Don't Miss!
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- News
ರಾಯಚೂರು: ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ, ಕಾಲೇಜು ಪ್ರಾಂಶುಪಾಲರ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಳಗಾವಿ ತಂಟೆಗೆ ಬಂದ ಮಹಾರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ನೀಡಿದ ದರ್ಶನ್!
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ಸಂಘರ್ಷ ಮತ್ತೆ ಶುರುವಾಗಿದೆ. ಎರಡೂ ರಾಜ್ಯಗಳ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇರುವಾಗಲೇ ಮಹಾರಾಷ್ಟ್ರದ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ಅವರು ಕರ್ನಾಟಕದ ಬೆಳಗಾವಿಗೆ ಭೇಟಿ ನೀಡುತ್ತೇವೆ ಹಾಗೂ ಅಲ್ಲಿನ ಎಂಇಎಸ್ ಕಾರ್ಯಕರ್ತರ ಜತೆ ಬೆಳಗಾವಿಯ ಕೆಲ ಸ್ಥಳಗಳಿಗೆ ಭೇಟಿ ನೀಡ್ತೇವೆ, ಇದನ್ನೂ ಯಾರೂ ಸಹ ತಡೆಯಲು ಆಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು.
ಈ ರೀತಿಯ ಹೇಳಿಕೆಯನ್ನು ನೀಡಿದ್ದೇ ತಡ ಕನ್ನಡ ಪರ ಹೋರಾಟಗಾರರು ರೊಚ್ಚಿಗೆದ್ದರು. ತಾಕತ್ತಿದ್ದರೆ ಬೆಳಗಾವಿಗೆ ಕಾಲಿಟ್ಟು ನೋಡಿ ಎಂದ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದರು ಹಾಗೂ ಮಹಾರಾಷ್ಟ್ರದ ವಾಹನಗಳನ್ನು ತಡೆದು ಶಂಭುರಾಜ್ ದೇಸಾಯಿ ಹೇಳಿಕೆಯ ವಿರುದ್ಧ ಘೋಷಣೆ ಕೂಗಿದರು.
ಈ ಬೆಳವಣಿಗೆಗಳಿಂದ ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಗಡಿ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ವಿರುದ್ಧ ಕನ್ನಡ ಚಿತ್ರರಂಗವೂ ಟೊಂಕ ಕಟ್ಟಿ ನಿಲ್ಲಲು ಸಿದ್ಧವಾಗಿದೆ. ಬೆಳಗಾವಿ ಯಾವತ್ತಿದ್ದರೂ ನಮ್ಮದು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಮಹಾರಾಷ್ಟ್ರಕ್ಕೆ ಬೆಳಗಾವಿಯನ್ನು ಕೆಣಕಿದಿರಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಎಚ್ಚರಿಕೆ ಕೊಟ್ಟ ದರ್ಶನ್
ಬೆಳಗಾವಿ ಕುರಿತಾಗಿ ಮಹಾರಾಷ್ಟ್ರ ಕ್ಯಾತೆ ತೆಗೆದಿರುವ ವಿಷಯಕ್ಕೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡುವ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ತಾವು ಕನ್ನಡ ಬಾವುಟ ಹಿಡಿದಿರುವ ಫೋಟೊ ಹಂಚಿಕೊಂಡಿರುವ ದರ್ಶನ್ "ಬೆಳಗಾವಿ ನಮ್ಮದು, ಇಲ್ಲಿ ಕನ್ನಡ ಧ್ವಜ ಹಾರಿಸುವುದು, ಈ ಮಣ್ಣಿನ ನೆಲದ ಮೌಲ್ಯಗಳಿಗೆ ಬೆಲೆಕೊಡುವ ಪರರನ್ನು ನಮ್ಮಂತೆ ಕಾಣುವುದು ಕನ್ನಡಿಗರ ಪ್ರೀತಿ ಸೌಹಾರ್ದತೆಗೆ ಹಿಡಿದ ಕನ್ನಡಿ. ಇದನ್ನು ಬಲಹೀನತೆ ಎಂದು ಭಾವಿಸಿದರೆ ಕನ್ನಡಿಗರು ತಿರುಗಿ ಬಿದ್ದು ಸರಿಯಾದ ಉತ್ತರ ನೀಡಬೇಕಾಗುತ್ತದೆ" ಎಂದು ಬರೆದುಕೊಂಡು ಕನ್ನಡಿಗರಿಗೆ ಬೆಂಬಲ ಸೂಚಿಸಿದ್ದಾರೆ.

ಗಡಿ ಹೋರಾಟ ಎನ್ನೋದಾದ್ರೆ ಎಲ್ಲಾ ನಟರೂ ಒಟ್ಟಿಗೆ ಬರ್ತೇವೆ ಎಂದ ಶಿವಣ್ಣ
ಇನ್ನು ವೇದಾ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದ ಅಂಗವಾಗಿ ರಾಯಚೂರಿಗೆ ಭೇಟಿ ನೀಡುವ ಮುನ್ನ ಮಂತ್ರಾಲಯಕ್ಕೆ ತೆರಳಿದ್ದ ಶಿವ ರಾಜ್‌ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ ಬೆಳಗಾವಿ ಗಡಿ ಸಮಸ್ಯೆ ಕುರಿತು ತಮ್ಮ ನಿಲುವನ್ನು ತಿಳಿಸಿದರು. ಬೆಳಗಾವಿ ಗಡಿ ಹೋರಾಟ ಅಂತ ಬಂದ್ರೆ ಇಡೀ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಬರುತ್ತೆ, ಎಲ್ಲಾ ನಟರು ಸಹ ಒಟ್ಟಾಗಿ ಬರ್ತೇವೆ ಎಂದು ಹೇಳಿಕೆ ನೀಡಿದ್ದರು.

ಪ್ರಾಣ ಕೊಡೋಕೆ ಸಿದ್ಧ ಎಂದ ಪ್ರೇಮ್
ನೆನಪಿರಲಿ ಪ್ರೇಮ್ ಸಹ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಗಡಿ ವಿಚಾರವಾಗಿ ಕನ್ನಡ ಕರ್ನಾಟಕಕ್ಕೆ ಬೆಂಬಲ ನೀಡಿದ್ದಾರೆ. "ಸಿದ್ದ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡು ನುಡಿಗೆ.. ಸಹನೆ ಬಲಹೀನತೆಯಲ್ಲ. ಅದೊಂದು ಶಕ್ತಿ. ನೆನಪಿರಲಿ, ಬೆಳಗಾವಿ ನಮ್ಮದು!!" ಎಂದು ಬರೆದುಕೊಂಡಿರುವ ಪ್ರೇಮ್ ಹೋರಾಟಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ.

ಎಲ್ಲಾ ನಟರೂ ಬೆಂಬಲಿಸಲಿ
ಹೀಗೆ ಕನ್ನಡದ ಕೆಲ ನಟರು ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ದನಿ ಎತ್ತಿರುವುದರ ಕುರಿತು ಪ್ರತಿಕ್ರಿಯಿಸಿರುವ ಜನ ಸಾಮಾನ್ಯರು ಕೆಲ ನಟರು ದನಿ ಎತ್ತಿದರೆ ಸಾಲುವುದಿಲ್ಲ, ಇಡೀ ಚಿತ್ರರಂಗ ಕನ್ನಡಿಗರಿಗೆ ಬೆಂಬಲ ನೀಡಬೇಕು ಈ ಸಮಯದಲ್ಲಿ ಸುಮ್ಮನಿರಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಶಿವ ರಾಜ್‌ಕುಮಾರ್, ದರ್ಶನ್ ಹಾಗೂ ಪ್ರೇಮ್ ಬೆಂಬಲ ಸೂಚಿಸಿದ್ದು ಹೋರಾಟಗಾರರಿಗೆ ಬಲ ತಂದಂತಾಗಿದೆ ಎಂದು ಬರೆದುಕೊಂಡಿದ್ದಾರೆ.