For Quick Alerts
  ALLOW NOTIFICATIONS  
  For Daily Alerts

  ಕ್ರಾಂತಿ ಅಬ್ಬರಕ್ಕೆ 3 ದಿನ ಬಾಕಿ; ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನ ಕಲೆಕ್ಷನ್ ಎಷ್ಟು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಚಿತ್ರ ಬಿಡುಗಡೆ ಸಮೀಪಿಸುತ್ತಿದ್ದಂತೆ ಚಿತ್ರದ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಇನ್ನು ತಮ್ಮ ನೆಚ್ಚಿನ ನಟನ ಚಿತ್ರ ಬರೋಬ್ಬರಿ 22 ತಿಂಗಳುಗಳ ಬಳಿಕ ತೆರೆಗೆ ಬರುತ್ತಿದ್ದು, ದರ್ಶನ್ ಅವರನ್ನು ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

  ಹೌದು, 2021ರ ಮಾರ್ಚ್ ತಿಂಗಳಲ್ಲಿ ರಾಬರ್ಟ್ ತೆರೆ ಕಂಡದ್ದು ಬಿಟ್ಟರೆ ದರ್ಶನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಯಾವ ಚಿತ್ರಗಳೂ ಸಹ ಬಿಡುಗಡೆಗೊಂಡಿರಲಿಲ್ಲ. ಅದರ ಜತೆಗೆ ಕ್ರಾಂತಿ ಚಿತ್ರದ ಬಗ್ಗೆ ಮಾಧ್ಯಮಗಳು ಪ್ರಚಾರ ಮಾಡುವುದರಿಂದ ಹಿಂದೆ ಸರಿದಿವೆ. ಹೀಗಾಗಿ ಈ ಚಿತ್ರವನ್ನು ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡಿ ನೆಚ್ಚಿನ ನಟನ ಚಿತ್ರದ ಹೈಪ್ ಹೆಚ್ಚಿಸಿದ್ದರು.

  ಹೀಗೆ ಅಭಿಮಾನಿಗಳಿಂದಲೇ ಪ್ರಚಾರವಾದ ಈ ಚಿತ್ರದ ಮುಂಗಡ ಬುಕಿಂಗ್ ನಿನ್ನೆ ( ಜನವರಿ 22 ) ಬೆಳಗ್ಗೆ ತೆರೆದಿದ್ದು, ಅಭಿಮಾನಿಗಳು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರ ಅನುಪಮಾ ಸೇರಿದಂತೆ ರಾಜ್ಯದ ವಿವಿಧ ಊರುಗಳ ಹಲವಾರು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂಗಡ ಬುಕಿಂಗ್ ಆರಂಭಗೊಂಡಿದೆ. ಬುಕಿಂಗ್ ತೆರೆಯುತ್ತಿದ್ದಂತೆ ರಭಸವಾಗಿ ಟಿಕೆಟ್‌ಗಳನ್ನು ಅಭಿಮಾನಿಗಳು ಬುಕ್ ಮಾಡಿದ್ದು, ಚಿತ್ರ ಅಡ್ವಾನ್ಸ್ ಬುಕಿಂಗ್ ಮೂಲಕ ಭಾನುವಾರ ಒಂದೇ ದಿನ ಗಳಿಸಿದ್ದೆಷ್ಟು ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಭಾನುವಾರದ ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್

  ಭಾನುವಾರದ ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್

  ಭಾನುವಾರ ( ಜನವರಿ 22 ) ಬೆಳಗ್ಗೆ ಹತ್ತು ಗಂಟೆಯಿಂದ ಕ್ರಾಂತಿ ಚಿತ್ರದ ಕರ್ನಾಟಕ ಬುಕಿಂಗ್ ಆರಂಭಗೊಂಡವು. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ವೀರೇಶ್, ಪ್ರಸನ್ನ ಚಿತ್ರಮಂದಿರಗಳ ಟಿಕೆಟ್‌ಗಳು ಕೆಲ ನಿಮಿಷಗಳಲ್ಲೇ ಸೋಲ್ಡ್ ಔಟ್ ಆದವು. ಇನ್ನು ಮಲ್ಟಿಪ್ಲೆಕ್ಸ್ ಬುಕಿಂಗ್ ಸಹ ಇದೇ ದಿನ ಆರಂಭಗೊಂಡಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಪ್ರಕಾರ ಕ್ರಾಂತಿ ಚಿತ್ರ ಭಾನುವಾರದ ಅಡ್ವಾನ್ಸ್ ಬುಕಿಂಗ್‌ನಲ್ಲಿ ರಾಜ್ಯಾದ್ಯಂತ 2 ಕೋಟಿ ಗಳಿಕೆ ಮಾಡಿದೆ. ಹೌದು, ಭಾನುವಾರ ಆರಂಭಗೊಂಡ 784 ಪ್ರದರ್ಶನಗಳ ಬುಕಿಂಗ್‌ನಲ್ಲಿ 82760 ಟಿಕೆಟ್‌ಗಳು ಮಾರಾಟವಾಗಿದ್ದು, 2 ಕೋಟಿ 7 ಲಕ್ಷ ರೂಪಾಯಿಗಳನ್ನು ಗಳಿಕೆ ಮಾಡಿದೆ. ಈ ಮೂಲಕ ಕ್ರಾಂತಿ ಮೊದಲ ದಿನದ ಕಲೆಕ್ಷನ್‌ಗೆ ಈಗಾಗಲೇ 2 ಕೋಟಿ ಸೇರ್ಪಡೆಗೊಂಡಿದೆ.

  ಅನುಪಮಾ ಚಿತ್ರಮಂದಿರದ ಮೂರು ಶೋಗಳು ಸೋಲ್ಡ್ ಔಟ್

  ಅನುಪಮಾ ಚಿತ್ರಮಂದಿರದ ಮೂರು ಶೋಗಳು ಸೋಲ್ಡ್ ಔಟ್

  ಇನ್ನು ಕೆಜಿ ರಸ್ತೆಯ ಅನುಪಮಾ ಚಿತ್ರಮಂದಿರ ಕ್ರಾಂತಿ ಚಿತ್ರದ ಮುಖ್ಯ ಚಿತ್ರಮಂದಿರವಾಗಿದ್ದು, ಭಾನುವಾರವೇ ಮೊದಲ ದಿನದ ಮೂರು ಪ್ರದರ್ಶನಗಳು ಅನುಪಮಾ ಚಿತ್ರಮಂದಿರದಲ್ಲಿ ಸೋಲ್ಡ್ ಔಟ್ ಆಗಿವೆ. ಮುಂಜಾನೆ ಆರು ಗಂಟೆಯ ವಿಶೇಷ ಪ್ರದರ್ಶನ, ಬೆಳಗಿನ ಪ್ರದರ್ಶನ ಹಾಗೂ ಮಧ್ಯಾಹ್ನದ ಪ್ರದರ್ಶನ ಸಂಪೂರ್ಣ ಸೋಲ್ಡ್ ಔಟ್ ಆಗಿದ್ದು, ಚಿತ್ರಮಂದಿರದ ಮುಂದೆ ಬಿಡುಗಡೆಯ ದಿನದ ಮೊದಲ ಮೂರು ಪ್ರದರ್ಶನಗಳ ಟಿಕೆಟ್‌ಗಳು ಸೋಲ್ಡ್ ಔಟ್ ಎಂದು ಬೋರ್ಡ್ ಇಡಲಾಗಿದೆ.

  ಬೆಂಗಳೂರಿನಲ್ಲಿ 22 ಶೋ ಸೋಲ್ಡ್ ಔಟ್

  ಬೆಂಗಳೂರಿನಲ್ಲಿ 22 ಶೋ ಸೋಲ್ಡ್ ಔಟ್

  ಇನ್ನು ಭಾನುವಾರದ ಮುಂಗಡ ಬುಕಿಂಗ್‌ನಲ್ಲಿ ಬೆಂಗಳೂರಿನ 480 ಪ್ರದರ್ಶನಗಳ ಪೈಕಿ 22 ಪ್ರದರ್ಶನಗಳು ಸಂಪೂರ್ಣ ಸೋಲ್ಡ್ ಔಟ್ ಆಗಿವೆ ಹಾಗೂ 95 ಪ್ರದರ್ಶನಗಳ ಟಿಕೆಟ್ ವೇಗವಾಗಿ ಮಾರಾಟವಾಗುತ್ತಿವೆ. ಅತ್ತ ಮೈಸೂರಿನ 128 ಶೋಗಳ ಪೈಕಿ 12 ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದು, 67 ಪ್ರದರ್ಶನಗಳ ಟಿಕೆಟ್‌ಗಳು ವೇಗವಾಗಿ ಮಾರಾಟವಾಗುತ್ತಿವೆ. ಇನ್ನು ತುಮಕೂರಿನಲ್ಲಿ 2 ಶೋ ಸೋಲ್ಡ್ ಔಟ್ ಆಗಿವೆ.

  ಬೆಳಗಿನ ಜಾವವೇ ಪ್ರದರ್ಶನಗಳು ಆರಂಭ

  ಬೆಳಗಿನ ಜಾವವೇ ಪ್ರದರ್ಶನಗಳು ಆರಂಭ

  ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಕ್ರಾಂತಿ ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಮುಖ್ಯ ಚಿತ್ರಮಂದಿರ ಅನುಪಮಾ, ಮಾಗಡಿ ರಸ್ತೆಯ ವೀರೇಶ್, ಗೌಡನಪಾಳ್ಯ ಶ್ರೀನಿವಾಸ, ಬನಶಂಕರಿಯ ಮಹದೇಶ್ವರ ಸೇರಿದಂತೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಮುಂಜಾನೆ ಆರು ಗಂಟೆಗೆ ಪ್ರದರ್ಶನಗಳು ಶುರುವಾಗಲಿದ್ದು, ಈ ಪೈಕಿ ಹಲವು ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ.

  English summary
  Kranti advance booking collection crossed 2 crores on day 1. Read on
  Monday, January 23, 2023, 14:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X