»   » 'ಬ್ಯೂಟಿಫುಲ್ ಮನಸ್ಸು'ಗಳಿಗೆ 'ದರ್ಶನ್' ಅತಿಥಿ

'ಬ್ಯೂಟಿಫುಲ್ ಮನಸ್ಸು'ಗಳಿಗೆ 'ದರ್ಶನ್' ಅತಿಥಿ

Posted By: ಭರತ್ ಕುಮಾರ್
Subscribe to Filmibeat Kannada

'ಲೂಸಿಯಾ' ಚಿತ್ರದ ಮೂಲಕ ಮೋಡಿ ಮಾಡಿದ್ದ ಸೂಪರ್ ಹಿಟ್ ಜೋಡಿ, 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರ್ತಿದ್ದಾರೆ. ಇತ್ತೀಚಿಗೆ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಪ್ರೋಮೋ ಬಿಡುಗಡೆ ಮಾಡಿ ನಿರೀಕ್ಷೆ ಹುಟ್ಟಿಹಾಕಿದ್ದ ಚಿತ್ರತಂಡ, ಈಗ ಆಡಿಯೋ ರಿಲೀಸ್ ಮಾಡುವ ತಯಾರಿಯಲ್ಲಿದೆ.

ವಿಶೇಷ ಅಂದ್ರೆ, 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಆಗಮಿಸಲಿದ್ದಾರಂತೆ.

Darshan To Release Audio Of 'Beautiful Manasugalu' Movie

ಹೌದು, ಇದೆ ತಿಂಗಳು 20 ರಂದು 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಲಿದ್ದು, ಚಿತ್ರದ ಹಾಡುಗಳನ್ನ ದರ್ಶನ್ ಬಿಡುಗಡೆ ಮಾಡಲಿದ್ದಾರಂತೆ. ಈ ವಿಷಯವನ್ನ ಸ್ವತಃ ಚಿತ್ರದ ನಟ ನೀನಾಸಂ ಸತೀಶ್ ತಮ್ಮ ಫೇಸ್ ಬುಕ್ ಮೂಲಕ ಸ್ವಷ್ಟಪಡಿಸಿದ್ದಾರೆ.['ಸವಾರಿ' ನಿರ್ದೇಶಕರ ಜೊತೆ 'ಕ್ವಾಟ್ಲೆ' ಸತೀಶ್ 'ಚಂಬಲ್'ಗೆ ಪಯಣ]

Darshan To Release Audio Of 'Beautiful Manasugalu' Movie

'ಬ್ಯೂಟಿಫುಲ್ ಮನಸುಗಳು' ಚಿತ್ರದ ಆಡಿಯೋ ಬಿಡುಗಡೆಗಾಗಿ ದರ್ಶನ್ ಸರ್ ನ ಭೇಟಿ ಮಾಡಿ ಅವರನ್ನ ಕೇಳಿದಾಗ, "ನಿಮಗಿಷ್ಟ ಬಂದ ದಿನ ಮಾಡಿ ನಾನು ಬರುತ್ತೇನೆ" ಎಂದು ಬಹಳ ಪ್ರೀತಿಯಿಂದ ಹೇಳಿದ್ದಾರೆ. ಇದೇ 20 ರಂದು ದರ್ಶನ್ ಸರ್, ನಮ್ಮ ಆಡಿಯೋ ಬಿಡುಗಡೆ ಮಾಡುತ್ತಿರುವುದು ನನ್ನ ಜೀವನದ ಅಪೂರ್ವ ಕ್ಷಣಗಳಲ್ಲೊಂದು' ಎಂದು ನೀನಾಸಂ ಸತೀಶ್ ಸಂತಸ ವ್ಯಕ್ತ ಪಡಿಸಿದ್ದಾರೆ.[ಯಾರು ನಿಜವಾದ 'ಮಂಡ್ಯ'ದ ಮಾಸ್ಟರ್ ಪೀಸ್?]

Darshan To Release Audio Of 'Beautiful Manasugalu' Movie

ಅಂದಾಗೆ, 'ಬ್ಯೂಟಿಫುಲ್ ಮನಸ್ಸುಗಳು' ಪಕ್ಕಾ ಲವ್ ಸ್ಟೋರಿಯಾಗಿದ್ದು, ಲೂಸಿಯಾ ಖ್ಯಾತಿಯ ನೀನಾಸಂ ಸತೀಶ್ ಹಾಗೂ ಶೃತಿ ಹರಿಹರನ್ ಜೋಡಿ, ಮತ್ತೆ ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಒಲವೇ ಮಂದಾರ', 'ಟೋನಿ', 'ಬುಲೆಟ್ ಬಸ್ಯ' ಅಂತಹ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಜಯತೀರ್ಥ ಈ 'ಬ್ಯೂಟಿಫುಲ್ ಮನಸ್ಸುಗಳಿಗೆ' ಆಕ್ಟನ್ ಕಟ್ ಹೇಳಿದ್ದಾರೆ.

ಈ ಚಿತ್ರಕ್ಕೆ 'ನೀರ್ ದೋಸೆ' ಖ್ಯಾತಿಯ ನಿರ್ಮಾಪಕ ಪ್ರಸನ್ನ, ಬಂಡವಾಳ ಹಾಕಿದ್ದಾರೆ. ಇನ್ನು ಬಿಜೆ ಭರತ್ ಅವರ ಸಂಗೀತ ನಿರ್ದೇಶನವಿದ್ದು, ಕಿರಣ್ ಹಂಪಾಪುರ ಅವರ ಛಾಯಗ್ರಹಣ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕಿದೆ.

English summary
Kannada Actor, Challenging Star Darshan will release the audio album of the movie 'Beautiful Manasugalu' on October 20th. Neenasam Sathish and Shruthi Hariharan are in the lead role of 'Beautigul Manasugalu', which is directed by Jayatheertha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada