For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಚಿತ್ರಕ್ಕೆ ಶುಭಕೋರಿದ ಚಾಲೆಂಜಿಂಗ್ ಸ್ಟಾರ್

  By Pavithra
  |
  Nagarahaavu 2018 : ರಮಾಚಾರಿ ಬಗ್ಗೆ ದರ್ಶನ್ ಮಾತು...! | FIlmibeat Kannada

  'ನಾಗರಹಾವು' ಸಿನಿಮಾ ಇಂದು ರಾಜ್ಯಾದಂತ್ಯ ನೂರಕ್ಕೂ ಹೆಚ್ಚು ಸಿನಿಮಾಮಂದಿರದಲ್ಲಿ ಮರು ಬಿಡುಗಡೆ ಆಗಿದೆ. 40 ವರ್ಷದ ನಂತರ ಮತ್ತೆ ತೆರೆ ಮೇಲೆ ಬರುತ್ತಿರುವ ಚಿತ್ರಕ್ಕೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿದ್ದು ಇಂದು ಮುಂಜಾನೆ ಆರು ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

  ಕನ್ನಡ ಸಿನಿಮಾ ಪ್ರೇಕ್ಷಕರ ಜೊತೆಯಲ್ಲಿ ಕಲಾವಿದರು ಕೂಡ ಚಿತ್ರ ನೋಡಲು ಕಾತುರರಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ 'ನಾಗರಹಾವು' ಸಿನಿಮಾ ಯಶಸ್ವಿ ಆಗಲಿ ಎಂದು ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

  "ಸಂಪತ್ ಕುಮಾರ್ ರವರನ್ನು ಸಾಹಸ ಸಿಂಹ ವಿಷ್ಣುವರ್ಧನರನ್ನಾಗಿ ಮಾಡಿದ ಕನ್ನಡ ಚಿತ್ರರಂಗದ ಮೈಲಿಗಲ್ಲಿನ ಚಿತ್ರ 'ನಾಗರಹಾವು' ನಾಳೆ ಮತ್ತೆ ಬಿಡುಗಡೆಯಾಗುತ್ತಿದೆ. ಈ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು. ಚಿತ್ರರಂಗಕ್ಕೆ ೨ ಅಮೂಲ್ಯ ರತ್ನಗಳನ್ನು ನೀಡಿದ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಬೆಳ್ಳಿಪರದೆಯ ಮೇಲೆ ಮತ್ತೆ ಭರ್ಜರಿಯಾಗಿ ವಿಜೃಂಭಿಸಲಿ" ಎಂದು ಟ್ವೀಟ್ ಮಾಡಿದ್ದಾರೆ ದರ್ಶನ್.

  ಈಗಾಗಲೇ ಸಾಕಷ್ಟು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಆಗಿದ್ದು ಅಭಿಮಾನಿಗಳು ರಾಮಾಚಾರಿಯನ್ನು ಕಣ್ತುಂಬಿಕೊಂಡಿದ್ದಾರೆ. ಹೊಸ ಚಿತ್ರಗಳಿಗೆ ಇರುವ ನಿರೀಕ್ಷೆಗಿಂತಲೂ ಹೆಚ್ಚಿನ ಭರವಸೆಯನ್ನು 'ನಾಗರಹಾವು' ಚಿತ್ರ ಮೂಡಿಸಿದ್ದು ಹೊಸ ತಂತ್ರಜ್ಞಾನಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ.

  ವಿಷ್ಣು ಹಾಗೂ 'ನಾಗರಹಾವು' ಚಿತ್ರಕ್ಕಿರುವ ನಂಟಿನ ಬಗ್ಗೆ ರವಿಚಂದ್ರನ್ವಿಷ್ಣು ಹಾಗೂ 'ನಾಗರಹಾವು' ಚಿತ್ರಕ್ಕಿರುವ ನಂಟಿನ ಬಗ್ಗೆ ರವಿಚಂದ್ರನ್

  English summary
  Kannada actor Darshan wishes to Nagarhaavu film team. The Nagarhaavu film is re-released today more than 100 cinema theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X