»   » 'ಲಂಡನ್'ನಲ್ಲಿ ದರ್ಶನ್ ರನ್ನ ಭೇಟಿ ಮಾಡಿದ ಅಭಿಮಾನಿಯೊಬ್ಬರು ಬರೆದಿರುವ ಪತ್ರ.!

'ಲಂಡನ್'ನಲ್ಲಿ ದರ್ಶನ್ ರನ್ನ ಭೇಟಿ ಮಾಡಿದ ಅಭಿಮಾನಿಯೊಬ್ಬರು ಬರೆದಿರುವ ಪತ್ರ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನ ಬಳಗ ದೊಡ್ಡದು. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಡಿ-ಬಾಸ್ ಫಾಲೋವರ್ಸ್ ಇದ್ದಾರೆ. ಅವರನ್ನ ಇಷ್ಟಪಡುವ, ಆರಾಧಿಸುವ, ಅಪರೂಪದ ಅಭಿಮಾನಿಗಳು ಇದ್ದಾರೆ.

ಇತ್ತೀಚೆಗಷ್ಟೇ ಪ್ರಶಸ್ತಿ ಪಡೆಯಲು ದರ್ಶನ್ ಅವರು ಲಂಡನ್ ಗೆ ಹೋಗಿದ್ದ ಸಂಧರ್ಭದಲ್ಲಿ ಇಂತಹ ಅಭಿಮಾನಿಯೊಬ್ಬರು ದರ್ಶನ್ ಅವರನ್ನ ಭೇಟಿ ಮಾಡಿದ್ದಾರೆ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ.

ನಂತರ, ಆ ಅಭಿಮಾನಿ ತಮಗಾದ ಅದ್ಭುತ ಅನುಭದ ಬಗ್ಗೆ ಒಂದು ಪತ್ರವನ್ನ ಬರೆದಿದ್ದಾರೆ. ಈ ಪತ್ರದಲ್ಲಿ ಏನಿದೆ? ಮುಂದೆ ಓದಿ....

(ಪತ್ರದಲ್ಲಿರುವುದನ್ನ ಯಥಾವತ್ತು ಹಾಗೆ ಬರೆಯಲಾಗಿದೆ)

ಲಂಡನ್ ಗೆ ದರ್ಶನ್ ಬಂದಿದ್ದಾಗ...

ಕನ್ನಡ ಚಿತ್ರರಂಗದ ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ನಟ ಭಯಂಕರ ಸುಪುತ್ರರಾದ ನಮ್ಮ ನಿಮ್ಮೆಲ್ಲರ ನೆಚ್ಚಿನ ದರ್ಶನ್ ತೂಗುದೀಪ ಅವರು ಇದೇ ಅಕ್ಟೋಬರ್ 19ರ ದೀಪಾವಳಿ ಹಬ್ಬದಂದು U.K ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಲಂಡನ್ನಿಗೆ ಆಗಮಿಸಿದ್ದರು. ಅವರ ಬಿಡುವಿನ ಸಮಯವನ್ನ ಖಚಿತಪಡಿಸಿಕೊಂಡು ಸ್ವತಃ ದರ್ಶನ್ ಅವರ ಅಭಿಮಾನಿಯಾದ ನಾನು ಅವರನ್ನ ಭೇಟಿ ಮಾಡಲು ನನ್ನ ಪರಿವಾರ ಹಾಗೂ ಕೆಲವು ಸ್ನೇಹಿತರೊಂದಿಗೆ ಅವರನ್ನ ಅಕ್ಟೋಬರ್ 21ರ ಬೆಳಿಗ್ಗೆ ಸರಿ ಸುಮಾರು 11.30ಕ್ಕೆ ಅವರು ತಂಗಿದ್ದ ಸ್ಥಳದಲ್ಲಿ ಭೇಟಿಯಾದೆವು'' - ದರ್ಶನ್ ಅಭಿಮಾನಿ

ಸಾಮಾನ್ಯ ಜನರಿಗೆ ಮಾದರಿಯಾದ 'ಡಿ'ಬಾಸ್ ದರ್ಶನ್ ಹುಡುಗರು

ನನಗೊಂದು ಅವಿಸ್ಮರಣೀಯ ದಿನ

''ನನಗೊಂದು ಅವಿಸ್ಮರಣೀಯ ದಿನವಾಗಿತ್ತು. ನೆಚ್ಚಿನ ನಟನನ್ನು ತುಂಬಾ ಹತ್ತಿರದಿಂದ ನೋಡಿ ಮಾತನಾಡಿಸಿದ ಅನುಭವ ಎಲ್ಲವೂ ಸಂತೋಷವನ್ನುಂಟು ಮಾಡಿತ್ತು. ಅಂತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವವುಳ್ಳವರು ದರ್ಶನ್ ಹಾಗೂ ತುಂಬ ಮೃದು ಮನಸ್ಸಿನ ವ್ಯಕ್ತ ಎನ್ನುವುದು ಅಷ್ಟೇ ಸರಿ'' - ದರ್ಶನ್ ಅಭಿಮಾನಿ,

'ಹೈದರಾಬಾದ್'ನಲ್ಲಿ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿದ 'ಕುರುಕ್ಷೇತ್ರ'.!

15 ನಿಮಿಷಗಳ ಕಾಲ ಮಾತನಾಡಿದರು

''ನಮ್ಮ ಪರಿಚಯವನ್ನ ಮಾಡಿಕೊಂಡು ಅವರ ಬಗ್ಗೆ ವಿಚಾರಿಸಿದೆವು. ಅತ್ಯಂತ ಸಂತೋಷದಿಂದ ನಮ್ಮೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತನಾಡಿದ ವ್ಯಕ್ತಿ, ಅದುವೇ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್''

'ಲಂಡನ್'ನಲ್ಲಿ ದರ್ಶನ್ ಪಡೆದ ಪ್ರಶಸ್ತಿ ಬಗ್ಗೆ ಇದ್ದ ಗೊಂದಲಕ್ಕೆ ಉತ್ತರ.!

ಕರುನಾಡ ಗೌರವ ಕಾಪಾಡುವ ದೀಪ

''ಬದುಕಿನಲ್ಲಿ 'ಸಾರಥಿ'ಯಾಗಿ, ನಡೆದಾಡೋ 'ಐರಾವತ'ನ ಪಡೆ ನಡೆಸಿ ಪ್ರೀತಿಗೆ 'ರಾಮ'ನಾಗಿ, ಕುರುಕ್ಷೇತ್ರದ 'ದುರ್ಯೋಧನ'ನಾಗಿ, ಬೆಳಕು ನೀಡುವ 'ರಾಯಣ್ಣ'ನಂತೆ ಕರುನಾಡ ಗೌರವ ಕಾಪಾಡುವ ಈ ದೀಪ ದರ್ಶನ್ ತೂಗುದೀಪ'' - ದರ್ಶನ್ ಅಭಿಮಾನಿ

ಆ ದೇವರ ಆಶೀರ್ವಾದವಿರಲಿ

''ಎಲ್ಲರ ಪ್ರೀತಿ, ಹಾರೈಕೆ ಹಾಗೂ ಆಶೀರ್ವಾದ ಅವರಮೇಲಿರಲಿ. ಮಗುವಿನಂಥ ಮನಸಿಸನ, ದೀಪದಂಥ ವ್ಯಕ್ತಿತ್ವದ ನಮ್ಮ ದರ್ಶನ್ ಅವರಿಗೆ ದೇವರು ನೂರಾರು ಕಾಲ ಆಯುಷ್ಯ, ಆರೋಗ್ಯ ಹಾಗೂ ಐಶ್ವರ್ಯವನ್ನ ಕೊಟ್ಟು ಕಾಪಾಡಲಿ'' - ಇಂತಿ ನಿಮ್ಮ ಪ್ರೀತಿಯ ನವೀನ್ ಕುಮಾರ್ ಆರ್.ಓ (ಎಂಟ್ ಥಾಮಸ್ ರೋಡ್, ಡರ್ಬಿ-ಯು.ಕೆ)

'ಪ್ರೇಮ ಬರಹ'ಕ್ಕೆ ದರ್ಶನ್, ಅಂಬಿ ಬರಮಾಡಿಕೊಳ್ಳುವ ಆ ಸೆಲೆಬ್ರಿಟಿ ಯಾರು.?

English summary
Challenging Star Darshan's fan meet Their Favorite Actor in London. and He also wrote a letter about this. ಲಂಡನ್ ನಲ್ಲಿ ಅಭಿಮಾನಿಯೊಬ್ಬರು ದರ್ಶನ್ ಅವರನ್ನ ಭೇಟಿ ಮಾಡಿದರು. ಈ ಬಗ್ಗೆ ಒಂದು ಅಭಿಮಾನದ ಪತ್ರ ಕೂಡ ಬರೆದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X