For Quick Alerts
  ALLOW NOTIFICATIONS  
  For Daily Alerts

  ಕೃಷಿ ರಾಯಭಾರಿಯಾಗಿ ತಾವು ಮಾಡಲಿರುವ ಕಾರ್ಯದ ಬಗ್ಗೆ ದರ್ಶನ್ ಮಾತು

  |

  ನಟ ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದು. ಕೃಷಿ ಇಲಾಖೆಯ ರಾಯಭಾರಿಯಾಗಿ ಪದಗ್ರಹಣ ಕಾರ್ಯಕ್ರಮವನ್ನು ಇಂದು ವಿಕಾಸ ಸೌಧದಲ್ಲಿ ಆಯೋಜಿಸಲಾಗಿತ್ತು.

  ರಾಬರ್ಟ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಯಡಿಯೂರಪ್ಪ | Roberrt | Darshan | Filmibeat Kannada

  ಸಮಾರಂಭದಲ್ಲಿ ಮಾತನಾಡಿದ ದರ್ಶನ್, 'ನಾನು ಬಹಳ ದೊಡ್ಡದೇನು ಮಾಡುತ್ತಿಲ್ಲ, ಸರ್ಕಾರದಿಂದ ರೈತರಿಗೆ ಏನೇನು ಸವಲತ್ತುಗಳಿರುತ್ತವೆಯೋ ಅದನ್ನು ಜಾಹೀರಾತು ಮೂಲಕ ರೈತರಿಗೆ ತಲುಪಿಸುವ ಕಾರ್ಯ ಅಷ್ಟನ್ನೇ ಮಾಡುತ್ತಿದ್ದೇವೆ' ಎಂದರು.

  ದರ್ಶನ್ ಶ್ರಮವನ್ನು ಕೊಂಡಾಡಿದ ಸಿಎಂ ಯಡಿಯೂರಪ್ಪ

  'ರೈತ ಎಂಬುದು ಎಮೋಷನ್ (ಭಾವನಾತ್ಮಕ ವಿಷಯ) ಎಂದು ಎಲ್ಲರು ಹೇಳುತ್ತಾರೆ, ಆದರೆ ಅದು ಹಾಗಲ್ಲ, ಅದು ಬ್ಲಡ್ ರಿಲೇಶನ್, (ರಕ್ತ ಸಂಬಂಧ) ಅವರು ಕೃಷಿ ಮಾಡಿ ನಮಗೆ ಅನ್ನ ಕೊಟ್ಟರಷ್ಟೆ ನಮ್ಮ ದೇಹದಲ್ಲಿ ರಕ್ತಪರಿಚಲನೆ ಸಾಧ್ಯ. ನನ್ನ ಕೈಯಿಂದ ರೈತರಿಗೆ ಏನೇನು ಒಳ್ಳೆಯದು ಮಾಡಲು ಸಾಧ್ಯವೋ ಅಷ್ಟು ಒಳ್ಳೆಯ ಕಾರ್ಯಕ್ರಗಳನ್ನು ನಾನು ಮಾಡುತ್ತೇನೆ' ಎಂದು ಭರವಸೆ ನೀಡಿದರು ದರ್ಶನ್.

  ಭಾಷಣದ ಆರಂಭದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಅವರನ್ನು ಹೊಗಳಿದ ನಟ ದರ್ಶನ್, 'ಬಿಸಿ ಪಾಟೀಲ್ ಅವರು ಮೊದಲಿಗೆ ಪೊಲೀಸ್ ನೌಕರರಾಗಿದ್ದರು. ಆ ನಂತರ ನಟರಾದರು, ಈಗ ಸಚಿವರಾಗಿದ್ದಾರೆ. ಅಲ್ಲಿಗೆ ಅವರು ಜೀವನವೆಲ್ಲಾ ಜನರ ಸೇವೆಯ ದಾರಿಯನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದಾರೆ' ಎಂದರು ದರ್ಶನ್.

  ಸಮಾರಂಭದಲ್ಲಿ ಹಾಜರಿದ್ದ ಎಲ್ಲರಿಗೂ ಗೌರವ ಪೂರ್ವಕವಾಗಿ ವಂದಿಸಿದರು ದರ್ಶನ್. ಸಿಎಂ ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಿದರು. ಸಂದೇಶ್ ನಾಗರಾಜ್ ಅವರೂ ಸಹ ಸಮಾರಂಭದಲ್ಲಿ ಹಾಜರಿದ್ದರು.

  ನಟ ದರ್ಶನ್ ಅವರು ಕರ್ನಾಟಕ ಕೃಷಿ ಇಲಾಖೆಯ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ರಾಯಭಾರಿ ಆಗಲು ಯಾವುದೇ ಸಂಭಾವನೆಯನ್ನು ದರ್ಶನ್ ಅವರು ಸರ್ಕಾರದಿಂದ ಪಡೆದಿಲ್ಲ.

  English summary
  Darshan talked about what his job as Karnataka agriculture ambassador in future days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X