For Quick Alerts
  ALLOW NOTIFICATIONS  
  For Daily Alerts

  ‘ಲೈಫ್ ಜೊತೆ ಒಂದ್ ಸೆಲ್ಫಿ’ ತೆಗೆದುಕೊಳ್ಳಲಿರುವ ಡಿ ಬಾಸ್

  By Pavithra
  |

  'ಲೈಫ್ ಜೊತೆ ಒಂದ್ ಸೆಲ್ಫಿ' ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾ. ಪ್ರಜ್ವಲ್ ದೇವರಾಜ್ , ನೆನಪಿರಲಿ ಪ್ರೇಮ್, ಹರಿಪ್ರಿಯಾ ಅಭಿನಯದ ಚಿತ್ರ ಇದಾಗಿದ್ದು ಸದ್ಯ ಸಿನಿಮಾ ಚಿತ್ರೀಕರಣ ಮುಗಿಸಿ ಇಂದು(ಜೂನ್ 15) ಟ್ರೇಲರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

  ಸಹೋದರ ನಿರ್ದೇಶನದ ನಾದಿನಿ ಕಥೆ ಬರೆದಿರುವ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರದ ಆಡಿಯೋ ಮತ್ತು ಟ್ರೇಲರ್ ಅನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾ ಚಿತ್ರೀಕರಣದ ವೇಳೆ ಸೆಟ್ ಗೂ ದರ್ಶನ್ ಭೇಟಿ ಕೊಟ್ಟಿದ್ದರು.

  ನಟಿ ಹರಿಪ್ರಿಯಾ ಮಾಡಿರುವ ಈ ಕೆಲಸಕ್ಕೆ ಭೇಷ್ ಎನ್ನಲೇಬೇಕು.! ನಟಿ ಹರಿಪ್ರಿಯಾ ಮಾಡಿರುವ ಈ ಕೆಲಸಕ್ಕೆ ಭೇಷ್ ಎನ್ನಲೇಬೇಕು.!

  ಇಂದು ಸಂಜೆ ನಡೆಯುವ ಆಡಿಯೋ ಮತ್ತು ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ದರ್ಶನ್ ಜೊತೆಯಲ್ಲಿ ಸದ್ಯ ಸ್ಯಾಂಡಲ್ ವುಡ್ ಕೃಷ್ಣನಾಗಿರುವ ರವಿಚಂದ್ರನ್ ಕೂಡ ವಿಶೇಷ ಅತಿಥಿಯಾಗಿ ಭಾಗಿ ಆಗಲಿದ್ದಾರೆ.

  ಸಾಕಷ್ಟು ದಿನಗಳ ನಂತರ ದಿನಕರ್ ತೂಗುದೀಪ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು ವಿಭಿನ್ನ ಕಥಾಗಂದರವನ್ನು ಹೊಂದಿದೆ. ವಿಶೇಷ ಪಾತ್ರದಲ್ಲಿ ನಟಿ ಸುಧಾರಾಣಿ ಕೂಡ ಕಾಣಿಸಿಕೊಂಡಿರುವುದು ಸಿನಿಮಾದಲ್ಲಿನ ವಿಶೇಷ.

  English summary
  Kannada actor Darshan will release the 'Life jothe ond selfie' movie trailer and songs. Haripriya, Prajwal and Prem acted in movie 'Dinakar Thoogudeepa directed the movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X