For Quick Alerts
  ALLOW NOTIFICATIONS  
  For Daily Alerts

  ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಸಮಾರಂಭ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕ ಕೃಷಿ ಇಲಾಖೆಯ ರಾಯಭಾರಿಯಾಗಿ ಆಯ್ಕೆಯಾಗಿರುವ ವಿಚಾರ ಗೊತ್ತೆ ಇದೆ. ಈ ಸಂಬಂಧ ಕೃಷಿ ಇಲಾಖೆಯಿಂದ ಅಧಿಕೃತ ಆದೇಶವೂ ಪ್ರಕಟವಾಗಿದೆ.

  ಇದೀಗ, ಕೃಷಿ ಇಲಾಖೆಯ ರಾಯಭಾರಿಯಾಗಿ ನಟ ದರ್ಶನ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಮಾರ್ಚ್ 5 ರಂದು ಮಧ್ಯಾಹ್ನ ವಿಕಾಸಸೌಧದಲ್ಲಿ ಈ ಸಮಾರಂಭ ನಡೆಯಲಿದೆ.

  ಕೃಷಿ ಇಲಾಖೆಗೆ ದರ್ಶನ್ ರಾಯಭಾರಿ: ಹೊರಬಿತ್ತು ಅಧಿಕೃತ ಆದೇಶ

  ನಟ ದರ್ಶನ್ ಅವರು ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ತಿಳಿಸಿದ್ದರು.

  ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳು, ಕೃಷಿ ಇಲಾಖೆ ಜಾರಿಗೊಳಿಸುವ ನಿಯಮಗಳ ಪ್ರಚಾರದಲ್ಲಿ ಮತ್ತು ಕೃಷಿ ಚುಟವಟಿಕೆಗಳಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ದರ್ಶನ್ ಮಾಡಲಿದ್ದಾರೆ.

  ಅಂದ್ಹಾಗೆ, ನಟ ದರ್ಶನ್ ಅವರು ಮೈಸೂರಿನಲ್ಲಿ ಪಾರ್ಮ್ ಹೌಸ್ ಹೊಂದಿದ್ದು, ಹಲವು ಬಗೆಯ ಸಾಕು ಪ್ರಾಣಿಗಳನ್ನು ಪೋಷಿಸುತ್ತಾರೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರೈತರ ಬಗ್ಗೆ ಹಾಗೂ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಕಾಳಜಿ ಹೊಂದಿರುವ ನಟ ಎಂಬ ಕಾರಣಕ್ಕೆ ಕೃಷಿ ಇಲಾಖೆ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ.

  ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ

  ಇದನ್ನು ಮೀರಿ ಕೃಷಿ ಸಚಿವ ಬಿಸಿ ಪಾಟೀಲ್ ಹಾಗೂ ದರ್ಶನ್ ನಡುವೆ ಉತ್ತಮ ಸಂಬಂಧವಿದೆ. ಇಬ್ಬರು ನಡುವೆ ಒಳ್ಳೆಯ ಬಾಂಧವ್ಯ ಇದೆ. ಇದು ಸಹ ಒಂದು ಕಾರಣವಾಗಿದೆ.

  ವಿಕಾಸ ಸೌಧದಲ್ಲಿ ಡಿ ಬಾಸ್ ದರ್ಬಾರ್ | Darshan take oath as an Agriculture Department Ambassador
  English summary
  Actor Darshan will take oath as a Agriculture Department Ambassador on march 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X