Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದೇ ವೇದಿಕೆಯಲ್ಲಿ ದರ್ಶನ್, ಸುದೀಪ್, ಎನ್‌ಟಿಆರ್, ರಮ್ಯಾ; ಇದು ಸರ್ಕಾರವೇ ನಡೆಸುವ ಕಾರ್ಯಕ್ರಮ!
ನಟ ದರ್ಶನ್ ಹಾಗೂ ಸುದೀಪ್ ಇಬ್ಬರ ನಡುವೆ ಮನಸ್ತಾಪ ಇರುವುದು ತಿಳಿದಿರುವ ವಿಷಯವೇ. ಮೆಜೆಸ್ಟಿಕ್ ಚಿತ್ರದಲ್ಲಿ ದರ್ಶನ್ ಅವರಿಗೆ ಅವಕಾಶ ನೀಡಿ ಎಂದು ನಾನು ಸೂಚಿಸಿದ್ದೆ ಎಂದು ಸುದೀಪ್ ನೀಡಿದ್ದ ಹೇಳಿಕೆಯಿಂದ ದರ್ಶನ್ ಸುದೀಪ್ ಅವರಿಂದ ದೂರಾಗಿ 'ಇನ್ನು ನಾನು ಹಾಗೂ ಸುದೀಪ್ ಸ್ನೇಹಿತರಲ್ಲ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಹೀಗೆ ತಮ್ಮಿಬ್ಬರ ನಡುವೆ ಯಾವುದೇ ಸ್ನೇಹ ಸಂಬಂಧ ಇನ್ನು ಮುಂದೆ ಇರುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದ ದರ್ಶನ್ ಸುದೀಪ್ ಕುರಿತಾಗಿ ಎಲ್ಲಿಯೂ ಸಹ ಮಾತನ್ನು ಆಡಿರಲಿಲ್ಲ. ಇನ್ನು ದರ್ಶನ್ ಅವರ ಈ ಪೋಸ್ಟ್ ಕುರಿತಾಗಿ ಸುದೀಪ್ ಸಹ ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿಯೇ ಉಳಿದುಕೊಂಡಿದ್ದರು. ಆದರೆ ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡು ಬಿಡುಗಡೆ ಮಾಡುವ ವೇಳೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದರ ಕುರಿತು ಸುದೀಪ್ ಪ್ರತಿಕ್ರಿಯೆ ನೀಡಿದ್ದರು.
ಈ ಘಟನೆ ಹಲವಾರು ವರ್ಷಗಳಿಂದ ಪರಸ್ಪರ ಮಾತನಾಡದ ಸುದೀಪ್ ಹಾಗೂ ದರ್ಶನ್ ನಡುವೆ ಪುಟ್ಟ ಸಂಭಾಷೆಣೆ ನಡೆಯುವಂತೆ ಮಾಡಿತ್ತು. ಹೌದು, ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದನ್ನು ಖಂಡಿಸಿದ್ದ ಸುದೀಪ್ ದರ್ಶನ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ದರ್ಶನ್ ಧನ್ಯವಾದ ತಿಳಿಸಿದ್ದರು. ಇಬ್ಬರ ನಡುವಿನ ಈ ಆನ್‌ಲೈನ್ ಸಂಭಾಷಣೆ ಕಂಡ ನೆಟ್ಟಿಗರು ಹಾಗೂ ಅಭಿಮಾನಿಗಳು ಈ ಇಬ್ಬರೂ ಸಹ ಆದಷ್ಟು ಬೇಗ ಒಂದಾಗಲಿ ಎಂದು ಆಶಿಸಿದ್ದರು. ಅಭಿಮಾನಿಗಳ ಈ ಆಶಯ ಈಗ ನೆರವೇರುವ ಸಮಯ ಹತ್ತಿರ ಬಂದಂತಿದೆ. ರಾಜ್ಯ ಸರ್ಕಾರ ನಡೆಸುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ದರ್ಶನ್ ಹಾಗೂ ಸುದೀಪ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಚಿಕ್ಕಬಳ್ಳಾಪುರ ಉತ್ಸವದ ಅತಿಥಿಗಳ ಪಟ್ಟಿ
ಹೌದು, ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದ ಅತಿಥಿಗಳ ಪಟ್ಟಿಯನ್ನು ಸಚಿವ ಸುಧಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತೆಲುಗಿನ ಎನ್‌ಟಿಆರ್, ಕನ್ನಡದ ಸುದೀಪ್, ದರ್ಶನ್, ಉಪೇಂದ್ರ, ರಮ್ಯಾ, ರಿಷಬ್ ಶೆಟ್ಟಿ, ಸಪ್ತಮಿ ಗೌಡ, ದುನಿಯಾ ವಿಜಯ್, ಧೃವ ಸರ್ಜಾ ಹಾಗೂ ಧನಂಜಯ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ನಿಮ್ಮ ನೆಚ್ಚಿನ ನಟ ಹಾಗೂ ನಟಿಯರ ಕಲಾ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಿ ಎಂದು ಸುಧಾಕರ್ ಬರೆದುಕೊಂಡಿದ್ದಾರೆ. ಕಾರ್ಯಕ್ರಮ ಇಂದಿನಿಂದ ( ಜನವರಿ 7) ಜನವರಿ 14ರವರೆಗೆ ನಡೆಯಲಿದೆ.

ಒಂದಾಗ್ತಾರಾ ದಚ್ಚು ಕಿಚ್ದ?
ಇನ್ನು ಈ ಪೋಸ್ಟ್ ಕಂಡ ಪ್ರತಿಯೊಬ್ಬ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ತಮ್ಮ ನಟರು ಈ ಕಾರ್ಯಕ್ರಮದ ಮೂಲಕ ಒಂದಾಗಬೇಕೆಂದು ಆಶಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಒಬ್ಬರನ್ನೊಬ್ಬರು ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು, ಈಗ ಆಫ್‌ಲೈನ್‌ನಲ್ಲಿ ಕೂಡ ಪರಸ್ಪರ ಭೇಟಿಯಾದರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇಬ್ಬರ ಸಮಾಗಮ ಅನುಮಾನ!
ಇನ್ನು ದರ್ಶನ್ ಹಾಗೂ ಸುದೀಪ್ ವೇದಿಕೆ ಹಂಚಿಕೊಳ್ಳುವುದು ಅನುಮಾನ ಎನ್ನಬಹುದು. ಏಕೆಂದರೆ ಈ ಹಿಂದೆಯೂ ಸಹ ಇಬ್ಬರಿಗೂ ಆಹ್ವಾನವಿದ್ದ ಹಲವು ಕಾರ್ಯಕ್ರಮಗಳು ಜರುಗಿದ್ದವು. ಆದರೆ ಈ ಇಬ್ಬರೂ ನಟರು ಬೇರೆ ಬೇರೆ ಸಮಯದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಹಾಗೂ ಯಾರಾರೊಬ್ಬರು ಗೈರಾಗುತ್ತಿದ್ದರು. ಈ ಬಾರಿಯೂ ಅದೇ ರೀತಿ ಇಬ್ಬರೂ ಸಹ ಬೇರೆ ಬೇರೆ ಸಮಯದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಬಹುದು.

ಎನ್‌ಟಿಆರ್ ಕುರಿತು ಆಕ್ರೋಶ
ಇನ್ನು ಕರ್ನಾಟಕದ ಈ ಕಾರ್ಯಕ್ರಮಕ್ಕೆ ತೆಲುಗು ನಟ ಜೂನಿಯರ್ ಎನ್‌ಟಿಆರ್ ಅವರನ್ನು ಆಹ್ವಾನಿಸಿರುವುದಕ್ಕೆ ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ. ಕನ್ನಡ ಕಲಾವಿದರ ನಡುವೆ ತೆಲುಗು ನಟ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಎನ್‌ಟಿಆರ್ ಅವರಿಗೆ ಕನ್ನಡ ಪ್ರೇಮವಿದೆ. ಅವರು ಕಾರ್ಯಕ್ರಮಕ್ಕೆ ಬಂದರೂ ಕನ್ನಡದಲ್ಲೇ ಮಾತನಾಡ್ತಾರೆ, ಬರಲಿ ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ.