twitter
    For Quick Alerts
    ALLOW NOTIFICATIONS  
    For Daily Alerts

    50 ದಿನ ಪೂರೈಸಿದ 'ಜಗ್ಗುದಾದಾ': ಮಂಡ್ಯದಲ್ಲಿ ದರ್ಶನ್ ಸಂಭ್ರಮ

    By Suneetha
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದೀಕ್ಷಾ ಸೇಠ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಜಗ್ಗುದಾದಾ' ಇದೀಗ 50 ದಿನಗಳನ್ನು ಪೂರೈಸಿದೆ. 'Mr.ಐರಾವತ' ಮತ್ತು 'ವಿರಾಟ್' ಚಿತ್ರಗಳು ದರ್ಶನ್ ಅವರಿಗೆ ಸಾಧಾರಣ ಯಶಸ್ಸು ಕೊಟ್ಟಿದ್ದವು.

    ಆದರೆ ಚೊಚ್ಚಲ ನಿರ್ದೇಶಕ ರಾಘವೇಂದ್ರ ಹೆಗಡೆ ನಿರ್ದೇಶನದ 'ಜಗ್ಗುದಾದಾ' ಪಕ್ಕಾ ಕಾಮಿಡಿ ಸಿನಿಮಾವಾಗಿ ಕನ್ನಡ ಸಿನಿ ಪ್ರೇಕ್ಷಕರ ಹಾಗೂ ದರ್ಶನ್ ಅಭಿಮಾನಿಗಳ ಮನಗೆದ್ದಿತ್ತು.[ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

    ಎರಡು ಸಿನಿಮಾಗಳ ಸೋಲಿನಿಂದ ಕೊಂಚ ಕಂಗೆಟ್ಟಿದ್ದ ದರ್ಶನ್ ಅವರನ್ನು 'ಜಗ್ಗುದಾದಾ' ಯಶಸ್ಸು ಮತ್ತೆ ಮರಳಿ ಟ್ರ್ಯಾಕ್ ಗೆ ಕರೆತಂದಿದೆ.

    ಅಂದಹಾಗೆ ಬಾಕ್ಸಾಫೀಸ್ ನಲ್ಲೂ 'ಜಗ್ಗುದಾದಾ' ಈ ಬಾರಿ ಒಳ್ಳೆ ಕಲೆಕ್ಷನ್ ಮಾಡಿತ್ತು. ದರ್ಶನ್, ರವಿಶಂಕರ್, ಸೃಜನ್ ಲೋಕೇಶ್ ಮತ್ತು ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ 'ಜಗ್ಗುದಾದಾ' ಜೂನ್ 10ಕ್ಕೆ ಗ್ರ್ಯಾಂಡ್ ಆಗಿ ತೆರೆಕಂಡಿತ್ತು.

    ಇನ್ನು ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ನಿನ್ನೆ (ಆಗಸ್ಟ್ 3) ಮಂಡ್ಯದ ಕೆ.ಆರ್ ಪೇಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು. ಇವರ ಜೊತೆ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ರಾಘವೇಂದ್ರ ಹೆಗಡೆ, ಬುಲೆಟ್ ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅವರು ಏನಂದ್ರು?, ಮುಂದೆ ಓದಿ....

    ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ದರ್ಶನ್

    ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ದರ್ಶನ್

    ಆಗಸ್ಟ್ 3, ಮಂಡ್ಯದ ಕೆ.ಜೆ.ಬಿ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ 'ಜಗ್ಗುದಾದಾ' ಚಿತ್ರವನ್ನು ಅಭಿಮಾನಿಗಳೊಂದಿಗೆ ನಟ ದರ್ಶನ್ ಅವರು ವೀಕ್ಷಿಸಿದರು. ತದನಂತರ ನೆರೆದಿದ್ದ ಅಪಾರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.[ನೀವು ದರ್ಶನ್ ಫ್ಯಾನ್ ಆದ್ರೆ, ದರ್ಶನ್ ಯಾರ ಫ್ಯಾನ್.?]

    'ಕಳಸಾ ಬಂಡೂರಿ' ಯೋಜನೆ ಬಗ್ಗೆ

    'ಕಳಸಾ ಬಂಡೂರಿ' ಯೋಜನೆ ಬಗ್ಗೆ

    'ಉತ್ತರ ಕರ್ನಾಟಕದ ಜನತೆಯ ಹಲವು ದಿನಗಳ ಕನಸಾದ 'ಮಹದಾಯಿ' ಮತ್ತು 'ಕಳಸಾ ಬಂಡೂರಿ' ಯೋಜನೆಯ ಹೋರಾಟದಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ನಾವೂ ಕೂಡ ಕೈ ಜೋಡಿಸಿದ್ದೇವೆ. ನಮ್ಮ ಭಾಷೆ, ನಮ್ಮ ಜನರ ವಿಚಾರದಲ್ಲಿ ಕನ್ನಡ ನಾಡಿಗೆ ಧಕ್ಕೆಯಾದರೆ ಕೈ ಕಟ್ಟಿ ಕೂರುವುದಿಲ್ಲ. ಅಭಿಮಾನಿಗಳೊಂದಿಗೆ ನಾವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ" ಎಂದು ದರ್ಶನ್ ಅವರು ತಿಳಿಸಿದ್ದಾರೆ.

    ಥಿಯೇಟರ್ ನಲ್ಲೇ ಸಿನಿಮಾ ನೋಡಿ

    ಥಿಯೇಟರ್ ನಲ್ಲೇ ಸಿನಿಮಾ ನೋಡಿ

    'ಕಲಾವಿದರ ಅಭಿವೃದ್ಧಿಗೆ ಹಾಗೂ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕನ್ನಡ ಸಿನಿಪ್ರಿಯರು, ಸಿನಿಮಾಗಳನ್ನು ಚಿತ್ರಮಂದಿರಗಳಲ್ಲೇ ನೋಡಿ, ನಮ್ಮೆಲ್ಲರನ್ನು ಹರಸಬೇಕು" ಎಂದು ಅಭಿಮಾನಿಗಳಲ್ಲಿ ಮತ್ತು ಕನ್ನಡ ಪ್ರೇಕ್ಷಕರಲ್ಲಿ ಮನವಿ ಮಾಡಿದರು.[ದರ್ಶನ್ 'ಜಗ್ಗುದಾದಾ' ಚಿತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!]

    'ಜಗ್ಗುದಾದಾ' 50 ದಿನ ಪೂರೈಸಿದ್ದು ಖುಷಿಯಾಗಿದೆ

    'ಜಗ್ಗುದಾದಾ' 50 ದಿನ ಪೂರೈಸಿದ್ದು ಖುಷಿಯಾಗಿದೆ

    "ಇತ್ತೀಚೆಗೆ ಟಿವಿಯಲ್ಲಿ ಬರುತ್ತಿರುವ ಭಿನ್ನ-ವಿಭಿನ್ನ ಶೋ ಮತ್ತು ಧಾರಾವಾಹಿಗಳ ನಡುವೆಯೂ ಕನ್ನಡ ಚಿತ್ರಗಳು 50 ದಿನ ಪೂರೈಸೋದು ಸುಲಭ ಅಲ್ಲ. ಇಂತಹ ದಿನದಲ್ಲಿ ಕೆ.ಆರ್ ಪೇಟೆಯಲ್ಲಿ ನನ್ನ ಅಭಿನಯದ 'ಜಗ್ಗುದಾದಾ' 50 ದಿನ ಪೂರೈಸಿರೋದು ತುಂಬಾ ಖುಷಿ ತಂದಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಅಭಿಮಾನಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸ" ಎಂದು ಮನದಾಳದ ಮಾತನ್ನು ಹೊರಹಾಕಿದರು.[ನಿರ್ಮಾಪಕರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ 'ಜಗ್ಗುದಾದಾ' ದರ್ಶನ್.!]

    ನೀವೆಲ್ಲೋ, ನಾನಲ್ಲೇ

    ನೀವೆಲ್ಲೋ, ನಾನಲ್ಲೇ

    "ನನ್ನ ಅಭಿಮಾನಿಗಳಾದ ನೀವು ನನ್ನನ್ನು ಎಲ್ಲೇ ಕರೆದರೂ ನಾನು ಬಂದೇ ಬರುತ್ತೇನೆ. ನೀವೆಲ್ಲಿ ಇರುತ್ತೀರೋ, ನಾನಲ್ಲೇ ಇರುತ್ತೇನೆ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದವನು, ಕನ್ನಡ ಜನತೆಯ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ" ಎಂದು ದರ್ಶನ್ ನುಡಿದರು.

    ಅಭಿಮಾನಿಗಳ ಜಾತ್ರೆ

    ಅಭಿಮಾನಿಗಳ ಜಾತ್ರೆ

    ತಮ್ಮ ಊರಿಗೆ ನೆಚ್ಚಿನ ನಟ ದರ್ಶನ್ ಅವರು ಆಗಮಿಸಿದ್ದಾರೆ ಎಂದಾಗ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಭಾರಿ ಜನ ಪ್ರವಾಹ ಕಂಡುಬಂದಿದ್ದರಿಂದ, ಅಭಿಮಾನಿಗಳ ಸಭೆಯನ್ನು ನಿಯಂತ್ರಿಸಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಾಡು ಮಾಡಿದ್ದರು.['ಜಗ್ಗುದಾದಾ' 3 ದಿನದ ಕಲೆಕ್ಷನ್ ಇಷ್ಟೊಂದಾ?]

    English summary
    Challenging Star Darshan and Actress Deeksha Seth starrer 'Jaggu Dada' has completed 50 days in a few centers of Karnataka. The movie has continued its run in a few centers now and expected to complete 100 days in a theater.
    Thursday, August 4, 2016, 12:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X