»   » 'ಜಗ್ಗುದಾದಾ' ಫಸ್ಟ್ ಡೇ ಫಸ್ಟ್ ಶೋ ನೋಡಲು ನೀವು ರೆಡಿನಾ?

'ಜಗ್ಗುದಾದಾ' ಫಸ್ಟ್ ಡೇ ಫಸ್ಟ್ ಶೋ ನೋಡಲು ನೀವು ರೆಡಿನಾ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜಗ್ಗುದಾದಾ' ನಾಳೆ (ಶುಕ್ರವಾರ, ಜೂನ್ 10) ಇಡೀ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಈಗಾಗಲೇ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಇಡೀ ಕರ್ನಾಟಕದಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ದರ್ಶನ್ ಅವರ 'ಜಗ್ಗುದಾದಾ' ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಚಿತ್ರಕ್ಕೆ ರಾಘವೇಂದ್ರ ಹೆಗಡೆ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.


Darshan's 'Jaggu Dada' is all set to release in over 300 theatres

ದರ್ಶನ್ ಅವರ ಅಭಿಮಾನಿಗಳು ಈಗಿನಿಂದಲೇ ಕಟೌಟ್ ಹಾಕೋದು, ಬ್ಯಾನರ್ ಕಟ್ಟೋದು, ಪೋಸ್ಟರ್ ಅಂಟಿಸೋದು ಅದು-ಇದು ಅಂತ ಕೆಲಸ ಶುರು ಹಚ್ಚಿಕೊಂಡು ಬಹಳ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ಸಂತೋಷ್' ಚಿತ್ರಮಂದಿರದಲ್ಲಿ 'ಜಗ್ಗುದಾದಾ' ಸಿನಿಮಾ ತೆರೆ ಕಾಣುತ್ತಿದೆ.['ನಾನೀಗ ಫ್ಲಾಪ್ ಸ್ಟಾರ್' ಅಂತ ದರ್ಶನ್ ಯಾಕಂದ್ರು?]


ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ ಕೆಲವು ಚಿತ್ರಮಂದಿರಗಳ ಎದುರು ಇವತ್ತೇ ಟಿಕೆಟ್ ಪಡೆಯಲು ಅಭಿಮಾನಿಗಳು ಸಾಲಾಗಿ ನಿಂತಿದ್ದು, ಸದ್ಯಕ್ಕೆ ಚಿತ್ರಮಂದಿರದ ಎದುರು ನೂಕು-ನುಗ್ಗಲು ಶುರುವಾಗಿದೆ.


ಇನ್ನು ನಾಳೆ ಕೆಲವು ಕಡೆ ಬೆಳ್ಳಂ-ಬೆಳಗ್ಗೆ ಚಿತ್ರ ಪ್ರದರ್ಶನ ಕಾಣುತ್ತಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶವಾದ ಆನೆಕಲ್ ನಲ್ಲಿ ಬೆಳಗ್ಗೆ 7 ಗಂಟೆಗೆ 'ಜಗ್ಗುದಾದಾ' ಚಿತ್ರದ ಪ್ರದರ್ಶನ ಶುರುವಾಗಲಿದೆ. ಈಗಾಗಲೇ ಆನ್ ಲೈನ್ ಬುಕ್ಕಿಂಗ್ ಕೂಡ ಓಪನ್ ಆಗಿದ್ದು, ಅಭಿಮಾನಿಗಳು ಈಗಲೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.


Darshan's 'Jaggu Dada' is all set to release in over 300 theatres

ಇನ್ನೇನು ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ ಅಂದ್ರೆ ಕೇಳೋದೇ ಬೇಡ ಬಿಡಿ. ಅಭಿಮಾನಿಗಳು ರೊಚ್ಚಿಗೆದ್ದು ಕುಣಿಯೋದು ಮಾತ್ರವಲ್ಲದೇ, ಸಿನಿಮಾ ಬಿಡುಗಡೆ ಆಗೋ ದಿನ ಹಬ್ಬದ ವಾತಾವರಣ ಸೃಷ್ಟಿ ಮಾಡುತ್ತಾರೆ.['ಜಗ್ಗೂದಾದಾ' ದರ್ಶನ್ ಯಾಕೆ ಹೀಗ್ಮಾಡ್ತಿದ್ದಾರೆ?]


ಅದೇನೇ ಇರಲಿ ನಾಳೆ ಬಿಗ್ ಬಜೆಟ್ ನ ಬಹು ನಿರೀಕ್ಷೆಯುಳ್ಳ 'ಜಗ್ಗುದಾದಾ' ರಿಲೀಸ್ ಆಗುತ್ತಿದ್ದು, ದರ್ಶನ್ ಅವರನ್ನು ಹೊಸ ಅವತಾರದಲ್ಲಿ ಕಾಣಲು ಅಭಿಮಾನಿಗಳು ಮಾತ್ರವಲ್ಲದೇ ಸಿನಿ ರಸಿಕರು ಕೂಡ ಕಾತರದಿಂದ ಕಾದಿದ್ದಾರೆ.


ನೀವು ನಾಳೆ 'ಜಗ್ಗುದಾದಾ' ಚಿತ್ರವನ್ನು ಯಾವ ಚಿತ್ರಮಂದಿರದಲ್ಲಿ?, ಎಷ್ಟು ಘಂಟೆ ಶೋ ನೋಡುತ್ತೀರಾ? ಅಂತ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.


-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಸಂತೋಷ್ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಸಂತೋಷ್ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಸಂತೋಷ್ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಸಂತೋಷ್ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

-ಟಿಕೆಟ್ ಗಾಗಿ ಕ್ಯೂ ನಿಂತ ಅಭಿಮಾನಿಗಳು

-ಟಿಕೆಟ್ ಗಾಗಿ ಕ್ಯೂ ನಿಂತ ಅಭಿಮಾನಿಗಳು

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

-ಕಟೌಟ್ ನಲ್ಲಿ ಶೃಂಗಾರಗೊಂಡಿರುವ ಚಿತ್ರಮಂದಿರ

English summary
Kannada Actor Darshan's Kannada Movie 'Jaggu Dada' all set to releasing tomorrow (June 10th, Friday). The movie is set to release in over 300 theaters in Karnataka. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada