»   » ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada
ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ | Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಅಂತಲೇ ಫೇಮಸ್ ಆಗಿರುವ 'ಡಿ ಬಾಸ್' ದರ್ಶನ್ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ರಾಜ್ಯಾದ್ಯಂತ ಮೂಲೆ ಮೂಲೆಯಲ್ಲೂ ಅಭಿಮಾನಿ ಬಳಗವನ್ನ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ 'ಜಗ್ಗುದಾದಾ' ಸಿನಿಮಾ ಮೂಲಕ ಹೊಸ ಅಲೆಯನ್ನ ಸೃಷ್ಟಿ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಪಡೆದುಕೊಂಡು ಸಖತ್ತಾಗಿ ಕಲೆಕ್ಷನ್ ಮಾಡಿದ ರಾಘವೇಂದ್ರ ಹೆಗ್ಡೆ ನಿರ್ದೇಶನದ 'ಜಗ್ಗುದಾದಾ' ಸಿನಿಮಾ ಹಿಂದಿ ಭಾಷೆಗೆ ಡಬ್ ಆಗಿದೆ. ಕನ್ನಡದಲ್ಲಿ ಇರುವಷ್ಟು ಅಭಿಮಾನಿಗಳು ಹಿಂದಿಯಲ್ಲಿ ದರ್ಶರ್ ರಿಗೆ ಇರಲಿಕ್ಕಿಲ್ಲ ಅಂತ ಏನಾದರೂ ಊಹೆ ಮಾಡಿದ್ರೆ ಅದು ತಪ್ಪು. ಯಾಕಂದ್ರೆ, ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ 'ಡಿ ಬಾಸ್' ಗೆ ಹೆಚ್ಚು ಅಭಿಮಾನಿಗಳಿದ್ದಾರೆ ಅನ್ನೋದು ಈ ಮೂಲಕ ತಿಳಿದು ಬಂದಿದೆ.

 Darshan starrer 'Jaggu Dada' hindi version creates record in YouTube

ಯೂಟ್ಯೂಬ್ ನಲ್ಲಿ ಹಿಂದಿ ಡಬ್ ಮಾಡಿರುವ 'ಜಗ್ಗುದಾದಾ' ಸಿನಿಮಾವನ್ನ 9 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ. ಪ್ರತಿನಿತ್ಯ 'ಜಗ್ಗುದಾದಾ' ಹಿಂದಿ ವರ್ಷನ್ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದ್ದು ಈ ಬಗ್ಗೆ ಅಭಿಮಾನಿಗಳು ಹರುಷ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ ನಮ್ಮ ಕಲಾವಿದರು ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲೂ ಸೌಂಡು ಮಾಡೋದು ಖುಷಿಯ ಸಂಗತಿ.

English summary
Darshan starrer 'Jaggu Dada' hindi version creates record in YouTube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada