For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮಗಳಿಗೆ ಮತ್ತು ಸೆಲೆಬ್ರಿಟಿಗಳಿಗೆ ಧನ್ಯವಾದ ಹೇಳಿದ ದಾಸ ದರ್ಶನ್

  |

  ಮಾಧ್ಯಮಗಳು ಅಂದ್ರೆ ನಟ ದರ್ಶನ್ ಸ್ವಲ್ಪ ದೂರ. ತಮ್ಮ ಸಿನಿಮಾ ವಿಚಾರ ಬಿಟ್ಟು ಬೇರೆ ಯಾವ ವಿಷಯಗಳಿಗೂ ದರ್ಶನ್ ಮಾಧ್ಯಮಕ್ಕೆ ಸಿಗುವುದು ಕಷ್ಟ. ರಾಬರ್ಟ್ ಸಿನಿಮಾಗಾಗಿ ನಟ ದರ್ಶನ್ ಇನ್ನೊಂದು ಲೆವಲ್‌ನಲ್ಲಿ ಪ್ರಚಾರ ಮಾಡಿದರು ಎನ್ನಬಹುದು.

  ನಿರೀಕ್ಷೆಗೂ ಮೀರಿ ರಾಬರ್ಟ್ ಸಿನಿಮಾ ಯಶಸ್ಸು ಕಂಡಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ರಾಬರ್ಟ್ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲೆರಡು ದಿನ ದಾಖಲೆ ಮಟ್ಟದ ಗಳಿಕೆ ಕಂಡಿದೆ. ಈ ಖುಷಿಯನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ದಾಸ, ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

  'ರಾಬರ್ಟ್' ಹೆಸರಲ್ಲಿ ನಡೆಯುತ್ತಿದೆ ಮೋಸ: ಎಚ್ಚರ ಎಂದ ನಿರ್ಮಾಪಕ

  'ನಮ್ಮ ರಾಬರ್ಟ್ ಚಿತ್ರಕ್ಕೆ ಒಳ್ಳೆ ಪ್ರಚಾರ ನೀಡಿ ಎಲ್ಲರಿಗೂ ತಲುಪುವಂತೆ ಮಾಡಿದ ಟಿ.ವಿ. ಹಾಗೂ ಪ್ರಿಂಟ್ ಮೀಡಿಯಾ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಕನ್ನಡ ಚಿತ್ರಗಳಿಗೆ ಹೆಚ್ಚು ಮೀಸಲಾಗಿರಲಿ. ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

  'ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು' ಎಂದು ಅವರ ಅಭಿಮಾನಿಗಳಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

  'ರಾಬರ್ಟ್'ಗೆ ಪೈರಸಿ ಕಾಟ: 3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್

  ರಾಬರ್ಟ್ ಸಿನಿಮಾವನ್ನು ದಯವಿಟ್ಟು ಪೈರಸಿ ಮಾಡಬೇಡಿ ಎಂದ ಕಿಚ್ಚ | Filmibeat Kannada

  ಮೊದಲ ದಿನ 20 ಕೋಟಿ ಗಳಿಸಿದ್ದ ರಾಬರ್ಟ್ ಎರಡನೇ ದಿನ 12 ಕೋಟಿ ಬಾಚಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮೊದಲ ಎರಡು ದಿನಕ್ಕೆ 30 ಕೋಟಿಗೂ ಹೆಚ್ಚು ಹಣ ಗಳಿಸುವ ಮೂಲಕ ಸ್ಯಾಂಡಲ್‌ವುಡ್ ಬಾಕ್ಸ್‌ ಆಫೀಸ್‌ನಲ್ಲಿ ದಾಸನ ಸಿನಿಮಾ ನೂತನ ದಾಖಲೆ ಬರೆದಿದೆ.

  English summary
  Challening star Darshan Thanks Media and Fans for their support to Roberrt Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X