Don't Miss!
- News
ವೈದ್ಯಕೀಯ ದರ್ಜೆಯ ಆಮ್ಲಜನಕ ಉತ್ಪಾದನೆ, ಪೂರೈಕೆ ಹೆಚ್ಚಳಕ್ಕೆ ಮೋದಿ ಕರೆ
- Sports
ಕ್ರಿಸ್ ಗೇಲ್ಗೆ ಭಾರತದ ಮೇಲಿರುವ ಪ್ರೀತಿಗೆ ಉದಾಹರಣೆ ಕೊಟ್ಟ ಶಮಿ
- Automobiles
ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಹೀರೋ' ಎಂಬ ಟ್ರೆಂಡ್‌ಗೆ ಬ್ರೇಕ್ ಹಾಕಿದ ದಾಸ ದರ್ಶನ್
ಒಂದು ಸಿನಿಮಾಗೆ ಹೀರೋ ಬಹಳ ಮುಖ್ಯ. ಹೀರೋ ನೋಡಿ ಜನ ಥಿಯೇಟರ್‌ಗೆ ಬರುವ ಕಾಲ ಇದು. ಹೀರೋ ಕಾಲ್‌ಶೀಟ್ ಪಡೆದು ವರ್ಷಗಟ್ಟಲೇ ಕಾದು ಸಿನಿಮಾ ಮಾಡುವ ಟ್ರೆಂಡ್ ಇದು. ಹೀರೋಗಾಗಿ ಕಥೆ ಬರೆಯುವ ಸಂಪ್ರದಾಯ ಇದು. ಹೀಗೆ, ಪ್ರತಿಯೊಂದು ಸಂದರ್ಭದಲ್ಲಿ ಹೀರೋ ಮೇಲೆ ಅವಲಂಬಿತವಾಗುವ ಸಮಯ ಇದಾಗಿದೆ.
ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಪ್ರೆಸ್‌ಮೀಟ್, ಆಡಿಯೋ ಕಾರ್ಯಕ್ರಮ, ಪ್ರಿ-ರಿಲೀಸ್ ಕಾರ್ಯಕ್ರಮ, ಪ್ರಚಾರದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಹೀರೋ ಮುಂದೆ ನಿಲ್ಲಬೇಕು. ಇದು ಎಲ್ಲ ಸಿನಿ ಇಂಡಸ್ಟ್ರಿಯಲ್ಲೂ ಇರುವ ಟ್ರೆಂಡ್. ಈ ಟ್ರೆಂಡ್‌ನ ದಾಸ ದರ್ಶನ್ ಬ್ರೇಕ್ ಮಾಡಿದ್ದಾರೆ. ಮುಂದೆ ಓದಿ....
'ದರ್ಶನ್ರನ್ನು ನೋಡಲೇಬೇಕು' ಎಂದು ಕಾದಿದ್ದ ಅಜ್ಜಿಯನ್ನು ಭೇಟಿ ಮಾಡಿದ ಡಿ-ಬಾಸ್

ಹೀರೋ ನಾನಲ್ಲ ಎನ್ನುವ ದರ್ಶನ್
ದರ್ಶನ್ ಪ್ರತಿ ಸಿನಿಮಾದಲ್ಲೂ ನಾನು ಈ ಚಿತ್ರದ ಹೀರೋ ಅಲ್ಲ ಅಂತಾನೇ ಹೇಳ್ತಾರೆ. ಈ ಚಿತ್ರಕ್ಕೆ ನಿಜವಾದ ಹೀರೋ ನಿರ್ಮಾಪಕ, ಆಮೇಲೆ ನಿರ್ದೇಶಕ ನಂತರ ನಾನು ಕೊನೆಯಲ್ಲಿ ಅಂತಾರೆ. ರಾಬರ್ಟ್ ವಿಚಾರದಲ್ಲೂ ಡಿ ಬಾಸ್ ಅದೇ ಮಾತುಗಳನ್ನು ಮುಂದುವರಿಸಿದ್ದಾರೆ. ಆಂಧ್ರದಲ್ಲಿ ನಡೆದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಜಗಪತಿ ಬಾಬು ನಿಜವಾದ ಹೀರೋ. ಅವರ ಪಾತ್ರದಿಂದಲೇ ನಮ್ಮ ಸಿನಿಮಾ ಇದೆ ಎಂದರು. ಉಮಾಪತಿ ಮೊದಲನೇ ಹೀರೋ ಎಂದರು.

ವೇದಿಕೆಗಳಲ್ಲಿ ಹಿಂದೆ ನಿಲ್ಲುವ ಡಿ ಬಾಸ್
ಸಿನಿಮಾಗೆ ಸಂಬಂಧಪಟ್ಟ ಯಾವುದೇ ವೇದಿಕೆಗಳಾಗಲಿ ದರ್ಶನ್ ಹಿಂದೆ ನಿಲ್ಲುವುದನ್ನು ಕಾಣಬಹುದು. ಗ್ರೂಪ್ ಫೋಟೋಗಳ ಸಂದರ್ಭದಲ್ಲಿ ಗಮನಿಸಿದರೆ ದರ್ಶನ್ ಯಾವಾಗಲೂ ಹಿಂದೆ ಹೆಜ್ಜೆಯಿಟ್ಟು ಉಳಿದವರಿಗೆ ಮುಂದೆ ಜಾಗ ಮಾಡಿಕೊಡ್ತಾರೆ. ಈ ಹಿಂದೆ ಕುರುಕ್ಷೇತ್ರ ಸಿನಿಮಾದ ವೇಳಯೂ ಅಷ್ಟೇ, ಯಜಮಾನ ಸಿನಿಮಾದ ವೇಳೆಯೂ ಇದನ್ನು ಗಮನಿಸಬಹುದು.
'ನಾವು ಯಾವ ಜಾತಿಗೋಸ್ಕರ ಹುಟ್ಟಿಲ್ಲ'- ಹುಬ್ಬಳ್ಳಿಯಲ್ಲಿ ದರ್ಶನ್ ಖಡಕ್ ಮಾತು

ಹುಬ್ಬಳ್ಳಿಯಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ದಾಸ
ಹುಬ್ಬಳ್ಳಿಯಲ್ಲಿ ನಡೆದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಮೊದಲ ಸಾಲಿನಲ್ಲಿ ಕುಳಿತುಕೊಂಡಿಲ್ಲ. ಎರಡು, ಮೂರು ಸಾಲು ಬಿಟ್ಟು ಮಧ್ಯದಲ್ಲಿ ಹೋಗಿ ಕುಳಿತುಕೊಂಡರು. ಸಹಜವಾಗಿ ಹೀರೋಗಳು ಮೊದಲ ಸಾಲಿನಲ್ಲಿ ಇರ್ತಾರೆ ಹಾಗೂ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ರಾಬರ್ಟ್ ಕಾರ್ಯಕ್ರಮದಲ್ಲಿ ದರ್ಶನ್ ಎಲ್ಲೋ ಮಧ್ಯದಲ್ಲಿ ಕುಳಿತಿದ್ದು ಕಂಡು ಬಂತು.

ವೇದಿಕೆಗಳಲ್ಲಿ ಹೊಸ ಕಲಾವಿದರಿಗೆ ಅವಕಾಶ
ದರ್ಶನ್ ನಟನೆಯ ಎಲ್ಲ ಸಿನಿಮಾ ಕಾರ್ಯಕ್ರಮಗಳಲ್ಲಿ ಎಲ್ಲ ಕಲಾವಿದರಿಗೂ ವೇದಿಕೆ ಮೇಲೆ ಬರುವ ಅವಕಾಶ ಮಾಡಿಕೊಡಲಾಗುತ್ತದೆ. ಸಣ್ಣ-ಪುಟ್ಟ ಪಾತ್ರ, ಪೋಷಕ ಪಾತ್ರ, ಗಾಯಕರು, ತಾಂತ್ರಿಕ ವರ್ಗಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ. ರಾಬರ್ಟ್ ಕಾರ್ಯಕ್ರಮದಲ್ಲೂ ಇದು ಕಂಡು ಬಂತು. ಧರ್ಮಣ್ಣ, ದಿಲೀಪ್, ತೇಜಸ್ವಿನಿ ಪ್ರಕಾಶ್, ಐಶ್ವರ್ಯ ಪ್ರಸಾದ್, ಸೋನಾಲ್, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ ಹಾಗೂ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರು ಅಭಿಷೇಕ್ ಅಂಬರೀಶ್, ಜಮೀರ್ ಅಹ್ಮದ್ ಖಾನ್ ಪುತ್ರ, ಯುವ ನಟ ಧ್ರುವನ್ ಅವರಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.