»   » ದರ್ಶನ್ ಅವರಿಗೆ ಚೇತನ್ ಚಂದ್ರ 'ಥ್ಯಾಂಕ್ಸ್' ಅಂದಿದ್ದೇಕೆ

ದರ್ಶನ್ ಅವರಿಗೆ ಚೇತನ್ ಚಂದ್ರ 'ಥ್ಯಾಂಕ್ಸ್' ಅಂದಿದ್ದೇಕೆ

Posted By:
Subscribe to Filmibeat Kannada

ಇತ್ತೀಚೆಗೆ ಚಂದನವನ ಕ್ಷೇತ್ರದಲ್ಲಿ ಕೊಂಚ ಜಾಸ್ತೀನೆ ದೆವ್ವದ ಕಾಟ ಶುರುವಾದಂತಿದೆ. ಮೊನ್ನೆ ಮೊನ್ನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಶಿವಲಿಂಗ' ಚಿತ್ರದಲ್ಲಿ ದೆವ್ವವಾದ 'ರಹೀಂ'ನ ಕಾಟಕ್ಕೆ ಒಳಗಾಗಿದ್ದರು.

ಇದೀಗ ಹೊಸದಾಗಿ ನಟ ಚೇತನ್ ಚಂದ್ರ ಅವರ ಸರದಿ. ಹೌದು ಹೊಸ ಚಿತ್ರ 'ಸಂಯುಕ್ತ 2' ಎಂಬ ಹಾರರ್ ಸಿನಿಮಾದಲ್ಲಿ ಚೇತನ್ ಚಂದ್ರ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರದ ಮೂಹೂರ್ತ ಇಂದು (ಫೆಬ್ರವರಿ 27) ಮಹಾಲಕ್ಷ್ಮಿ ಲೇಔಟ್ ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈಗಾಗಲೇ ನೆರವೇರಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡಿ ಕಂಪೆನಿ' ಶುರು ಮಾಡ್ತಾರಂತೆ]

Darshan to launch Chethan Chandra's next movie 'Samyuktha 2'

ಇನ್ನು ಇಂದಿನ ಈ ಮೂಹೂರ್ತ ಕಾರ್ಯಕ್ರಮದ ವಿಶೇಷ ಏನಪ್ಪಾ ಅಂದ್ರೆ. ಚೇತನ್ ಚಂದ್ರ ಅವರ ಚಿತ್ರಕ್ಕೆ ಕ್ಲಾಪ್ ಮಾಡಲು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.

ನಟ ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ನಟ ಚೇತನ್ ಚಂದ್ರ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ನಟ ದರ್ಶನ್ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.[ದರ್ಶನ್ ಅವರ ಈ ಭಾನುವಾರ ಹೇಗಿತ್ತು ಗೊತ್ತಾ?]

My new movie muhurtha is on February 27 th Saturday at 9 am. Venkateshwara temple , Mahalalshmi layout.I thank challenging star Darshan Anna for his support.

Posted by Chethan Chandra on Thursday, February 25, 2016

ಕ್ಯಾಮರಾ ಚಾಲನೆಯನ್ನು ಜೇಡ್ರಳ್ಳಿ ಕೃಷ್ಣಪ್ಪ ಅವರು ನೆರವೇರಿಸಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾರಾ ಗೋವಿಂದು ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಿರ್ದೇಶಕ ಅಭಿರಾಮ್ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಚಿಕ್ಕೋಡಿಯ ಸಂಜಯ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ನಿರ್ದೇಶಕ ಕೆ.ವಿ ರವಿಚಂದ್ರ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

Darshan to launch Chethan Chandra's next movie 'Samyuktha 2'

ನಟ ಚೇತನ್ ಚಂದ್ರ ಅವರು ನಟಿಸಿದ್ದ ಹಲವಾರು ಸಿನಿಮಾಗಳು ಬಾಕ್ಸಾಫೀಸ್ ಮಕಾಡೆ ಮಲಗಿದ್ದು, ಸದ್ಯಕ್ಕೆ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ 'ಸಂಯುಕ್ತ 2' ಎಂಬ ಹಾರರ್ ಸಿನಿಮಾ ಸೆಟ್ಟೇರಿದ್ದು, ಅಟ್ ಲಿಸ್ಟ್ ದೆವ್ವವಾದರೂ ಕೈ ಹಿಡಿದು ನಡೆಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

English summary
After Jathre. Chethan Chandra is all set to sign a new movie. The actor's upcoming movie has been titled as 'Samyuktha 2' and it has been officially launched today, Feb 27 at Venkateshwara temple , Mahalalshmi layout. The event started by 9 AM onwards and the special guest invited for the function is the 'Box Office Sultan' aka Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada