»   » ಶಾಲಾ ಸ್ನೇಹಿತರಿಂದ ಡಿ ಬಾಸ್ ಗೆ ದೊರೆತ ಅಪೂರ್ವ ಕಾಣಿಕೆ

ಶಾಲಾ ಸ್ನೇಹಿತರಿಂದ ಡಿ ಬಾಸ್ ಗೆ ದೊರೆತ ಅಪೂರ್ವ ಕಾಣಿಕೆ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಕನ್ನಡ ಸಿನಿಮಾರಂಗದ ನಟ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತದ್ದು. ಅದೇ ರೀತಿಯಲ್ಲಿ ಪ್ರಾಣಿ ಪ್ರೇಮಿ ಅದಕ್ಕೂ ಮಿಗಿಲಾಗಿ ಸ್ನೇಹಜೀವಿ. ಅಪಾರ ಸ್ನೇಹಿತರ ಬಳಗವನ್ನ ಹೊಂದಿರುವಂತಹ ನಟ.

ದರ್ಶನ್ ಸುತ್ತಾ ಮುತ್ತ ಸಾಕಷ್ಟು ಜನ ಸ್ನೇಹಿತರು ಸದಾ ಇರುತ್ತಾರೆ. ಆನ್ ಸ್ಕ್ರೀನ್ ,ಆಫ್ ಸ್ಕ್ರೀನ್ ಎರಡರಲ್ಲೂ ಫ್ರೆಂಡ್ಸ್ ಗಳನ್ನ ಹೊಂದಿದ್ದು ದರ್ಶನ್ ಇದ್ದಲ್ಲಿ ಸ್ನೇಹಿತರು ಇರುತ್ತಾರೆ ಎನ್ನುವ ಮಾತಿದೆ.

ದರ್ಶನ್ ಯಜಮಾನ ಚಿತ್ರದಲ್ಲಿ ಕನ್ನಡದ ಸ್ಟಾರ್ ಕಲಾವಿದರು

ಎಷ್ಟೇ ಎತ್ತರಕ್ಕೆ ಬೆಳೆದರು ಬಂದ ದಾರಿಯನ್ನ ಮರೆಯಬಾರದು ಎನ್ನುವ ಸಿದ್ದಾಂತವನ್ನ ರೂಡಿಸಿಕೊಂಡು ಬರುತ್ತಿರುವ ಡಿ ಬಾಸ್ ಇತ್ತೀಚಿಗಷ್ಟೇ ತನ್ನ ಜೊತೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸ್ನೇಹಿತರನ್ನ ಭೇಟಿ ಮಾಡಿದ್ದಾರೆ. ವರ್ಷದ ನಂತರ ದರ್ಶನ್ ನೋಡಿದ ಗೆಳೆಯರು ಅಪೂರ್ವವಾದ ಉಡುಗೊರೆಯನ್ನ ನೀಡಿದ್ದಾರೆ. ಏನದು ಉಡುಗೊರೆ ಅಂತ ಯೋಚನೆ ಮಾಡುತ್ತಿದ್ದೀರಾ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಡಿ ಬಾಸ್ ಸ್ನೇಹಿತರ ವಿಭಿನ್ನ ಪ್ರಯತ್ನ

ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ನಟ ದರ್ಶನ್ ಅವರಿಗೆ ತಮ್ಮ ಬಾಲ್ಯ ಗೆಳೆಯರು ವಿಶೇಷವಾದ ಉಡುಗೊರೆಯನ್ನ ನೀಡಿದ್ದಾರೆ. ಹೂಗಳನ್ನ ನೀಡಿ ದರ್ಶನ್ ಅವರಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಡಿ ಬಾಸ್ ಗಾಗಿ ಹೂವಿನ ಕವಚ

ಶಾಲೆಯ ದಿನಗಳಲ್ಲಿ ದರ್ಶನ್ ಜೊತೆ ಓದಿದ ಎಲ್ಲಾ ಗೆಳೆಯರು ವರ್ಷಕ್ಕೆ ಒಂದು ಬಾರಿ ಸೇರಿ ಕೆಲ ಸಮಯ ಕಳೆಯುವುದು ದರ್ಶನ್ ಮತ್ತು ಗೆಳೆಯರು ಹಿಂದಿನಿಂದಲೂ ರೂಡಿಸಿಕೊಂಡು ಬಂದಿದ್ದಾರೆ. ಇದೇ ರೀತಿ ಇತ್ತೀಚಿಗಷ್ಟೆ ಗೆಳೆಯರೆಲ್ಲಾ ಒಟ್ಟಿಗೆ ಸೇರಿದ್ದರು ಆ ಸಮಯದಲ್ಲಿ ದರ್ಶನ್ ಗಾಗಿ ಹೂವಿನ ಕವಚವನ್ನ ಮಾಡಿಸಲಾಗಿತ್ತು.

ತೂಗುದೀಪ ಕುಟುಂಬದವರ ಹಚ್ಚೆಯನ್ನೇ ಹಾಕಿಸಿಕೊಂಡ 'ಡಿ ಬಾಸ್' ಭಕ್ತ

ಮೈಸೂರಿನಲ್ಲಿ ಗೆಳೆಯರ ಸಂಭ್ರಮ

ಸಾಮಾನ್ಯವಾಗಿ ಗೆಳೆಯನಿಗೆ ಹೂವಿನ ಹಾರ ಹಾಕುವುದು, ಶಾಲು ಹೊದಿಸಿ ಸನ್ಮಾನ ಮಾಡುವುದು ಸರ್ವೇ ಸಾಮಾನ್ಯ ಎಂದು ಪರಿಗಣಿಸಿದ ಸ್ನೇಹಿತರು ವಿಶೇಷವಾಗಿರಲಿ ಎಂದು ಹೂವಿನ ಹೊದಿಕೆಯನ್ನ ಮಾಡಿಸಿದ್ದಾರೆ.

ಶಾಲೆಯ ಸ್ನೇಹಿತರ ಜೊತೆ ಸಿನಿಮಾ ಗೆಳೆಯರು

ಮೈಸೂರಿನಲ್ಲಿ ನಡೆದ ರೀ ಯೂನಿಯನ್ ಸಮಾರಂಭದಲ್ಲಿ ದರ್ಶನ್ ಜೊತೆ ವ್ಯಾಸಂಗ ಮಾಡಿದ ಶಾಲೆಯ ಗೆಳೆಯರು ಹಾಗೂ ಚಿತ್ರರಂಗದ ಸ್ನೇಹಿತರು ಕೂಡ ಭಾಗಿ ಆಗಿದ್ದು ವಿಶೇಷವಾಗಿತ್ತು.

ದರ್ಶನ್ ಮತ್ತು ಪವಿತ್ರ ಗೌಡ ಬಗ್ಗೆ ಅಚ್ಚರಿ ಬೆಳವಣಿಗೆ.! ಯಾಕ್ಹೀಗಾಯ್ತು.?

English summary
Kannada actor Darshan friends has made a flower cover for Darshan, Darshan was part of the school re-union program at Mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada