»   » ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ದರ್ಶನ್ ಆಡಿದ ಅದ್ಬುತ ಮಾತುಗಳಿವು

ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ದರ್ಶನ್ ಆಡಿದ ಅದ್ಬುತ ಮಾತುಗಳಿವು

Posted By:
Subscribe to Filmibeat Kannada

ನಟ ಸಾಹಸ ಸಿಂಹ ವಿಷ್ಣುವರ್ಧನ್ ಅಂದರೆ ಕನ್ನಡ ಚಿತ್ರರಂಗದ ಎಲ್ಲ ನಟರಿಗೂ ಅದೇನೋ ಪ್ರೀತಿ.. ಗೌರವ. ವಿಷ್ಣು ಅವರ ಸಿನಿಮಾಗಳು, ಅವರು ನಡೆದು ಬಂದ ದಾರಿ ಅದೆಷ್ಟೋ ನಟರಿಗೆ ಸ್ಪೂರ್ತಿ ನೀಡುವಂತದ್ದು. ಸದ್ಯ ಇಂತಹ ಮಹಾನ್ ನಟನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಣಗಾನ ಮಾಡಿದ್ದಾರೆ.

'ವಿಷ್ಣು ರಾಷ್ಟ್ರೀಯ ಉತ್ಸವ'ದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಗುಣಗಾನ

'ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ' ಇಂದು(ಆಗಸ್ಟ್ 27) ದೆಹಲಿಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಇದೀಗ ನಟ ದರ್ಶನ್ ಕೂಡ ಶುಭಾಶಯವನ್ನು ಕೋರಿದ್ದಾರೆ. ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ'ಕ್ಕೆ ವಿಶ್ ಮಾಡಿದ್ದು, ಜೊತೆಗೆ ವಿಷ್ಣುವರ್ಧನ್ ಅವರ ಬಗ್ಗೆ ಅದ್ಬುತವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ದರ್ಶನ್ ಟ್ವೀಟ್

''ನಿಜವಾದ ಕಲಾರಾಧಕನಿಗೆ ಎಂದಿಗೂ ಸಾವಿಲ್ಲ. ವಿಷ್ಣು ಸರ್ ಹೆಸರಲ್ಲಿ ರಾಷ್ಟ್ರೀಯ ಉತ್ಸವ ಮಾಡುತ್ತಾ ಇರುವ ಅಭಿಮಾನಿಗಳೆಲ್ಲರಿಗೂ ನನ್ನ ಅಭಿನಂದನೆಗಳು.'' ಎಂದು ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಶುಭ ಕೋರಿದ್ದಾರೆ.

ನಾನು ಕೂಡ ಅವರ ಅಭಿಮಾನಿ

''ನಾನು ಕೂಡ ಅವರ ಅಭಿಮಾನಿಗಳಲ್ಲೊಬ್ಬ. ಅಭಿಮಾನಿಗಳನ್ನು ವಿಷ್ಣು ಸರ್ ಎಷ್ಟು ಪ್ರೀತಿಸುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು.'' - ದರ್ಶನ್, ನಟ

'ಡಾ.ವಿಷ್ಣುವರ್ಧನ ರಾಷ್ಟೀಯ ಉತ್ಸವ'ದ ಹತ್ತು ಹಲವು ವಿಶೇಷಗಳು

ಬೆಲೆಕಟ್ಟಲಾಗದ ಪ್ರೀತಿ

''ಅವರು ದೈಹಿಕವಾಗಿ ನಮ್ಮನ್ನು ಆಗಲಿ ಇಷ್ಟು ವರ್ಷಗಳು ಕಳೆದರೂ ಸಹ ಅವರ ಮೇಲೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಬೆಲೆಕಟ್ಟಲಾಗದ್ದು.'' - ದರ್ಶನ್, ನಟ

ಎಲ್ಲರಿಗೂ ಧನ್ಯವಾದಗಳು

''ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ'ಕ್ಕೆ ಕಾರಣರಾಗಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಒನ್ ಅಂಡ್ ಓನ್ಲಿ ಸಿಂಹ, ಸಾಹಸ ಸಿಂಹ. - ದರ್ಶನ್, ನಟ

'ಈ ಬಂಧನ'

2007ರಲ್ಲಿ ರಿಲೀಸ್ ಆಗಿದ್ದ 'ಈ ಬಂಧನ' ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ನಟ ದರ್ಶನ್ ಅಭಿನಯಿಸಿದ್ದರು.

English summary
Actor Darshan Talk about Dr Vishnuvardhan and his national festival.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada