For Quick Alerts
  ALLOW NOTIFICATIONS  
  For Daily Alerts

  ದುಡ್ಡು ಕೊಟ್ಟರೆ ಕಾಚದಲ್ಲೂ ಓಡಿ ಹೋಗ್ತಾನೆ ಅಂತ ದರ್ಶನ್ ಗೆ ಗೇಲಿ ಮಾಡಿದ್ರಂತೆ.!

  |
  ದುಡ್ಡು ಕೊಟ್ರೆ ದರ್ಶನ್ ಬರೀ ಕಾಚದಲ್ಲೂ ಬರ್ತಾನೆ ಅಂದಿದ್ರಂತೆ..? | Munduvareda Adhyaya | Darshan | Aditya

  ''ದುಡ್ಡು ಕೊಟ್ಟರೆ ದರ್ಶನ್ ಕಾಚದಲ್ಲೂ ಓಡಿ ಹೋಗ್ತಾನೆ ಅಂತ ಗೇಲಿ ಮಾಡಿದ್ರು. ಪಾತ್ರಕ್ಕೋಸ್ಕರ ಹಾಗೆ ಮಾಡೋದ್ರಲ್ಲಿ ತಪ್ಪಿಲ್ಲ ಸ್ವಾಮಿ.!'' - ಹೀಗಂತ ಹೇಳಿದ್ದು ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅದು 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ.

  ಬಾಲು ಚಂದ್ರಶೇಖರ್ ನಿರ್ದೇಶನದ ಆದಿತ್ಯ, ಆಶಿಕಾ ಗೌಡ, ಸಂದೀಪ್, ಜೈಜಗದೀಶ್ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಿನ್ನೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿತ್ತು. ಈ ಸಮಾರಂಭದಲ್ಲಿ ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

  'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಮಾಡಿದ ದರ್ಶನ್, ನಟ ಆದಿತ್ಯ ಮತ್ತು ತಮ್ಮ ನಡುವಿನ ಸ್ನೇಹದ ಬಗ್ಗೆ ಮಾತಿಗಿಳಿದರು. ಕಾರ್ಯಕ್ರಮದಲ್ಲಿ ನಟ ದರ್ಶನ್ ಮಾತನಾಡಿದಿಷ್ಟು -

  ಫ್ರೆಂಡ್ ಶಿಪ್ ಮಾಡುವುದು ಸುಲಭ

  ಫ್ರೆಂಡ್ ಶಿಪ್ ಮಾಡುವುದು ಸುಲಭ

  ''ನನ್ನ ಮತ್ತು ಆದಿತ್ಯ ಸ್ನೇಹ ಸಿನಿಮಾಗೆ ಬರುವ ಮುಂಚಿನಿಂದಲೂ ಇದೆ. ಫ್ರೆಂಡ್ ಶಿಪ್ ಮಾಡೋದು ತುಂಬಾ ಸುಲಭ. ಆದ್ರೆ, ಆ ಫ್ರೆಂಡ್ ಶಿಪ್ ನ ಉಳಿಸಿಕೊಂಡು, ಬೆಳೆಸಿಕೊಂಡು, ಅಡ್ಜಸ್ಟ್ ಮಾಡಿಕೊಂಡು ಹೋಗೋದು ಬಹಳ ಕಷ್ಟ. ಯಾಕಂದ್ರೆ, ಇಬ್ಬರು ಸೇರ್ತೀವಿ ಅಂದಾಗ, ಮೆಂಟಾಲಿಟಿ ಬೇರೆ ಇರುತ್ತದೆ. ಅದು ಪ್ರೊಫೆಶನ್ ಆಗಿರಬಹುದು, ಮತ್ತೊಂದು ಆಗಿರಬಹುದು. ಈಗಲೂ ನಾನು-ಆದಿ ಕೂತಾಗ ಸಿನಿಮಾ ಬಗ್ಗೆ ಮಾತನಾಡುವುದಿಲ್ಲ'' - ನಟ ದರ್ಶನ್

