»   » ಎಕ್ಸ್ ಕ್ಲೂಸಿವ್: ದರ್ಶನ್ 51ನೇ ಸಿನಿಮಾದ ಬಗ್ಗೆ ಇದ್ದ ಡೌಟ್ ಕ್ಲಿಯರ್.!

ಎಕ್ಸ್ ಕ್ಲೂಸಿವ್: ದರ್ಶನ್ 51ನೇ ಸಿನಿಮಾದ ಬಗ್ಗೆ ಇದ್ದ ಡೌಟ್ ಕ್ಲಿಯರ್.!

Posted By:
Subscribe to Filmibeat Kannada

''ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ '51'ನೇ ಚಿತ್ರವನ್ನ ಯಾರು ನಿರ್ಮಾಣ ಮಾಡುತ್ತಾರೆ.?'' - ಈ ಒಂದು ಪ್ರಶ್ನೆ ಸಿನಿಪ್ರಿಯರ ವಲಯದಲ್ಲಿ ಮೂಡಲು ಕಾರಣ ಪೋಸ್ಟರ್ ಫಜೀತಿ.!

ನಿಮ್ಮೆಲ್ಲರ ಪ್ರೀತಿಯ 'ದಾಸ'ನ ಹುಟ್ಟುಹಬ್ಬದಂದು (ಫೆಬ್ರವರಿ 16), ಬಿ.ಸುರೇಶ್ ರವರು ದರ್ಶನ್ ರವರ 51ನೇ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ರು. ಹಾಗೇ, ಪತ್ರಿಕೆಗಳಲ್ಲಿ ದರ್ಶನ್ ರವರ 51ನೇ ಚಿತ್ರದ ಬಗ್ಗೆ ಸಂದೇಶ್ ನಾಗರಾಜ್ ಕೂಡ ಜಾಹೀರಾತು ಕೊಟ್ಟಿದ್ದರು. ಇವರಿಬ್ಬರಲ್ಲಿ ದರ್ಶನ್ 51ನೇ ಚಿತ್ರಕ್ಕೆ ಬಂಡವಾಳ ಹಾಕುವವರು ಯಾರು ಅಂತ ಜನ ತಲೆಗೆ ಹುಳಬಿಟ್ಟುಕೊಂಡಿದ್ದರು. ಅಂಥವರಿಗೆ ಇಲ್ಲಿದೆ ಉತ್ತರ...

ದರ್ಶನ್ 51ನೇ ಚಿತ್ರ ಫಿಕ್ಸ್.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 51ನೇ ಚಿತ್ರಕ್ಕೆ ನಿರ್ಮಾಪಕರು ಫಿಕ್ಸ್ ಆಗಿದ್ದಾರೆ. ಬಿಗ್ ಬಜೆಟ್ ನಲ್ಲಿ ಈ ಚಿತ್ರ ಕೂಡ ತಯಾರಾಗಲಿದೆ.[ದರ್ಶನ್ 'ಬಾಸ್' ಹುಟ್ಟುಹಬ್ಬ ವಿಶೇಷ: 51ನೇ ಸಿನಿಮಾ ಅನೌನ್ಸ್]

ದರ್ಶನ್ 51ನೇ ಚಿತ್ರಕ್ಕೆ ನಿರ್ಮಾಪಕರು ಯಾರು.?

ದರ್ಶನ್ ರವರ ಅತ್ಯಾಪ್ತ ನಿರ್ಮಾಪಕ ಸಂದೇಶ್ ನಾಗರಾಜ್ ರವರು 'ದಾಸ'ನ 51ನೇ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ.['ಡಿ' ಬಾಸ್ 51ನೇ ಸಿನಿಮಾ ಯಾರಿಗೆ.? ಪೋಸ್ಟರ್ ತಂದಿಟ್ಟ ಅನುಮಾನ.!]

ಟೈಟಲ್ ಕೂಡ ಫಿಕ್ಸ್ ಆಗಿದೆ

ಸಂದೇಶ್ ನಾಗರಾಜ್ ನಿರ್ಮಾಣ ಮಾಡಲಿರುವ ದರ್ಶನ್ ರವರ 51ನೇ ಚಿತ್ರಕ್ಕೆ 'ಒಡೆಯರ್' ಅಂತ ಟೈಟಲ್ ಕೂಡ ಫಿಕ್ಸ್ ಅಗಿದೆ.[ನಿಮ್ಮನ್ನೆಲ್ಲ ನಿಬ್ಬೆರಗಾಗಿಸುವ ನ್ಯೂಸ್ ಇದು.! ಅದು ದರ್ಶನ್ ಕುರಿತು.!]

ಸಂದೇಶ್ ನಾಗರಾಜ್ - ದರ್ಶನ್ ಕಾಂಬಿನೇಷನ್

ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಗಾಗಿ 'ಪ್ರಿನ್ಸ್', 'ಐರಾವತ' ಚಿತ್ರಗಳನ್ನ ನಿರ್ಮಿಸಿರುವ ಸಂದೇಶ್ ನಾಗರಾಜ್ ಹಾಗೂ ದರ್ಶನ್ ನಡುವೆ ಉತ್ತಮ ಬಾಂಧವ್ಯ ಇದೆ.

ದರ್ಶನ್ ಗೆ ದುಬಾರಿ ಉಡುಗೊರೆ ಕೊಟ್ಟ ಸಂದೇಶ್ ನಾಗರಾಜ್

ದರ್ಶನ್ ರವರ 40ನೇ ಹುಟ್ಟುಹಬ್ಬಕ್ಕಾಗಿ ಒಂದುವರೆ ಕೋಟಿ ರೂಪಾಯಿ ಮೌಲ್ಯದ Porsche ಕಾರ್ ನ ಉಡುಗೊರೆಯಾಗಿ ಸಂದೇಶ್ ನಾಗರಾಜ್ ಕೊಟ್ಟಿದ್ದಾರೆ.

English summary
Challenging Star Darshan starrer 51st Movie Produced by Sandesh Nagaraj is Titled as 'Wodeyar'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada