For Quick Alerts
  ALLOW NOTIFICATIONS  
  For Daily Alerts

  'ತಾರಕ್' ಟ್ರೈಲರ್ ಯಾಕೆ ರಿಲೀಸ್ ಆಗ್ಲಿಲ್ಲ? ಕಾರಣ ಇಲ್ಲಿದೆ.!

  By Bharath Kumar
  |
  darshan tarak trailer release delayed | To know the reason watch video | FIlmibeat Kannada

  ಎಲ್ಲ ಅಂದುಕೊಂಡಂತೆ ಆಗಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾದ ಟ್ರೈಲರ್ ನಿನ್ನೆ (ಬುಧವಾರ) ಬಿಡುಗಡೆಯಾಗಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ 'ತಾರಕ್' ಟ್ರೈಲರ್ ರಿಲೀಸ್ ಆಗ್ಲಿಲ್ಲ.

  ಕೊನೆ ಕ್ಷಣದವರೆಗೂ ಬಿಡುಗಡೆ ಆಗುತ್ತೆ ಎನ್ನಲಾಗುತ್ತಿದ್ದ 'ತಾರಕ್' ಟ್ರೈಲರ್ ಯಾಕೆ ರಿಲೀಸ್ ಆಗ್ಲಿಲ್ಲ ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳನ್ನ ಕಾಡುತ್ತಿದೆ. ಅದಕ್ಕೀಗ ಸ್ವತಃ ಚಿತ್ರತಂಡ ಉತ್ತರ ನೀಡಿದೆ.

  ಹಾಗಿದ್ರೆ, 'ತಾರಕ್' ಟ್ರೈಲರ್ ಯಾಕೆ ರಿಲೀಸ್ ಆಗಲಿಲ್ಲ ಎಂಬುದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ.....

  ಸಂಜೆ 6 ಗಂಟೆಗೆ ರಿಲೀಸ್ ಆಗಬೇಕಿತ್ತು

  ಸಂಜೆ 6 ಗಂಟೆಗೆ ರಿಲೀಸ್ ಆಗಬೇಕಿತ್ತು

  ಸೆಪ್ಟೆಂಬರ್ 21 ರಂದು ಸಂಜೆ 6 ಗಂಟೆಗೆ 'ತಾರಕ್' ಟ್ರೈಲರ್ ರಿಲೀಸ್ ಆಗುತ್ತೆ ಎಂದು ಸ್ವತಃ ಚಿತ್ರತಂಡ ಒಂದು ವಾರದ ಮುಂಚೆಯೇ ಹೇಳಿತ್ತು. ಅದರಂತೆ ನಿನ್ನೆ ದರ್ಶನ್ ಅಭಿಮಾನಿಗಳು, ಸಂಜೆಯಾಗುತ್ತಿದ್ದಂತೆ, ಫೇಸ್ ಬುಕ್, ಯ್ಯೂಟ್ಯೂಬ್ ಗೆ ಲಾಗ್ ಇನ್ ಆಗಿ ಕೂತಿದ್ದರು. ಆದ್ರೆ, ಸಂಜೆ 6 ಮುಗಿದು 9 ಆದರೂ ಟ್ರೈಲರ್ ಮಾತ್ರ ರಿಲೀಸ್ ಆಗಲೇ ಇಲ್ಲ.

  ದರ್ಶನ್ 'ತಾರಕ್'ಗೆ ಟಾಲಿವುಡ್ ಪ್ರಿನ್ಸ್ ಚಾಲೆಂಜ್.!

  ಟ್ರೈಲರ್ ರಿಲೀಸ್ ಆಗದಿರಲು ಕಾರಣ

  ಟ್ರೈಲರ್ ರಿಲೀಸ್ ಆಗದಿರಲು ಕಾರಣ

  'ತಾರಕ್' ಚಿತ್ರದ ಟ್ರೈಲರ್ ನಿನ್ನೆಯೇ ಬಿಡುಗಡೆಯಾಗಬೇಕಿತ್ತಂತೆ. ಅದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದರಂತೆ. ಆದ್ರೆ, ಅಂತಿಮ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಟ್ರೈಲರ್ ರಿಲೀಸ್ ಮಾಡಲು ಆಗ್ಲಿಲ್ಲವೆಂದು ಚಿತ್ರತಂಡ ಅಧಿಕೃತವಾಗಿ ಹೇಳಿದೆ.

  ಮತ್ಯಾವಾಗ ಟ್ರೈಲರ್ ಬರುತ್ತೆ?

  ಮತ್ಯಾವಾಗ ಟ್ರೈಲರ್ ಬರುತ್ತೆ?

  ನಿರೀಕ್ಷೆಯಂತೆ ಕಾದು ನಿರಾಸೆಯಾದ ಅಭಿಮಾನಿಗಳು ಇನ್ನು ಒಂದು ಕಾಯಲೇಬೇಕು. ಯಾಕಂದ್ರೆ, 'ತಾರಕ್' ಟ್ರೈಲರ್ ಸೆಪ್ಟೆಂಬರ್ 23 ರಂದು ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಿದ್ದಾರಂತೆ.

  ಇದೇ ಕಾರಣಕ್ಕೆ ನೋಡಿ 'ತೂಗುದೀಪ ಮನೆತನ'ಕ್ಕೆ ಇಷ್ಟೊಂದು ಗೌರವ ಇರುವುದು!

  ಹವಾ ಎಬ್ಬಿಸಿರುವ ತಾರಕ್

  ಹವಾ ಎಬ್ಬಿಸಿರುವ ತಾರಕ್

  ದರ್ಶನ್, ದೇವರಾಜ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ಅಭಿನಯದ ತಾರಕ್ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಿದೆ. ಟೀಸರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಈ ಟ್ರೈಲರ್ ಮೂಲಕ ರೆಕಾರ್ಡ್ ಬ್ರೇಕ್ ಮಾಡಲು ಸಜ್ಜಾಗುತ್ತಿರುವ 'ತಾರಕ್' ದಸರಾ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 29 ರಂದು ಚಿತ್ರಮಂದಿರಕ್ಕೆ ಬರ್ತಿದೆ.

  English summary
  Darshan starrer 'Tarak' trailer will release on 23rd September. The works on the clip was not completed on time, leading the makers to delay the release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X