For Quick Alerts
  ALLOW NOTIFICATIONS  
  For Daily Alerts

  ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತ

  |
  Darshan starrer Gandugali madakari Nayaka movie muhurtha in Basavanagudi temple | FILMIBEAT KANNADA

  ರಾಜ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿರುವ ಅಪ್ಪಟ ಐತಿಹಾಸಿಕ ಸಿನಿಮಾ 'ಗಂಡುಗಲಿ ಮದಕರಿ ನಾಯಕ'. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇಂದು ಬೆಳಗ್ಗೆ ನಡೆಯಿತು.

  ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತ ನೆರವೇರಿತು. 'ದಾಸ' ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ಮಾಪಕ ಮುನಿರತ್ನ, ಮಂಡ್ಯ ಸಂಸದೆ ಸುಮಲತಾ, ನಟ ಶ್ರೀನಿವಾಸ್ ಮೂರ್ತಿ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಪಾಲ್ಗೊಂಡು ಪೂಜೆ ಸಲ್ಲಿಸಿದರು.

  ಅಂದ್ಹಾಗೆ, ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಮುಹೂರ್ತ ಚಿತ್ರದುರ್ಗದಲ್ಲಿ ನಡೆದಿತ್ತು. ಮುರುಘಾಶ್ರೀಗಳ ಸಾನಿಧ್ಯದಲ್ಲಿ, 'ಮದಕರಿ ನಾಯಕ'ನ ಪುತ್ಥಳಿಗೆ ಹೂವಿನ ಹಾರ ಅರ್ಪಿಸುವ ಮೂಲಕ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ದರ್ಶನ್ ಚಾಲನೆ ಕೊಟ್ಟಿದ್ದರು. ಅದರಿಂದ ವಿವಾದ ಕೂಡ ಸೃಷ್ಟಿಯಾಗಿತ್ತು.

  'ಗಂಡುಗಲಿ ಮದಕರಿ ನಾಯಕ': ಆರಂಭದಲ್ಲೇ ಎಡವಟ್ಟು, ದರ್ಶನ್ ವಿರುದ್ಧ ಭುಗಿಲೆದ್ದ ಸಿಟ್ಟು.!'ಗಂಡುಗಲಿ ಮದಕರಿ ನಾಯಕ': ಆರಂಭದಲ್ಲೇ ಎಡವಟ್ಟು, ದರ್ಶನ್ ವಿರುದ್ಧ ಭುಗಿಲೆದ್ದ ಸಿಟ್ಟು.!

  ಇದೀಗ ಬೆಂಗಳೂರಿನಲ್ಲಿ 'ಗಂಡುಗಲಿ ಮದಕರಿ ನಾಯಕ' ಚಿತ್ರ ಅದ್ಧೂರಿಯಾಗಿ ಸೆಟ್ಟೇರುತ್ತಿದೆ. 'ಗಂಡುಗಲಿ ಮದಕರಿ ನಾಯಕ' ದರ್ಶನ್ ಅಭಿನಯದ 54ನೇ ಚಿತ್ರ. ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಂಬೈ, ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ನಡೆಯಲಿದೆ.

  ಬಿಗ್ ಬಜೆಟ್ ನಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುವ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದರೆ, ಹಂಸಲೇಖ ಸಂಗೀತ ಸಂಯೋಜಿಸಲಿದ್ದಾರೆ.

  English summary
  Darshan starrer Gandugali Madakari Nayaka muhoortha was held at Gavigangadhareshwara Temple in Bengaluru today (Dec 6th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X