twitter
    For Quick Alerts
    ALLOW NOTIFICATIONS  
    For Daily Alerts

    ಬೇರೆ ಭಾಷೆಗಳಲ್ಲಿ 'ಕುರುಕ್ಷೇತ್ರ' ಬರೋದು ಅನುಮಾನ?

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಡೇಟ್ ಇನ್ನೇನು ಸಮೀಪಿಸುತ್ತಿದೆ. ಮುಂದಿನ ತಿಂಗಳು ಆಗಸ್ಟ್ 2ಕ್ಕೆ ಕುರುಕ್ಷೇತ್ರ ತೆರೆಗೆ ಬರುತ್ತಿದೆ. ಕೋಟಿ ಕೊಟಿ ವೆಚ್ಚದಲ್ಲಿ ತಯಾರಾಗಿರುವ ಬಹು ತಾರಾಗಣದ ಪೌರಾಣಿಕ ಸಿನಿಮಾಗಾಗಿ ಕನ್ನಡ ಚಿತ್ರಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಆದ್ರೆ ಇದುವರೆಗೂ ಚಿತ್ರದಿಂದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು ಬಿಟ್ಟರೆ ಬೇರೆಯಾವ ಪ್ರಮೋಷನ್ ಚಟುವಟಿಗಳು ನಡೆಯುತ್ತಿಲ್ಲ. ರಿಲೀಸ್ ಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ, ಆದ್ರೆ ಚಿತ್ರತಂಡ ಮಾತ್ರ ಯಾವುದೆ ರೀತಿ ತಲೆಕೆಡಿಸಿ ಕೊಂಡಹಾಗೆ ಕಾಣಿಸುತ್ತಿಲ್ಲ.

    ಅಭಿಮಾನಿಗಳ ಒತ್ತಾಯದ ಮೇರೆಗೆ ಸಿಹಿ ಸುದ್ದಿ ನೀಡಿದ ದರ್ಶನ್ ಅಭಿಮಾನಿಗಳ ಒತ್ತಾಯದ ಮೇರೆಗೆ ಸಿಹಿ ಸುದ್ದಿ ನೀಡಿದ ದರ್ಶನ್

    ಚಿತ್ರದಿಂದ ದರ್ಶನ್ ಒಬ್ಬರನ್ನು ಬಿಟ್ಟರೆ ಬೇರೆ ಯಾವ ನಟರು ಸಹ ಕುರುಕ್ಷೇತ್ರದ ಬಗ್ಗೆ ಮಾತನಾಡಿರುವುದನ್ನು ಯಾರು ನೋಡಿದ ಹಾಗೆ ಇಲ್ಲ. ಕನ್ನಡದಲ್ಲೆ ಈ ಮಟ್ಟಿಗೆ ಆದ್ರೆ ಇನ್ನ ಬೇರೆ ಬಾರೆ ಭಾಷೆಯಲ್ಲಿ ಚಿತ್ರದ ಪ್ರಮೋಷನ್ ಪರಿಸ್ಥಿತಿ ಏನಾಗಿರಬೇಡ. ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದ ಚಿತ್ರತಂಡ ಈಗ ಕನ್ನಡ ವರ್ಶನ್ ನ ಟ್ರೈಲರ್ ಮತ್ತು ಟೀಸರ್ ಅನ್ನು ಮಾತ್ರ ರಿಲೀಸ್ ಮಾಡಿರುವುದು ಅಭಿಮಾನಿಗಳ ಅನುಮಾನ ಮೂಡಿಸಿದೆ.

