For Quick Alerts
  ALLOW NOTIFICATIONS  
  For Daily Alerts

  ಸೆಟ್ಟೇರಿತು 'ದರ್ಶನ್-ಮಿಲನ ಪ್ರಕಾಶ್' ಜೋಡಿಯ ಹೊಸ ಚಿತ್ರ

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಅಂತ ನೀವು ಫಿಲ್ಮಿ ಬೀಟ್ ನಲ್ಲಿ ಓದೀರುತ್ತೀರಾ. ಇದೀಗ, ದರ್ಶನ್ ಅಭಿನಯಸಲಿರುವ 49ನೇ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.

  ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಿಲನ ಪ್ರಕಾಶ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ಇತ್ತೀಚೇಗಷ್ಟೇ ಸೆಟ್ಟೇರಿದ್ದು, ಶೂಟಿಂಗ್ ಗೆ ತಯಾರಾಗಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್.!]

  ರಾಜರಾಜೇಶ್ವರಿ ನಗರದ ಚೌಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದರ್ಶನ್ ಅವರ 49ನೇ ಚಿತ್ರ ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡಿದೆ. ಚಿತ್ರದ ಮೊದಲ ದೃಶ್ಯಕ್ಕೆ ಕುಮಾರ್ ಬಂಗಾರಪ್ಪ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

  Darshan's 49th Movie launched

  ಇದೇ ಮೊದಲ ಬಾರಿಗೆ ಒಂದಾಗಿರುವ ದರ್ಶನ್-ಮಿಲನ ಪ್ರಕಾಶ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಸ್ಕ್ರಿಪ್ಟ್ ವರ್ಕ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸ ಕಂಪ್ಲೀಟ್ ಆಗಿದೆದ್ದು, ಇದೊಂದು ರೊಮ್ಯಾಂಟಿಕ್ ಡ್ರಾಮಾ ಎನ್ನಲಾಗುತ್ತಿದೆ.

  ದರ್ಶನ್ ಜತೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಡುಯೆಟ್ ಹಾಡಲಿದ್ದಾರಂತೆ. ಲೂಸಿಯಾ ಬೆಡಗಿ ಶೃತಿ ಹರಿಹರನ್ ಹಾಗೂ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಾಯಕಿಯಾಗಿರುವ ರಶ್ಮಿಕಾ ಮಂದಣ್ಣ ಚಾಲೆಂಜಿಂಗ್ ಸ್ಟಾರ್ ಜತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.[ದರ್ಶನ್ 49ನೇ ಚಿತ್ರಕ್ಕೆ ಒಬ್ಬರು ಶೃತಿ ಹರಿಹರನ್, ಮತ್ತೊಬ್ಬರು? ]

  ಇನ್ನೂ 'ಮಿಲನ' ಮತ್ತು 'ಶ್ರೀ' ಚಿತ್ರಗಳಿಗೆ ಬಂಡವಾಳ ಹಾಕಿದ್ದ ಪ್ರಕಾಶ್ ಸಂಬಂಧಿ ಕೆ.ಎಸ್.ದುಶ್ಯಂತ್ ಈ ಚಿತ್ರದ ನಿರ್ಮಾಪಕ. ಇನ್ನೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ. ಕೃಷ್ಣ ಕುಮಾರ್ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

  ಚಿತ್ರಕೃಪೆ: ಡಿ ಕಂಪನಿ, ಫ್ಯಾನ್ಸ್ ಅಸೋಸಿಯೇಶನ್

  English summary
  Challenging Star Darshan's 49th film launched in Bangalore silently. the as-yet-untitled film with director Prakash of Milana. the film will have two leading ladies opposite Dashan. Sruthi Hariharan and Rashmika mandanna being a part of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X