For Quick Alerts
  ALLOW NOTIFICATIONS  
  For Daily Alerts

  'ಬಜಾರ್' ಹೀರೋಗೆ ಪ್ರಾಂಕ್ ಕಾಲ್ ಮಾಡಿ ಕಾಲೆಳೆದ ದರ್ಶನ್

  |
  Bazar kannada movie : ಪ್ರ್ಯಾಂಕ್ ಕಾಲ್​ನಲ್ಲಿ ಕಾಲೆಳೆದ ದರ್ಶನ್..! | FILMIBEAT KANNADA

  ಸಿಂಪಲ್ ಸುನಿ ನಿರ್ದೇಶನ ಬಜಾರ್ ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬಜಾರ್ ಚಿತ್ರದ ಮೂಲಕ ದರ್ಶನ್ ಶಿಷ್ಯ ಅಂತಾನೇ ಗುರುತಿಸಿಕೊಂಡಿರುವ ಧನ್ವೀರ್ ನಾಯಕನಾಗಿ ಇಂಡಸ್ಟ್ರಿ ಪ್ರವೇಶ ಮಾಡ್ತಿದ್ದಾರೆ.

  ಮೊದಲ ಸಿನಿಮಾಗೆ ಡಿ ಬಾಸ್ ದರ್ಶನ್ ಹಲವು ರೀತಿಯಲ್ಲಿ ಬೆಂಬಲವಾಗಿ ನಿಂತು ಚಿತ್ರವನ್ನ ಮತ್ತು ಧನ್ವೀರ್ ಅವರನ್ನ ಪ್ರೋತ್ಸಾಹಿಸಿದ್ದಾರೆ. ಇದೀಗ, ಸಿನಿಮಾ ಬಿಡುಗಡೆಗೂ ಹಿಂದಿನ ದಿನ ರಾತ್ರಿ ನಟ ಧನ್ವೀರ್ ಗೆ ಪ್ರಾಂಕ್ ಕಾಲ್ ಮಾಡಿ ಕಾಲೆಳೆದಿದ್ದಾರೆ.

  ತಮಿಳಿಗೆ ಹೊರಟ ಸುನಿ 'ಬಜಾರ್'?

  ಈ ವಿಷ್ಯವನ್ನ ಸ್ವತಃ ಧನ್ವೀರ್ ಅವರೇ ಹೇಳಿಕೊಂಡಿದ್ದಾರೆ. ''ಸಿನಿಮಾ ರಿಲೀಸ್ ಹಿಂದಿನ ದಿನ ಅನ್ ನೌನ್ ನಂಬರ್ ನಿಂದ ಕರೆ ಬರುತ್ತೆ. ನಾನು ನಿಮ್ಮ ಅಭಿಮಾನಿ ಎಂದು ಹೇಳಿ ಮಾತನಾಡಿದ್ರು. ಸ್ವಲ್ಪ ಸಮಯದ ಬಳಿಕ ಧ್ವನಿ ಕೇಳಿ ಗೊತ್ತಾಯ್ತು ಅದು ದರ್ಶನ್ ಸರ್ ಅಂತ. ನಾಳೆ ಸಿನಿಮಾ ರಿಲೀಸ್ ಆಗ್ತಿದೆ, ಭಯ ಪಡಬೇಡ. ಸಕ್ಸಸ್ ಆಗುತ್ತೆ, ಎಲ್ಲಾ ಥಿಯೇಟರ್ ಗೂ ಭೇಟಿ ಕೊಡು, ಎಲ್ಲ ಒಳ್ಳೆಯದಾಗುತ್ತೆ ಎಂದು ವಿಶ್ ಮಾಡಿದ್ರು ಎಂದು ಧನ್ವೀರ್ ತಿಳಿಸಿದರು.

  ಮರುದಿನ ಬೆಳಿಗ್ಗೆ ದರ್ಶನ್ ಅವರ ಮನೆಗೆ ಭೇಟಿ ನೀಡಿದ್ದ ಧನ್ವೀರ್, ಡಿ ಬಾಸ್ ಅವರ ಆಶೀರ್ವಾದ ಪಡೆದು, ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರಕ್ಕೆ ಆಗಮಿಸಿದ್ದರು.

  ಸುನಿ ತೋರಿಸಿದ 'ಬಜಾರ್' ವಿಮರ್ಶಕರಿಗೆ ಇಷ್ಟ ಆಯ್ತಾ.?

  ನಿರೀಕ್ಷೆಯಂತೆ ಬಜಾರ್ ಸಿನಿಮಾಗೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧನ್ವೀರ್ ನಟನೆಗೂ ಪ್ರಶಂಸೆ ವ್ಯಕ್ತವಾಗಿದೆ.

  ಇನ್ನುಳಿದಂತೆ ಧನ್ವೀರ್ ನಾಯಕನಾಗಿದ್ದು, ಅಧಿತಿ ಪ್ರಭುದೇವ ಹೀರೋಯಿನ್ ಆಗಿ ನಟಿಸಿದ್ದಾರೆ. ಸಾಧುಕೋಕಿಲಾ, ಶರತ್ ಲೋಹಿತಾಶ್ವ ಮುಖ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಸಂತೋಷ್ ಪಜಾಜೇ ಅವರ ಛಾಯಗ್ರಹಣವಿದೆ. ಭಾರತಿ ಫಿಲಂ ಪ್ರೊಡಕ್ಷನ್ ಮೂಲಕ ತಿಮ್ಮೇಗೌಡ ನಿರ್ಮಾಣ ಮಾಡಿದ್ದಾರೆ.

  English summary
  Darshan called to Dhanveer from an unknown number and spoke in a different voice. And Darshan said am your fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X