    ಪರಭಾಷೆಯಲ್ಲಿ ಕುರುಕ್ಷೇತ್ರ ಅನುಮಾನ

    ಪರಭಾಷೆಯಲ್ಲಿ ಕುರುಕ್ಷೇತ್ರ ಅನುಮಾನ

    ಕುರುಕ್ಷೇತ್ರ ಸಿನಿಮಾ ತಂಡ ಮಾಡುತ್ತಿರುವ ಪ್ರಮೋಷನ್ ನೋಡುತ್ತಿದ್ರೆ ಬೇರೆ ಭಾಷೆಯಲ್ಲಿ ಕುರುಕ್ಷೇತ್ರ ರಿಲೀಸ್ ಆಗುವುದು ಅನುಮಾನ ಮೂಡಿಸಿದೆ. ಯಾಕಂದ್ರೆ ಚಿತ್ರ ರಿಲೀಸ್ ಡೇಟ್ ಸಮೀಪಿಸುತ್ತಿದೆ. ಅಲ್ಲದೆ ಪ್ರಮೋಷನ್ ಚಟುವಟಿಕೆಗಳು ಈಗಾಗಲೆ ಭರ್ಜರಿಯಾಗಿ ಶುರುವಾಗಬೇಕಿತ್ತು. ಕನ್ನಡದಲ್ಲೆ ಸರಿಯಾಗಿ ಪ್ರಮೋಷನ್ ಮಾಡದ ಚಿತ್ರತಂಡ ಇನ್ನು ಬೇರೆ ಭಾಷೆಯ ಕಡೆ ಎಲ್ಲಿ ಮುಖ ಮಾಡಿದೆ. ಕುರುಕ್ಷೇತ್ರ ರಿಲೀಸ್ ಆಗುತ್ತಿದೆ ಎನ್ನುವುದು ಬೇರೆ ಭಾಷೆಯ ಚಿತ್ರಾಭಿಮಾನಿಗಳಿಗೆ ಗೊತ್ತಾಗುವುದಾದರು ಹೇಗೆ. ಹಾಗಾಗಿ ಆಗಸ್ಟ್ 2ಕ್ಕೆ ಕುರುಕ್ಷೇತ್ರ ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತಾ ಎನ್ನುವುದೆ ಅನುಮಾನ.

    'ಕುರುಕ್ಷೇತ್ರ' ಚಿತ್ರದ ವಸ್ತ್ರಾಪಹರಣದ ಹಾಡು ಬಿಡುಗಡೆ'ಕುರುಕ್ಷೇತ್ರ' ಚಿತ್ರದ ವಸ್ತ್ರಾಪಹರಣದ ಹಾಡು ಬಿಡುಗಡೆ

    ಬೇರೆ ಭಾಷೆಯ ಟ್ರೈಲರ್ ಯಾಕೆ ರಿಲೀಸ್ ಆಗಿಲ್ಲ

    ಬೇರೆ ಭಾಷೆಯ ಟ್ರೈಲರ್ ಯಾಕೆ ರಿಲೀಸ್ ಆಗಿಲ್ಲ

    ಸದ್ಯ ಕುರುಕ್ಷೇತ್ರ ಚಿತ್ರದಿಂದ ಎರಡು ಟೀಸರ್ ಮತ್ತು ಎರಡು ಟ್ರೈಲರ್ ರಿಲೀಸ್ ಆಗಿದೆ. ಮತ್ತು ಹಾಡುಗಳು ಸಹ ತೆರೆಗೆ ಬಂದಿವೆ. ಆದ್ರೆ ಇವೆಲ್ಲ ಕನ್ನಡ ವರ್ಶನ್ ಮಾತ್ರ ಆಗಿವೆ. ಬೇರೆ ಬೇರೆ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಬೇಕಾದ್ರೆ ಮೊದಲು ಟೀಸರ್ ಮತ್ತು ಟ್ರೈಲರ್ ಅನ್ನು ಅದೆ ಭಾಷೆಯಲ್ಲಿ ರಿಲೀಸ್ ಮಾಡಿದ್ರೆನೆ ಅಲ್ಲಿನ ಚಿತ್ರಾಭಿಮಾನಿಗಳಿಗೂ ಚಿತ್ರದ ಬಗ್ಗೆ ಗೊತ್ತಾಗಲಿದೆ ಮತ್ತು ಕುತೂಹಲ ಕೂಡ ಹೆಚ್ಚಾಗಿರುತ್ತೆ. ಆದ್ರೆ ಬೇರೆ ಯಾವ ಭಾಷೆಯಲ್ಲೂ ಟ್ರೈಲರ್ ರಿಲೀಸ್ ಆಗದೆ ಇರುವುದು ಚಿತ್ರ ಬೇರೆ ಭಾಷೆಯಲ್ಲಿ ತೆರೆಗೆ ಬರುತ್ತಾ ಎನ್ನುವ ಅನುಮಾನ ಮೂಡಲು ಕಾರಣವಾಗಿದೆ.

    ನಾಲ್ಕು ಭಾಷೆಯಲ್ಲಿ ಡಬ್ ಆಗಿದೆ

    ನಾಲ್ಕು ಭಾಷೆಯಲ್ಲಿ ಡಬ್ ಆಗಿದೆ

    ನಿರ್ಮಾಪಕ ಮುನಿರತ್ನ ಹೇಳಿದ ಹಾಗೆ ಕುರುಕ್ಷೇತ್ರ ಬೇರೆ ಬೇರೆ ಅಂದ್ರೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕುರುಕ್ಷೇತ್ರ ಡಬ್ ಆಗಿದೆ. ಬೇರೆ ಬೇರೆ ಭಾಷೆಯಲ್ಲಿ ಡಬ್ ಆಗುತ್ತಿರುವ ಕಾರಣದಿಂದನೆ ಚಿತ್ರ ರಿಲೀಸ್ ಕೂಡ ತಡವಾಗುತ್ತಿದೆ ಎಂದು ಮುನಿರತ್ನ ಹೇಳಿದ್ದರು. ಹಾಗಾಗಿ ಡಬ್ ಆದಮೇಲೆ ಬೇರೆ ಭಾಷೆಯ ಟ್ರೈಲರ್ ಯಾಕೆ ರಿಲೀಸ್ ಮಾಡುತ್ತಿಲ್ಲ ಎನ್ನುವುದು ಚಿತ್ರಾಭಿಮಾನಿಗಳ ಪ್ರಶ್ನೆ.

    ಕುರುಕ್ಷೇತ್ರನೂ ಇಲ್ಲ, ಪೈಲ್ವಾನೂ ಇಲ್ಲ: ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ನಿರೀಕ್ಷೆಯ ಚಿತ್ರಕುರುಕ್ಷೇತ್ರನೂ ಇಲ್ಲ, ಪೈಲ್ವಾನೂ ಇಲ್ಲ: ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ನಿರೀಕ್ಷೆಯ ಚಿತ್ರ

    ಪ್ಯಾನ್ ಇಂಡಿಯಾ ರಿಲೀಸ್ ಗೆ ಪ್ಲಾನ್

    ಪ್ಯಾನ್ ಇಂಡಿಯಾ ರಿಲೀಸ್ ಗೆ ಪ್ಲಾನ್

    ಕುರುಕ್ಷೇತ್ರ ಚಿತ್ರವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡಬೇಕೆಂದು ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿದ್ದರು ಮುನಿರತ್ನ. ಅದ್ದೂರಿಯಾಗಿ ರಿಲೀಸ್ ಮಾಡಬೇಕೆಂದು ಯೋಜನೆಗಳನ್ನು ಹಾಕಿಕೊಂಡಿದ್ದ ಚಿತ್ರತಂಡ ಈಗ ಸೈಲೆಂಟ್ ಆಗಿರುವುದು ಚಿತ್ರಾಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದ ಚಿತ್ರತಂಡ, ಯಾವಾಗ ಕೆಜಿಎಫ್ ಚಿತ್ರ ದೇಶ ವಿದೇಶದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತೊ, ಆಗ ಮುನಿರತ್ನ ಕುರುಕ್ಷೇತ್ರವನ್ನು ಸಹ ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಮಾಡಬೇಕೆಂದು ಪ್ಲಾನ್ ಮಾಡಿ, ಐದು ಭಾಷೆಯಲ್ಲಿ ಡಬ್ ಮಾಡಿಸಿದ್ದಾರೆ.

    English summary
    Kannada actor Darshan starrer 50th film Kurukshetra other language release will yet to be doubtful. Kurukshetra another language trailer not released.
    Wednesday, July 24, 2019, 16:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X