದ್ದರು ಅಂತ ಟಿವಿ9 ಸುದ್ದಿ ವಾಹಿನಿ ವರದಿ ಮಾಡಿದೆ. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್ ]

ವರ್ಷಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಂಬಿ ಎಣಿಸಿದ್ದ ನಟ ದರ್ಶನ್, ತಮ್ಮ ವೈವಾಹಿಕ ಬದುಕಿಗೆ ಫುಲ್ ಸ್ಟಾಪ್ ಇಡುವ ಬಗ್ಗೆ ಮನಸ್ಸು ಮಾಡಿದ್ದರು ಎನ್ನಲಾಗಿದೆ. ಮುಂದೆ ಓದಿ....

ಎರಡು ವರ್ಷಗಳ ಹಿಂದೆಯೇ ಇತ್ತು ವಿಚ್ಛೇದನ ಪ್ಲಾನ್!

ಪತ್ನಿ ಮೇಲೆ ಕೈ ಮಾಡಿ ರಾಜ್ಯದ ಮೂಲೆ ಮೂಲೆಯಲ್ಲೂ ಸುದ್ದಿ ಮಾಡಿದ್ದ ನಟ ದರ್ಶನ್, ಎರಡು ವರ್ಷಗಳ ಹಿಂದೆಯೇ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದರು ಅಂತ ಟಿವಿ9 ವಾಹಿನಿ ವರದಿ ಮಾಡಿದೆ. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ಪತ್ನಿಯನ್ನ ಒಪ್ಪಿಸಲು ವಿಫಲ

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ದರ್ಶನ್ ಮುಂದಾಗಿ, ಈ ಬಗ್ಗೆ ವಿಜಯಲಕ್ಷ್ಮಿ ರವರಿಂದ ಸಮ್ಮತಿ ಪಡೆಯಲು ದರ್ಶನ್ ಶತಪ್ರಯತ್ನ ಪಟ್ಟಿದ್ರಂತೆ. ['ವೀಕೆಂಡ್ ವಿತ್ ರಮೇಶ್' ಶೋಗೆ ವಿಜಯಲಕ್ಷ್ಮಿ ಕಾಲಿಡ್ಲಿಲ್ಲ! ಯಾಕೆ?]

ವಿಚ್ಛೇದನ ನೀಡಲು ಒಪ್ಪದ ಪತ್ನಿ

''ನಾನು ಒಪ್ಪಲ್ಲ, ನೀವೇ ವಿಚ್ಛೇದನ ಪಡೆದುಕೊಳ್ಳಿ'' ಅಂತ ಪತ್ನಿ ವಿಜಯಲಕ್ಷ್ಮಿ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ರಂತೆ. [ದರ್ಶನ್ 'ಸಂಸಾರ ಗಲಾಟೆ'ಯನ್ನು ನಾನು ಸರಿ ಮಾಡುತ್ತೇನೆ: ಅಂಬರೀಶ್]

ಆಸ್ತಿ ವಿಚಾರದಲ್ಲಿ ಜಗಳ

ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವೆ ಆಸ್ತಿ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. [ದರ್ಶನ್ 'ಗಲಾಟೆ ಸಂಸಾರ'ಕ್ಕೆ ಕಾರಣವಾಗಿರುವ Audi ಕಾರ್ ಕುರಿತು..]

ವಿಚ್ಛೇದನ ವಿಫಲ ಆಗಲು ಆಸ್ತಿ ಹಂಚಿಕೆ ವಿವಾದ ಕಾರಣ

ಇನ್ನೊಂದು ಮೂಲದ ಪ್ರಕಾರ, ವಿಚ್ಛೇದನ ಪ್ರಸ್ತಾಪ ವಿಫಲ ಆಗಲು ಆಸ್ತಿ ಹಂಚಿಕೆಯಲ್ಲಿ ಒಮ್ಮತ ಮೂಡದಿರಲು ಕಾರಣ ಎನ್ನಲಾಗಿದೆ. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ವಿಜಯಲಕ್ಷ್ಮಿ ಹೆಸರಿನಲ್ಲಿದೆ ಕೋಟಿ ಕೋಟಿ ಆಸ್ತಿ

ನಟ ದರ್ಶನ್ ರವರ 75% ಆಸ್ತಿ, ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿದೆ. ತಮ್ಮ ಆಸ್ತಿಯನ್ನ ತಮ್ಮ ಹೆಸರಿಗೆ ವಾಪಸ್ ಮಾಡಿಕೊಡುವಂತೆ ದರ್ಶನ್ ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ದಂಪತಿ ಮಧ್ಯೆ ಅನೇಕ ಬಾರಿ ಗಲಾಟೆ ನಡೆದಿತ್ತು ಅಂತ ವರದಿ ಆಗಿದೆ.

ವಿಚ್ಛೇದನ ನೀಡಲು ದರ್ಶನ್ ಇಟ್ಟ ಪ್ರಸ್ತಾಪ

ಪತ್ನಿ ವಿಜಯಲಕ್ಷ್ಮಿ ರವರಿಂದ ವಿಚ್ಛೇದನ ಪಡೆಯಲು ಹೆಚ್.ಎಸ್.ಆರ್.ಲೇಔಟ್ ನಲ್ಲಿರುವ 80*50 ಸೈಟ್, ಚಂದ್ರಾಲೇಔಟ್ ನಲ್ಲಿರುವ ತಿಂಗಳಿಗೆ 5 ಲಕ್ಷ ಬಾಡಿಗೆ ಬರುವ ವಾಣಿಜ್ಯ ಮಳಿಗೆ ಸೇರಿದಂತೆ ಒಂದು ಕಾರು ನೀಡುವುದಕ್ಕೆ ನಟ ದರ್ಶನ್ ಪ್ರಸ್ತಾಪ ಮಾಡಿದ್ದರು.

ವಿಜಯಲಕ್ಷ್ಮಿ ಪಟ್ಟು ಬೇರೆ!

ದರ್ಶನ್ ಪ್ರಸ್ತಾಪಕ್ಕೆ ಒಪ್ಪದ ಪತ್ನಿ ವಿಜಯಲಕ್ಷ್ಮಿ ಉಳಿದ ಆಸ್ತಿಗಾಗಿಯೂ ಪಟ್ಟು ಹಿಡಿದಿದ್ದರು. ಆದ್ರೆ, ಇದಕ್ಕೆ ದರ್ಶನ್ ಒಪ್ಪಿಕೊಳ್ಳಲಿಲ್ಲ. ಸೆಟ್ಲ್ ಮೆಂಟ್ ವಿಚಾರವಾಗಿ ಮೂರು ಬಾರಿ ಹಿರಿಯರ ಜೊತೆ ಚರ್ಚೆ ಮಾಡಿದರೂ, ವಿಚ್ಛೇದನ ಪಡೆಯಲು ಒಮ್ಮತ ನಿರ್ಧಾರಕ್ಕೆ ಬರಲು ದಂಪತಿ ವಿಫಲವಾಗಿದೆ.

ಮಗನ ಸುಪರ್ದಿ ಬಗ್ಗೆ ಗಲಾಟೆ

ಮಗ ವಿನೀಶ್ ತಮ್ಮ ಸುಪರ್ದಿಗೆ ನೀಡಬೇಕು ಅಂತ ದರ್ಶನ್ ಹೇಳಿದ್ದರು. ಆದ್ರೆ ಇದಕ್ಕೂ ವಿಜಯಲಕ್ಷ್ಮಿ ಒಪ್ಪಿಕೊಳ್ಳಲಿಲ್ಲ.

ಮುರಿದು ಬಿದ್ದ ವಿಚ್ಛೇದನ ಮಾತುಕತೆ

ಒಮ್ಮತ ನಿರ್ಧಾರಕ್ಕೆ ಬರಲು ವಿಫಲವಾದ ಕಾರಣ ವಿಚ್ಛೇದನ ಮಾತುಕತೆ ಮುರಿದುಬಿದ್ದಿದೆ. ಅಂದಿನಿಂದ ವಿಜಯಲಕ್ಷ್ಮಿ ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್ ನಲ್ಲಿರುವ ಫ್ಲ್ಯಾಟ್ ನಲ್ಲಿ ಪ್ರತ್ಯೇಕ ವಾಸ ಮಾಡಲು ಶುರುಮಾಡಿದ್ದಾರೆ.

ಫ್ಲ್ಯಾಟ್ ಗೆ ಬಾಡಿಗೆ ಕಟ್ಟೋದು ದರ್ಶನ್!

ಖುದ್ದು ನಟ ದರ್ಶನ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ವಿಜಯಲಕ್ಷ್ಮಿ ವಾಸವಿರುವ ಹೊಸಕೆರೆಹಳ್ಳಿಯ ಪ್ರಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್ ನಲ್ಲಿರುವ ಫ್ಲ್ಯಾಟ್ ಗೆ ಬಾಡಿಗೆ ಕಟ್ಟುತ್ತಿರುವವರು ನಟ ದರ್ಶನ್.

English summary
TV9 Kannada Channel has reported that Kannada Actor Darshan had planned to divorce his wife Vijayalakshmi 2 years back.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada