Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಗಸ್ಟ್ 16 ರಿಂದ 'ಒಡೆಯರ್' ದರ್ಬಾರ್: ಸಂಭ್ರಮದಲ್ಲಿ ದರ್ಶನ್ ಫ್ಯಾನ್ಸ್.!
ಅಭಿಮಾನಿಗಳ ಪ್ರೀತಿಯ 'ದಾಸ' ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಕೆಲವೇ ದಿನಗಳಲ್ಲಿ 'ಕುರುಕ್ಷೇತ್ರ' ಆಡಿಯೋ ರಿಲೀಸ್ ಆಗಲಿದ್ದು, ಅದಾದ ಬಳಿಕ ಸಿನಿಮಾ ನಿಮ್ಮೆಲ್ಲರ ಮುಂದೆ ಬರಲಿದೆ.
'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಮುಗಿದ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಶೂಟಿಂಗ್ ನಲ್ಲಿ ಪಾಲ್ಗೊಂಡರು. ಇನ್ನೇನು 'ಯಜಮಾನ' ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಟೈಮ್ ಹತ್ತಿರ ಬಂದಿದೆ. ಹೀಗಾಗಿ, 52ನೇ ಸಿನಿಮಾಗೆ ದರ್ಶನ್ ಚಾಲನೆ ಕೊಡಲಿದ್ದಾರೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಸಂಭ್ರಮ ಪಡುವ ಸುದ್ದಿಯೊಂದನ್ನ ನಾವು ಹೊತ್ತು ತಂದಿದ್ದೇವೆ. ಮುಂದಿನ ತಿಂಗಳಲ್ಲಿ ದರ್ಶನ್ ರವರ 52ನೇ ಸಿನಿಮಾದ ಮುಹೂರ್ತ ನಡೆಯಲಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿರಿ...

ಆಗಸ್ಟ್ 16 ರಂದು 'ಒಡೆಯರ್' ಮುಹೂರ್ತ
ಆಗಸ್ಟ್ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 52ನೇ ಸಿನಿಮಾ 'ಒಡೆಯರ್' ಮುಹೂರ್ತ ಸಮಾರಂಭ ನಡೆಯಲಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನಡೆಯಲಿದೆ. ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ.

ಆಗಸ್ಟ್ 16 ರ ಸ್ಪೆಷಲ್
'ಒಡೆಯರ್' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ನಿರ್ಮಾಪಕ ಸಂದೇಶ್ ನಾಗರಾಜ್. ಇವರ ಜನ್ಮದಿನ ಆಗಸ್ಟ್ 16 ರಂದು. ಹೀಗಾಗಿ, ಅಂದೇ ಸಿನಿಮಾದ ಮುಹೂರ್ತ ಸಮಾರಂಭ ನಡೆಸಲು ಸಂದೇಶ್ ನಾಗರಾಜ್ ನಿರ್ಧರಿಸಿದ್ದಾರೆ.
'ಚಕ್ರವರ್ತಿ'
ಚೆನ್ನಾಗಿಲ್ಲ
ಅಂದೋರಿಗೆಲ್ಲಾ
ಮಾತಲ್ಲೇ
ಪೆಟ್ಟು
ಕೊಟ್ಟ
ಸಂದೇಶ್
ನಾಗರಾಜ್.!

ರೀಮೇಕ್ ಸಿನಿಮಾ
ಅಂದ್ಹಾಗೆ, 'ವೀರಂ' ಚಿತ್ರದ ರೀಮೇಕ್ ಈ 'ಒಡೆಯರ್' ಸಿನಿಮಾ. 'ವೀರಂ' ಚಿತ್ರವನ್ನ ಕನ್ನಡದ ನೇಟಿವಿಟಿಗೆ ತಕ್ಕ ಹಾಗೆ ಬದಲಾವಣೆ ಮಾಡಿಕೊಂಡಿದ್ದಾರೆ ನಿರ್ದೇಶಕ ಎಂ.ಡಿ.ಶ್ರೀಧರ್. ಈಗಾಗಲೇ, 'ಒಡೆಯರ್' ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದೆ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಬಾಕಿ ತಾರಾಗಣ ಇನ್ನೂ ಫೈನಲ್ ಆಗಿಲ್ಲ.
'ಹೆಬ್ಬುಲಿ'
ನಿರ್ಮಾಪಕನ
ಚಿತ್ರಕ್ಕೆ
ಕಂಡಿಷನ್
ಹಾಕಿದ
ದರ್ಶನ್

ಯಶಸ್ವಿ ಜೋಡಿ
ಅಷ್ಟಕ್ಕೂ, ದರ್ಶನ್ ಗಾಗಿ 'ಪೊರ್ಕಿ' ಹಾಗೂ 'ಬುಲ್ ಬುಲ್' ಚಿತ್ರವನ್ನ ನಿರ್ದೇಶನ ಮಾಡಿದವರು ಎಂ.ಡಿ.ಶ್ರೀಧರ್. ಈ ಎರಡೂ ಚಿತ್ರಗಳು ಹಿಟ್ ಆಗಿವೆ. ಎರಡು ಸೂಪರ್ ಹಿಟ್ ಗಳನ್ನು ಕೊಟ್ಟಿರುವ ಈ ಜೋಡಿ ಇದೀಗ 'ಒಡೆಯರ್' ಮೂಲಕ ಹ್ಯಾಟ್ರಿಕ್ ಬಾರಿಸುತ್ತಾರಾ.? ನೋಡಬೇಕು.