For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನವೇ 3 ಕೋಟಿ ಗಳಿಸಿದ 'ಸಂಗೊಳ್ಳಿ ರಾಯಣ್ಣ'

  |

  ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ಬಿಡುಗಡೆಯಾದ ಮೊದಲ ದಿನವೇ (01 ನವೆಂಬರ್ 2012) ರು. 3 ಕೋಟಿ ಗಳಿಸಿದೆ. ರಾಜ್ಯಾದ್ಯಂತ 120 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಸಂಗೊಳ್ಳಿ ರಾಯಣ್ಣ', ಮಲ್ಟಿಫ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಕಡೆ 'ಹೌಸ್ ಫುಲ್' ಪ್ರದರ್ಶನ ದಾಖಲಿಸಿದೆ. ರು 3 ಕೋಟಿ ಬಾಚಿಕೊಳ್ಳುವ ಮೂಲಕ ಮೊದಲ ದಿನವೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಉತ್ತಮ ಶುಭಾರಂಭ ಮಾಡಿದೆ. 'ಚಿಂಗಾರಿ' ಚಿತ್ರದ ನಂತರ ಕಾಯುತ್ತಿದ್ದ ದರ್ಶನ್ ಅಭಿಮಾನಿಗಳು ಹಬ್ಬದೂಟ ಮಾಡಿದ್ದಾರೆ.

  ಸ್ವಾತಂತ್ರ್ಯ ಯೋಧ, ಮಹಾನ್ ದೇಶಭಕ್ತ 'ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ತೆರೆಗೆ ತರಲು ಕಳೆದ ಎರಡು ವರ್ಷಗಳಿಂದ ಶ್ರಮಿಸಲಾಗುತ್ತಿತ್ತು. ಕೊನೆಗೂ ನಿನ್ನೆ ತೆರೆಕಂಡಿರುವ ಚಿತ್ರವು, ಪ್ರೇಕ್ಷಕರನ್ನು ಖಂಡಿತವಾಗಿಯೂ ನಿರಾಸೆಗೊಳಿಸಿಲ್ಲ ಎಂಬ ವರದಿ ಎಲ್ಲಾ ಕಡೆಯಿಂದ ಬಂದಿದೆ. ನಾಗಣ್ಣ ನಿರ್ದೇಶನದ 'ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ರಾಯಣ್ಣನ ಊರಾದ ಬೆಳಗಾವಿಯ ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ.

  ಚಿತ್ರಕ್ಕೆ ಬರೋಬ್ಬರಿ ರು 32 ಕೋಟಿ ವೆಚ್ಚವಾಗಿದೆ ಎನ್ನಲಾಗಿದ್ದು ಇದು ಕನ್ನಡ ಚಿತ್ರರಂಗದಲ್ಲಿ ಈವರೆಗೆ ನಿರ್ಮಾಣವಾದ ಚಿತ್ರಗಳಲ್ಲೇ ಅತ್ಯಂತ ಬಿಗ್ ಬಜೆಟ್ ಚಿತ್ರ. ಈ ಚಿತ್ರದಲ್ಲಿ ಸುಮಾರು 200 ಕಲಾವಿದರು, 500 ಜೂನಿಯರ್ ಕಲಾವಿದರು ನಿಟಿಸಿದ್ದ 139 ದಿನಗಳ ಚಿತ್ರೀಕರಣದ ಮೂಲಕ ಈ ಐತಿಹಾಸಿಕ ಚಿತ್ರವನ್ನು ತೆರೆಗೆ ತರಲಾಗಿದೆ. ಹಿರಿಯ ನಟಿಯರಾದ ಜಯಪ್ರದಾ, ಉಮಾಶ್ರೀ ಸೇರಿದಂತೆ ಈ ಚಿತ್ರದಲ್ಲಿ ಪ್ರಬುದ್ಧ ಕಲಾವಿದರ ದಂಡೇ ನಟಿಸಿದೆ.

  ಒಟ್ಟಿನಲ್ಲಿ 'ಸಾರಥಿ' ನಂತರ ಬಂದಿದ್ದ ದರ್ಶನ್ ಅಭಿನಯದ 'ಚಿಂಗಾರಿ' ಚಿತ್ರವು ಪ್ರೇಕ್ಷಕರು ಹಾಗೂ ವಿಮರ್ಶಕರ ದೃಷ್ಟಿಯಲ್ಲಿ ಅಷ್ಟೇನೂ ಪ್ರಶಂಸೆ ಗಳಿಸಿರಲಿಲ್ಲ. ಬಾಕ್ಸ್ ಆಫೀಸ್ ದೃಷ್ಟಿಯಲ್ಲಿ ಕೂಡ ಚಿತ್ರ ಗಣನೀಯ ದಾಖಲೆಯನ್ನೇನೂ ಮೆರೆಯಲಿಲ್ಲ. ಆದರೆ ನಿರ್ಮಾಪಕರು ಹಾಗೂ ವಿತರಕರಿಗೆ ನಷ್ಟವೂ ಆಗಿರಲಿಲ್ಲ. ಇದೀಗ, ಬಹುಕಾಲದ ನಂತರ ಬಿಡುಗಡೆಯಾಗಿರುವ ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರವು ಮೊದಲ ದಿನ ರು. 3 ಕೋಟಿ ಗಳಿಸಿ ಶುಭಾರಂಭ ಮಾಡಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ. (ಒನ್ ಇಂಡಿಯಾ ಕನ್ನಡ)

  English summary
  Darshan movie 'Kranthiveera Sangolli Rayanna' collected Rs. 3 Crores on Firts Day. This movie is screening around more than 120 theaters all over Karnataka. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X