»   » ಚಾಲೆಂಜಿಂಗ್ ಸ್ಟಾರ್ ಜೊತೆ ಮಿಂಚಿದ ಜ್ಯೂನಿಯರ್ ಸ್ಟಾರ್.!

ಚಾಲೆಂಜಿಂಗ್ ಸ್ಟಾರ್ ಜೊತೆ ಮಿಂಚಿದ ಜ್ಯೂನಿಯರ್ ಸ್ಟಾರ್.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಇಂದು ಬಿಡುಗಡೆ ಆಗಿದೆ. ಚಿತ್ರಕ್ಕೆ ಭರ್ಜರಿ ಓಪನ್ನಿಂಗ್ ಸಿಕ್ಕಿದೆ. ಮುಖ್ಯ ಚಿತ್ರಮಂದಿರ ಬೆಂಗಳೂರಿನ ಸಂತೋಷ್ ನಲ್ಲಿ ಅಭಿಮಾನಿಗಳು ಅದ್ದೂರಿಯಾಗಿ 'Mr.ಐರಾವತ'ನ ಸ್ವಾಗತಿಸಿದ್ದಾರೆ.

ಸಂತೋಷ್ ಚಿತ್ರಮಂದಿರದಲ್ಲಿ ನಿಮ್ಮಲ್ಲರ ಪ್ರೀತಿಯ 'ದಾಸ' ದರ್ಶನ್ ಬೃಹತ್ ಕಟೌಟ್ ಹಾಕಿರುವ ಸಂಗತಿ ನಿಮಗೆ ಗೊತ್ತಿದೆ. ಇದರ ಜೊತೆಗೆ ದರ್ಶನ್ ಪುತ್ರ ವಿನೀಶ್ ಕಟೌಟ್ ಕೂಡ ಹಾಕಿರುವುದು ವಿಶೇಷ.. [ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']


Darshan's son Vineesh's cut out in Santhosh theater

ಮೊಟ್ಟ ಮೊದಲ ಬಾರಿಗೆ ವಿನೀಶ್ 'Mr.ಐರಾವತ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಡಬ್ ಕೂಡ ಮಾಡಿದ್ದಾರೆ. ಅಷ್ಟಕ್ಕೂ ವಿನೀಶ್ 'Mr.ಐರಾವತ' ಚಿತ್ರಕ್ಕೆ ಎಂಟ್ರಿ ಕೊಡುವುದು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ.


ದಕ್ಷ ಐ.ಪಿ.ಎಸ್ ಅಧಿಕಾರಿ 'Mr.ಐರಾವತ'ನಂತೆ ತಾನು ಆಗ್ಬೇಕು ಅಂತ ವಿನೀಶ್ ಮುದ್ದಾಗಿ ಡೈಲಾಗ್ ಹೊಡೆಯುತ್ತಿದ್ದರೆ, ಪ್ರೇಕ್ಷಕರಿಂದ ಚಪ್ಪಾಳೆ-ಶಿಳ್ಳೆಗಳ ಅಬ್ಬರ ಶುರುವಾಗುತ್ತೆ. ಅಲ್ಲಿಗೆ, ತೂಗುದೀಪ ಕುಟುಂಬದಿಂದ A New Star is born.

English summary
Kannada Actor Darshan starrer Kannada Movie 'Mr.Airavata' has hit the screens today (October 1st). Along with Darshan's cut-out, Darshan's son Vineesh's cut out is also placed in Santhosh Theater, Bengaluru.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X