For Quick Alerts
  ALLOW NOTIFICATIONS  
  For Daily Alerts

  'ದರ್ಶನ್-53' ಚಿತ್ರದ ಟೈಟಲ್ ಏನು ಅಂತ ಸುಳಿವು ಸಿಕ್ತು.!

  |
  'ದರ್ಶನ್-53' ಚಿತ್ರದ ಟೈಟಲ್ ಏನು ಅಂತ ಸುಳಿವು ಸಿಕ್ತು..! | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಜೋಡಿಯಲ್ಲಿ ಮೂಡಿಬರಲಿರುವ ಚಿತ್ರದ ಟೈಟಲ್ ಏನು ಎಂಬುದು ಸದ್ಯದ ಕುತೂಹಲ. ಈಗಾಗಲೇ ಸ್ಕ್ರೀಪ್ಟ್ ಕೆಲಸ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ಆರಂಭದಿಂದ ಶೂಟಿಂಗ್ ಮಾಡುವ ಯೋಚನೆಯಲ್ಲಿದ್ದಾರೆ.

  ಅದಕ್ಕೂ ಮೊದಲೇ D-53 ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ, ದರ್ಶನ್ ಮತ್ತು ತರುಣ್ ಕಾಂಬಿನೇಷನ್ ಚಿತ್ರದ ಟೈಟಲ್ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಘೋಷಣೆಯಾಗಲಿದೆಯಂತೆ.

  ದರ್ಶನ್ 'D-53' ಚಿತ್ರಕ್ಕೂ ಸಲ್ಮಾನ್ ಖಾನ್ ಗೂ ಸಂಬಂಧವಿದ್ಯಾ.?

  ಅಲ್ಲಿಗೆ ಟೈಟಲ್ ಬಗ್ಗೆ ಒಂದು ಸುಳಿವು ಬಿಟ್ಟುಕೊಟ್ಟಿದೆ ಚಿತ್ರತಂಡ. ಸ್ವರ್ತ ನಿರ್ಮಾಪಕರೇ ಹೇಳಿದಾಗೆ, 'ರಾಬರ್ಟ್' ಅಥವಾ 'ಕಾಟೇರಾ' ಎಂಬ ಎರಡು ಶೀರ್ಷಿಕೆ ನಿರ್ದೇಶಕರ ಬಳಿ ಇದೆ. ಅದರಲ್ಲಿ ಯಾವುದಾದರೂ ಒಂದು ಫೈನಲ್ ಆಗಬಹುದು ಎಂದಿದ್ದರು.

  'D 53' ಪೋಸ್ಟರ್ ಹಿಂದಿನ ಪ್ರತಿಭಾವಂತ ಇವರೇ

  ಇದೀಗ, ಕ್ರಿಸ್ ಮಸ್ ಹಬ್ಬಕ್ಕೆ ಬಹಿರಂಗಪಡಿಸುತ್ತಿರುವುದರಿಂದ 'ರಾಬರ್ಟ್' ಬಹುತೇಕ ಅಂತಿಮವಾಗಿರಬಹುದು ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಘೋಷಣೆಯಾಗುವವರೆಗೂ ಅದನ್ನ ನಂಬುವಂತಿಲ್ಲ.

  ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ಸೂಪರ್ ಸಿನಿಮಾ 'ಚೌಕ'ದಲ್ಲಿ ದರ್ಶನ್ ರಾಬರ್ಟ್ ಎಂಬ ಪಾತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅದೇ ಪಾತ್ರವನ್ನಿಟ್ಟು ಈಗ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  ಇನ್ನುಳಿದಂತೆ ಈ ಚಿತ್ರವನ್ನ ಹೆಬ್ಬುಲಿ ಖ್ಯಾತಿಯ ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡ್ತಿದ್ದಾರೆ. ಯಜಮಾನ ಸಾಂಗ್ ಶೂಟಿಂಗ್, ಒಡೆಯ ನಂತರ ದರ್ಶನ್ ಈ ಸಿನಿಮಾವನ್ನ ಆರಂಭಿಸಬಹುದು. ಅದಾದ ಬಳಿಕ ಗಂಡುಗಲಿ ವೀರಮದಕರಿ ಚಿತ್ರವನ್ನ ಕೈಗೆತ್ತಿಕೊಳ್ಳಬಹುದು ಎನ್ನಲಾಗುತ್ತಿದೆ.

  English summary
  The title of challenging star Darshan’s 53rd film which is titled as D53 will be released on Christmas. The film is directed by Tharun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X