»   » ಡಬ್ಬಿಂಗ್ ಮಾಡಲು ಸಜ್ಜಾದ ದರ್ಶನ್ 'ಕುರುಕ್ಷೇತ್ರ' ತಂಡ

ಡಬ್ಬಿಂಗ್ ಮಾಡಲು ಸಜ್ಜಾದ ದರ್ಶನ್ 'ಕುರುಕ್ಷೇತ್ರ' ತಂಡ

Posted By:
Subscribe to Filmibeat Kannada

ಮುನಿರತ್ನ ನಿರ್ಮಾಣದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಚಿತ್ರೀಕರಣದ ಕೊನೆಯ ಹಂತ ತಲುಪಿದೆ. ಗದಾಯುದ್ಧ ಸೀನ್ ಚಿತ್ರೀಕರಿಸೋದಕ್ಕೆ ಸಖಲ ತಯಾರಿ ಆಗುತ್ತಿರುವ ಬೆನ್ನಲೇ ಸಿನಿಮಾ ತಂಡ 'ಡಬ್ಬಿಂಗ್' ಮಾಡಲು ರೆಡಿಯಾಗಿದೆ. ನಾವ್ ಹೇಳ್ತಿರೋದು ಸಿನಿಮಾಗೆ ವಾಯ್ಸ್ ಡಬ್ಬಿಂಗ್ ಕೆಲಸದ ಬಗ್ಗೆ. ಹೌದು, ಚುನಾವಣೆ ಮುಂಚೆ ಸಿನಿಮಾವನ್ನ ತೆರೆಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಸಿನಿಮಾತಂಡ ಸಖತ್ ಚುರುಕಾಗಿ ಕೆಲಸ ಮಾಡ್ತಿದೆ.

ಹೈದರಾಬಾದ್ ನಲ್ಲಿ 'ಗದಾಯುದ್ಧ'ಕ್ಕಾಗಿ ತಂತ್ರಜ್ಞರೆಲ್ಲಾ ತಯಾರಿ ನಡೆಸಿದ್ದಾರೆ ಇತ್ತ ಸಿನಿಮಾದ ಸಂಕಲನಕಾರ 'ಜೋನಿ ಹರ್ಷ' ಡಬ್ಬಿಂಗ್ ಕೆಲಸ ಪ್ರಾರಂಭ ಮಾಡಿದ್ದಾರೆ. 'ಚಾಲೆಂಜಿಂಗ್ ಸ್ಟಾರ್' ಕೂಡ ಬೆಂಗಳೂರಿನಲ್ಲಿದ್ದು ನಾಳೆ ಮುಂಜಾನೆಯಿಂದ ದರ್ಶನ್ 'ಕುರುಕ್ಷೇತ್ರ' ಸಿನಿಮಾಗೆ ಡಬ್ಬಿಂಗ್ ಮಾಡಲಿದ್ದಾರೆ.

darshan to start dubbing for kurukshetra film

ಚುನಾವಣೆ ಬರುವ ಮುಂಚೆಯೇ ಜನರಿಗೆ 'ಕುರುಕ್ಷೇತ್ರ' ಸಿನಿಮಾವನ್ನ ತೋರಿಸಬೇಕಾಗಿ ಪಣ ತೊಟ್ಟಿರೋ ನಿರ್ಮಾಪಕ 'ಮುನಿರತ್ನ' ಹೆಚ್ಚುವರಿ ತಂತ್ರಜ್ಞರನ್ನ ಬಳಸಿಕೊಂಡು ಸಿನಿಮಾವನ್ನ ಆದಷ್ಟು ಬೇಗ ಮುಗಿಸುವ ಪ್ಲಾನ್ ಮಾಡಿದ್ದಾರೆ. 'ಬಾಹುಬಲಿ' ಸಿನಿಮಾಗೆ ಗ್ರಾಫಿಕ್ಸ್ ಮಾಡಿದ ತಂಡ ಈಗಾಗಲೇ ಚಿತ್ರದ ಫೋಸ್ಟ್ ಪ್ರೊಡಕ್ಷನ್ಸ್ ಕೆಲಸಕ್ಕೆ ಚಾಲನೆ ನೀಡಿದೆ. ನಾಳೆಯಿಂದ ಎರಡು ದಿನಗಳ ಕಾಲ ಡಬ್ಬಿಂಗ್ ಮುಗಿಸಿ ನಂತ್ರ ದರ್ಶನ್ ಗದಾಯುದ್ಧ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

English summary
Challenging Star Darshan to star dubbing for his upcoming film 'Kurukshetra'. ತಮ್ಮ ಮುಂದಿನ ಸಿನಿಮಾಗೆ ಡಬ್ಬಿಂಗ್ ಕೆಲಸ ಸ್ಟಾರ್ಟ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada