Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಧರಣಿ'ಗೆ ಕೂತು 'ಕ್ರಾಂತಿ' ಮಾಡಲು ಮುಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್: ಡಿಸೆಂಬರ್ 10ಕ್ಕೆ ಮುಹೂರ್ತ!
'ರಾಬರ್ಟ್' ಬಳಿಕ ದರ್ಶನ್ ಸಿನಿಮಾ ಯಾವುದೂ ಥಿಯೇಟರ್‌ಗೆ ಲಗ್ಗೆ ಇಟ್ಟಿಲ್ಲ. ಈಗ ಮಾಸ್ ಹೀರೊ ಚಾಲೆಂಜಿಂಗ್ ಸ್ಟಾರ್ ದರ್ಶನ್ ಥಿಯೇಟರ್‌ನಲ್ಲಿ 'ಕ್ರಾಂತಿ' ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸುಮಾರು ಎರಡು ತಿಂಗಳು ಮುನ್ನವೇ ಸಿನಿಮಾ ಪ್ರಚಾರಕ್ಕೆ ಇಳಿದಿದ್ದಾರೆ.
ಇತ್ತೀಚೆಗಷ್ಟೇ ಡಿಜಿಟಲ್ ಮಾಧ್ಯಮಗಳೊಂದಿಗೆ 'ಕ್ರಾಂತಿ' ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಬಿಟ್ಟರೆ, ಟ್ರೈಲರ್, ಟೀಸರ್, ಹಾಡುಗಳ ಬಗ್ಗೆ ಮಾಹಿತಿ ಇರಲಿಲ್ಲ. ಆದ್ರೀಗ ದಾಸನ ಅಭಿಮಾನಿಗಳಿಗೆ ಖುಷಿ ಪಡುವಂತಹ ಮಾಹಿತಿಯನ್ನು ನಿರ್ಮಾಪಕಿ ಶೈಲಜಾನಾಗ್ ರವಾನಿಸಿದ್ದಾರೆ.
'ದಾಸ'
ದರ್ಶನ್
10ನೇ
ಕ್ಲಾಸ್‌ನಲ್ಲಿ
ಪಡೆದ
ಅಂಕ
ಎಷ್ಟು?
ಎಲ್ಲಾ
ವಿಷಯದಲ್ಲೂ
ಒಂದೇ
ಮಾರ್ಕ್ಸ್!
ಇದೂವರೆಗೂ ಚಿತ್ರತಂಡ ಕೇವಲ 'ಕ್ರಾಂತಿ' ಸಿನಿಮಾದ ಪೋಸ್ಟರ್‌ಗಳನ್ನು ಮಾತ್ರ ರಿಲೀಸ್ ಮಾಡಿತ್ತು. ಆದ್ರೀಗ ಮೊದಲ ಹಾಡನ್ನು ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

ಧರಣಿ ಹಾಡಿಗೆ ಮೂಹೂರ್ತ ಫಿಕ್ಸ್
ಹೌದು, 'ಕ್ರಾಂತಿ' ಸಿನಿಮಾ ಮೊದಲ ಹಾಡುಗಳು ಅಭಿಮಾನಿಗಳನ್ನು ಸೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿ ಹರಿಕೃಷ್ಣ ನಿರ್ದೇಶನದ ಜೊತೆಗೆ ಸಂಗೀತ ಕೂಡ ನೀಡಿದ್ದಾರೆ. ಹೀಗಾಗಿ ಹಾಡುಗಳ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಇದೇ ತಿಂಗಳು 10ರಂದು ಸಿನಿಮಾದ ಮೊದಲ ಹಾಡು 'ಧರಣಿ' ಬಿಡುಗಡೆಯಾಗುತ್ತಿದೆ. ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದಂತಾಗುತ್ತೆ.

ಮೈಸೂರಿನಲ್ಲಿ 'ಕ್ರಾಂತಿ' ಸಾಂಗ್ ರಿಲೀಸ್
ಬೆಂಗಳೂರು ಬಿಟ್ಟರೆ ದರ್ಶನ್ ಕಾಣಸಿಗೋದು ಮೈಸೂರಿನಲ್ಲೇ ಹೆಚ್ಚು. ಹುಟ್ಟೂರು ಮೈಸೂರು ಅಂದರೆ, ದರ್ಶನ್‌ಗೆ ಪಂಚ ಪ್ರಾಣ. ಈ ಕಾರಣಕ್ಕೆ 'ಕ್ರಾಂತಿ'ಯ ಮೊದಲ ಹಾಡನ್ನು ಅರಮನೆ ನಗರಿ ಮೈಸೂರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅದ್ದೂರಿಯಾಗಿ ಧರಣಿ ಸಾಂಗ್ ಅನ್ನು ಬಿಡುಗಡೆ ಮಾಡುವುದಕ್ಕೆ ವೇದಿಕೆ ರೆಡಿಯಾಗುತ್ತಿದೆ. ಡಿಸೆಂಬರ್ 10ನೇ ತಾರೀಕು ದರ್ಶನ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದೆ. "ಕ್ರಾಂತಿ ಸಿನಿಮಾದ ಧರಣಿ ಥೀಮ್ ಸಾಂಗ್ ಡಿಸೆಂಬರ್ 10ನೇ ತಾರೀಕು ಮೈಸೂರಿನಲ್ಲಿ ಬಿಡುಗಡೆ ಆಗಲಿದೆ" ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಅಕ್ಷರ 'ಕ್ರಾಂತಿ' ಮಾಡಲು ಸಜ್ಜಾಗದ ದರ್ಶನ್
ನಿರ್ದೇಶಕ ವಿ. ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಈಗಾಗಲೇ 'ಯಜಮಾನ' ಸಿನಿಮಾ ಬಂದಿದೆ. ಅಲ್ಲೂ ಕೂಡ ಕ್ರಾಂತಿ ಮಾಡಲಾಗಿತ್ತು. ಅಡುಗೆ ಎಣ್ಣಿ ಕ್ರಾಂತಿಯನ್ನು ತೆರೆಮೇಲೆ ತರಲಾಗಿತ್ತು. ಈ ಬಾರಿ ಇದೇ ಜೋಡಿ ಅಕ್ಷರ 'ಕ್ರಾಂತಿ' ಮಾಡಲು ಹೊರಟಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಹಲವು ವರ್ಷಗಳ ಬಳಿಕ ದರ್ಶನ್ ಹಾಗೂ ರಚಿತಾ ರಾಮ್ ಇಬ್ಬರೂ ಮತ್ತೆ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಮತ್ತೆ 'ಬುಲ್ ಬುಲ್' ಜೋಡಿ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುವ ನಿರೀಕ್ಷೆಯಿದೆ.

'ಕ್ರಾಂತಿ' 2023ರ ಮೊದಲ ಸೂಪರ್‌ಸ್ಟಾರ್ ಸಿನಿಮಾ
2022 ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ವರ್ಷ ಅಂತ ಸಾಬೀತಾಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲ. ಬಾಕ್ಸಾಫೀಸ್‌ನಲ್ಲೂ ಧೂಳೆಬ್ಬಿಸಿ ಬಂದಿವೆ. ಈಗ 2023 ಸ್ಯಾಂಡಲ್‌ವುಡ್ ಪಾಲಿಗೆ ಹೇಗಿರುತ್ತೋ ಅನ್ನೋ ಕುತೂಹಲವಂತೂ ಇದ್ದೇ ಇದೆ. ಇದೇ ನಿರೀಕ್ಷೆಯೊಂದಿಗೆ 2023ರಲ್ಲಿ 'ಕ್ರಾಂತಿ' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡೋ ಎಲ್ಲಾ ಲಕ್ಷಣಗಳೂ ಇವೆ.