  ದಚ್ಚು ಇದ್ದ ಕಡೆ ಕಿಚ್ಚನ ಕಡೆಗಣನೆ: 'ಮುಂದುವರೆದ' ಸುದೀಪ್-ದರ್ಶನ್ ಶೀತಲ ಸಮರ 'ಅಧ್ಯಾಯ'.!ದಚ್ಚು ಇದ್ದ ಕಡೆ ಕಿಚ್ಚನ ಕಡೆಗಣನೆ: 'ಮುಂದುವರೆದ' ಸುದೀಪ್-ದರ್ಶನ್ ಶೀತಲ ಸಮರ 'ಅಧ್ಯಾಯ'.!

  ದರ್ಶನ್ ಗೆ ದುಡ್ಡು ಕೊಟ್ಟರೆ ಬರೀ ಕಾಚದಲ್ಲೂ ಓಡಿ ಹೋಗ್ತಾನೆ.!

  ದರ್ಶನ್ ಗೆ ದುಡ್ಡು ಕೊಟ್ಟರೆ ಬರೀ ಕಾಚದಲ್ಲೂ ಓಡಿ ಹೋಗ್ತಾನೆ.!

  ''ದರ್ಶನ್ ಗೆ ದುಡ್ಡು ಕೊಟ್ರೆ ಬರೀ ಕಾಚದಲ್ಲೂ ಓಡಿ ಹೋಗ್ತಾನೆ ಅಂತ ಗೇಲಿ ಮಾಡಿದ್ರು. ಪಾತ್ರಕ್ಕೋಸ್ಕರ ಮಾಡೋದ್ರಲ್ಲಿ ತಪ್ಪಿಲ್ಲ ಸ್ವಾಮಿ. ಅದನ್ನ ಆದಿ ಮಾಡಿ ತೋರಿಸಿದ. ಆದಿ ಅಧ್ಯಾಯ ಶುರು ಆಗಿ ತುಂಬಾ ವರ್ಷಗಳು ಆಯ್ತು. ಹೀಗೆ ಅವನ ಅಧ್ಯಾಯ ಮುಂದುವರೆಯುತ್ತಿರಲಿ ಅಂತ ಹೇಳಲು ಇಷ್ಟ ಪಡುವೆ'' ಎಂದರು ನಟ ದರ್ಶನ್.

  ಶಾಕಿಂಗ್: ಸುದೀಪ್ ಫೋಟೋ ಯಾಕೆ ಹಾಕಿಲ್ಲ ಅಂತ ಕೇಳಿದ್ರೆ 'ನೋ ಕಾಮೆಂಟ್ಸ್' ಎಂದ ಆದಿತ್ಯ.!ಶಾಕಿಂಗ್: ಸುದೀಪ್ ಫೋಟೋ ಯಾಕೆ ಹಾಕಿಲ್ಲ ಅಂತ ಕೇಳಿದ್ರೆ 'ನೋ ಕಾಮೆಂಟ್ಸ್' ಎಂದ ಆದಿತ್ಯ.!

  ಆದಿತ್ಯ-ದರ್ಶನ್ ಸ್ನೇಹ

  ಆದಿತ್ಯ-ದರ್ಶನ್ ಸ್ನೇಹ

  ''ಇಬ್ಬರು ಎರಡು ಸಿನಿಮಾದಲ್ಲಿ ಒಟ್ಟಿಗೆ ಆಕ್ಟ್ ಮಾಡಿದ್ವಿ. 'ಸ್ನೇಹನಾ ಪ್ರೀತಿನಾ' ಮಾಡಬೇಕಾದ್ರೆ 'ಬರ್ತಿಯಾ' ಅಂತ ಕೇಳಿದೆ. ಆದಿ ಯಾವಾಗ ಬರಬೇಕು ಅಂತ ಕೇಳಿದ್ದು ಬಿಟ್ಟರೆ ಇನ್ನೇನೂ ಕೇಳಲಿಲ್ಲ. 'ಚಕ್ರವರ್ತಿ' ಕೂಡ ಅಷ್ಟೇ. ಆ ಸಿನಿಮಾದಲ್ಲಿ ನಾನು ಇರಬಹುದು. ಆದ್ರೆ, ಹೆಚ್ಚು ಪಾಯಿಂಟ್ ತೆಗೆದುಕೊಂಡವನು ಅವನೇ. ಬಹಳ ಖುಷಿ ನನಗೆ'' - ನಟ ದರ್ಶನ್

  ಮಗಾ.. ಮಗಾ...

  ಮಗಾ.. ಮಗಾ...

  ''ಮಹಾರಾಜ ಅಂತ ಒಂದು ಹೋಟೆಲ್ ಇತ್ತು. ಅವತ್ತು 'ಮೆಜೆಸ್ಟಿಕ್' ಸಿನಿಮಾ ರಿಲೀಸ್ ಇತ್ತು. ಅವತ್ತು 'ನಿನ್ನ ಗಾಡಿ ಸ್ಟಾರ್ಟ್ ಆಯ್ತು' ಅಂತ ಹೇಳ್ತಿದ್ದ. ಹಾಗಂದ ಎರಡು ವರ್ಷದಲ್ಲಿ ಆದಿ ಗಾಡಿ ತುಂಬಾ ಚೆನ್ನಾಗಿ ಸ್ಟಾರ್ಟ್ ಆಯ್ತು. 'ಲವ್' ಇನ್ವಿಟೇಶನ್ ತಂದು ಕೊಟ್ಟಾಗ ''ಏನೋ ಮಗಾ, ಹೀಗೆ ಕಾಣಿಸ್ತಿದ್ದೀಯಾ'' ಅಂತ ಹೇಳಿದ್ದೆ. ಇವತ್ತಿಗೂ ನಾವಿಬ್ಬರು ಮಗಾ ಮಗಾ ಅಂತ ಮಾತಾಡ್ತೀವಿ. ಇನ್ನೂ ಎತ್ತರಕ್ಕೆ ಆದಿತ್ಯ ಬೆಳೆಯಲಿ ಅಂತ ಹಾರೈಸುವೆ'' ಅಂತ ದರ್ಶನ್ ಹೇಳಿದರು.

  ನನ್ನ ಪ್ರೀತಿಯ ಚಕ್ರವರ್ತಿ

  ನನ್ನ ಪ್ರೀತಿಯ ಚಕ್ರವರ್ತಿ

  ದರ್ಶನ್ ಆಡಿದ ಮಾತುಗಳನ್ನು ಕೇಳಿ, ''ದರ್ಶನ್ ತುಂಬಾ ಚೆನ್ನಾಗಿ ಮಾತನಾಡಿದ. ನಾನು ತುಂಬಾ ಭಾವುಕನಾಗಿದ್ದೇನೆ. ನನ್ನ ಪ್ರೀತಿಯ ಚಕ್ರವರ್ತಿ, ನನ್ನ ಪ್ರೀತಿ ದಾಸ. ಥಾಂಕ್ಯು. ನಮ್ಮ ಸ್ನೇಹ ಇನ್ಮುಂದೆ ಹೀಗೆ ಇರುತ್ತೆ. ಹೀಗೆ ಇರಬೇಕು. ಇಂಡಸ್ಟ್ರಿ ನಮ್ಮ ಮಧ್ಯೆ ಯಾವತ್ತೂ ಬಂದಿಲ್ಲ. ಬರುವುದೂ ಇಲ್ಲ. ನಾವು ಮೈಸೂರು ಹುಡುಗರು. ಫ್ರೆಂಡ್ ಶಿಪ್ ನ ಕಡೆಯವರೆಗೂ ಕಾಪಾಡೋದು ಮೈಸೂರು ಹುಡುಗರು'' ಎಂದರು ನಟ ಆದಿತ್ಯ.

  English summary
  Kannada Actor Darshan speaks about Adithya in Munduvaredha Adhyaya trailer launch event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X