4 ದಿನಗಳಲ್ಲಿ 'Mr.ಐರಾವತ' ಮಾಡಿದ ಕಲೆಕ್ಷನ್...ಅಬ್ಬಬ್ಬಾ.!!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಚಿತ್ರ ಚೆನ್ನಾಗಿಲ್ಲ ಅಂತ ಯಾರೇ ಹೇಳಿದ್ರೂ, ಕಲೆಕ್ಷನ್ ವಿಷಯದಲ್ಲಿ ಮಾತ್ರ ಐರಾವತನನ್ನು ಬಗ್ಗು ಬಡಿಯುವವರು ಯಾರು ಇಲ್ಲ.!
ಕಳೆದ ಗುರುವಾರ (ಅಕ್ಟೋಬರ್ 1) ರಿಲೀಸ್ ಆಗಿದ್ದ 'Mr.ಐರಾವತ' ನಾಲ್ಕು ದಿನಗಳಲ್ಲಿ ಮಾಡಿರುವ ಕಲೆಕ್ಷನ್ ಎಷ್ಟು ಗೊತ್ತಾ? ಬರೋಬ್ಬರಿ 14 ಕೋಟಿ.

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ...ನಿರ್ಮಾಪಕ ಸಂದೇಶ್ ನಾಗರಾಜ್ ಹೇಳುವ ಪ್ರಕಾರ 'Mr.ಐರಾವತ' 4 ದಿನಗಳಲ್ಲಿ 14 ಕೋಟಿ ಮಾಡಿದೆ. ಕರ್ನಾಟಕದಾದ್ಯಂತ ಸುಮಾರು 350 ಥಿಯೇಟರ್ ಗಳಲ್ಲಿ ರಿಲೀಸ್ ಆದ 'Mr.ಐರಾವತ' ಮೊದಲ ದಿನ 3.5 ಕೋಟಿ ಕಲೆಕ್ಷನ್ ಮಾಡಿದೆ. [ಕಲೆಕ್ಷನ್ ನಲ್ಲಿ ಚಿಂದಿ ಉಡಾಯಿಸಿದ ದರ್ಶನ್ 'Mr.ಐರಾವತ']
ಎರಡನೇ ದಿನ (ಶುಕ್ರವಾರ) 3.1 ಕೋಟಿ, ಮೂರನೇ ದಿನ (ಶನಿವಾರ) 2.65 ಕೋಟಿ ಮತ್ತು ನಾಲ್ಕನೇ ದಿನ (ಭಾನುವಾರ) 3.3 ಕೋಟಿ ಲೂಟಿ ಹೊಡೆದಿದೆ. ಕರ್ನಾಟಕದಲ್ಲಿ ನಾಲ್ಕು ದಿನಗಳ ಕಲೆಕ್ಷನ್ ಒಟ್ಟು 12.55 ಕೋಟಿ.
ಇನ್ನೂ ಮುಂಬೈ ಸೇರಿದಂತೆ ದೇಶಾದ್ಯಂತ ಹಲವು ಸೆಂಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ವಿದೇಶಗಳಲ್ಲೂ ದಾಖಲೆ ಮಟ್ಟದ ಚಿತ್ರಮಂದಿರಗಳಲ್ಲಿ 'Mr.ಐರಾವತ' ಬಿಡುಗಡೆ ಆಗಿದೆ. ಎಲ್ಲವನ್ನ ಲೆಕ್ಕಹಾಕಿದ್ರೆ, ನಾಲ್ಕು ದಿನಗಳಲ್ಲಿ 14 ಕೋಟಿ ಕಲೆಕ್ಷನ್ ಆಗಿದೆ ಅಂತಾರೆ ನಿರ್ಮಾಪಕ ಸಂದೇಶ್ ನಾಗರಾಜ್. [ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']
ನಾಲ್ಕು ದಿನಗಳಲ್ಲಿ 14 ಕೋಟಿ ವಸೂಲಿ ಮಾಡಿ 'Mr.ಐರಾವತ' ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಮಾಡಿದ್ದಾನೆ. ಇದೇ ವೇಗದಲ್ಲಿ ಸಿನಿಮಾ ಸಾಗಿದ್ರೆ, 20 ಕೋಟಿ ಕ್ಲಬ್ ಗೆ ಐರಾವತನ ಎಂಟ್ರಿ ಪಕ್ಕಾ.


Click it and Unblock the Notifications











