For Quick Alerts
  ALLOW NOTIFICATIONS  
  For Daily Alerts

  ಗೆಳೆಯನ ಬೈಕ್ ನಲ್ಲಿ ಡಿ ಬಾಸ್ ದರ್ಶನ್ ಸವಾರಿ

  By Naveen
  |
  ದರ್ಶನ ಹೊಸ ಐರಾವತದಲ್ಲಿ ಜಾಲಿ ರೈಡ್ | Filmibeat Kannada

  ನಟ ದರ್ಶನ್ ಗೆಳೆತನಕ್ಕೆ ಬೆಲೆ ಕೊಡುವ ವ್ಯಕ್ತಿ. ದೊಡ್ಡ ಸ್ಟಾರ್ ಆದರು, ಸಿನಿಮಾ ಕೆಲಸಗಳು ಎಷ್ಟೇ ಇದ್ದರೂ ದರ್ಶನ್ ಮಾತ್ರ ತಮ್ಮ ಸ್ನೇಹಿತರಿಗೆ ಇಂದಿಗೂ ಸಮಯ ಕೊಡುತ್ತಾರೆ. ಅವರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತಾರೆ. ಹೀಗಿರುವ ದರ್ಶನ್ ಸದ್ಯ ತಮ್ಮ ಗೆಳೆಯನ ಬೈಕ್ ಓಡಿಸಿದ್ದಾರೆ.

  ನಟ ಧರ್ಮ ಕೀರ್ತಿರಾಜ್ ಅವರ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಇದೀಗ ದರ್ಶನ್ ಓಡಿಸಿದ್ದಾರೆ. ನೈಟ್ ಡ್ರೆಸ್ ನಲ್ಲಿ ಡಿ ಬಾಸ್ ಐರಾವತ ಏರಿ ಕುಳಿತಿದ್ದಾರೆ. ಈ ವೇಳೆ ಧರ್ಮಕೀರ್ತಿ ರಾಜ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರಿಗೆ ಕಾರ್ ಬೈಕ್ ಅಂದರೆ ತುಂಬ ಕ್ರೇಜ್ ಇದ್ದು, ಈಗ ಒಂದ್ ರೌಂಡ್ ರಾಯಲ್ ಎನ್ ಫೀಲ್ಡ್ ಬೈಕ್ ಓಡಿಸಿ ಖುಷಿ ಪಟ್ಟಿದ್ದಾರೆ.

  'ಕುರುಕ್ಷೇತ್ರ' ನಂತರ ಮತ್ತೊಂದು ಪೌರಾಣಿಕ ಸಿನಿಮಾದಲ್ಲಿ ದರ್ಶನ್.! 'ಕುರುಕ್ಷೇತ್ರ' ನಂತರ ಮತ್ತೊಂದು ಪೌರಾಣಿಕ ಸಿನಿಮಾದಲ್ಲಿ ದರ್ಶನ್.!

  ಅಂದಹಾಗೆ, ದರ್ಶನ್ ತೂಗುದೀಪ ಶ್ರೀನಿವಾಸ್ ಅವರ ಮಗನಾದರೆ, ನಟ ಧರ್ಮಕೀರ್ತಿ ರಾಜ್ ಸಹ ಖ್ಯಾತ ಖಳ ನಟ ಕೀರ್ತಿ ರಾಜ್ ಅವರ ಪುತ್ರ. ಇನ್ನು ಧರ್ಮ ದರ್ಶನ್ ಅವರ ಬ್ಯಾನರ್ ನಲ್ಲಿ ಬಂದ 'ನವಗ್ರಹ' ಸಿನಿಮಾದ ಮೂಲಕ ಧರ್ಮ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ದರ್ಶನ್ ತಮ್ಮ 'ಕುರುಕ್ಷೇತ್ರ' ಸಿನಿಮಾದಲ್ಲಿ ಬಿಜಿ ಇದ್ದಾರೆ. ಈ ಚಿತ್ರದ ಕೆಲಸದ ನಡುವೆ ಸಹ ಸ್ನೇಹಿತರನ್ನು ಭೇಟಿ ಆಗಿ ಕಾಲ ಕಳೆದಿದ್ದಾರೆ.

  English summary
  Challenging Star Darshan rides Kannada actor Dharma Keerthiraj's Royal Enfield bike.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X