Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಅಪಘಾತದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ನೀಡಿದ ಪ್ರತಿಕ್ರಿಯೆ
Recommended Video

ನಟ ದರ್ಶನ್ ತಮ್ಮ ಆರೋಗ್ಯ ಸ್ಥಿತಿಯ ಹೇಗಿದೆ ಎಂಬುದನ್ನು ಅವರೇ ಆಡಿಯೋ ಮೂಲಕ ಕೆಲ ನಿಮಿಷಗಳ ಹಿಂದೆ ತಿಳಿಸಿದ್ದಾರೆ. ಈಗ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಅಪಘಾತದ ವಿಷಯ ತಿಳಿದ ತಕ್ಷಣ ಗಾಬರಿಯಿಂದ ಮೈಸೂರಿನ ಆಸ್ಪತ್ರೆಗೆ ಪತ್ನಿ ವಿಜಯಲಕ್ಷ್ಮಿ ಬಂದರು. ಬಳಿಕ ಅವರ ಆರೋಗ್ಯ ವಿಚಾರಿಸಿ ಕೆಲ ಸಮಯ ಅವರ ಜೊತೆಗೆ ಮಾತನಾಡಿದರು. ಈ ವೇಳೆ ನಟ ದರ್ಶನ್ ಪುತ್ರ ವಿನೀಶ್ ಸಹ ಅಮ್ಮನ ಜೊತೆ ಇದ್ದರು.
ದರ್ಶನ್
ಸ್ಥಿತಿ
ಹೇಗಿದೆ?
ವಿನೋದ್
ಪ್ರಭಾಕರ್
ನೀಡಿದ
ಮಾಹಿತಿ
ಸದ್ಯ ದರ್ಶನ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯಲಕ್ಷ್ಮಿ ''ಅಭಿಮಾನಿಗಳು ಆತಂಕ ಪಡಬೇಡಿ ಅವರಿಗೆ ಏನು ಆಗಿಲ್ಲ. ಕೈ ಮೂಳೆ ಫ್ರಾಕ್ಚರ್ ಆಗಿತ್ತು ಅಷ್ಟೇ'' ಎಂದು ಹೇಳಿದ್ದಾರೆ. ಮುಂದೆ ಓದಿ...

ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯೆ
''ಇನ್ನು ಕೆಲವು ಗಂಟೆಗಳಲ್ಲಿ ವಾರ್ಡ್ ಗೆ ಶಿಫ್ಟ್ ಮಾಡುತ್ತಾರೆ. ಅವರ ಬಲಗೈಗೆ ಸಣ್ಣ ಪುಟ್ಟ ಗಾಯಗಳು ಆಗಿವೆ. ಈಗ ಆರಾಮಾಗಿದ್ದು, ನಮ್ಮ ಜೊತೆಗೆ ಮಾತನಾಡಿದ್ದಾರೆ. ಡಾಕ್ಟರ್ ಎಲ್ಲ ಚಿಕಿತ್ಸೆ ನೀಡಿದ್ದಾರೆ. ಇನ್ನು ಎರಡು ವಾರಗಳಲ್ಲಿ ಅವರು ಶೂಟಿಂಗ್ ಗೆ ಮರಳಬಹುದು.'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

ಗಾಬರಿ ಪಡುವ ಅಗತ್ಯವಿಲ್ಲ
''ಅಭಿಮಾನಿಗಳು ಆತಂಕ ಪಡಬೇಡಿ ಅವರಿಗೆ ಏನು ಆಗಿಲ್ಲ. ಕೈ ಮೂಳೆ ಫ್ರಾಕ್ಚರ್ ಆಗಿತ್ತು. ಆ ಕಾರಣ ಕೆಲವು ದಿನ ವಿಶ್ರಾಂತಿ ಬೇಕಾಗಿದೆ. ಅದು ಬಿಟ್ಟರೆ ಗಾಬರಿ ಪಡುವ ಅಗತ್ಯ ಏನು ಇಲ್ಲ. ಸದ್ಯಕ್ಕೆ ಐ ಸಿ ಯು ನಲ್ಲಿ ಇದ್ದಾರೆ. ಒಂದು ಗಂಟೆಯ ಬಳಿಕ ವಾರ್ಡ್ ಗೆ ಶಿಫ್ಟ್ ಮಾಡಲಾಗುವುದು ಎಂದು ಡಾಕ್ಟರ್ ತಿಳಿಸಿದ್ದಾರೆ.'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ
ಆಸ್ಪತ್ರೆಯ
ಹಾಸಿಗೆ
ಮೇಲೆ
ಮಲಗಿರುವ
ದರ್ಶನ್
ಮಾತನ್ನು
ಒಮ್ಮೆ
ಕೇಳಿಸಿಕೊಳ್ಳಿ!

ಅಮ್ಮ, ನಾನು, ವಿನೀಶ್ ಎಲ್ಲ ಇದ್ದೇವೆ
''ದರ್ಶನ್ ಜೊತೆಗೆ ಅಮ್ಮ, ನಾನು, ವಿನೀಶ್ ಎಲ್ಲ ಇದ್ದೇವೆ. ಅವರ ತಮ್ಮ ಕೂಡ ಬರುತ್ತಿದ್ದಾರೆ. ದೇವರಾಜ್, ಪ್ರಜ್ವಲ್ ದೇವರಾಜ್ ಅವರು ಕೂಡ ತುಂಬ ಚೆನ್ನಾಗಿ ಇದ್ದಾರೆ. ಅವರನ್ನು ಸಹ ಈಗ ಮಾತನಾಡಿಕೊಂಡು ಬಂದೆವು. ಅವರ ಕುಟುಂಬದವರು ಆಸ್ಪತ್ರೆಗೆ ಬಂದಿದ್ದಾರೆ. ಎಲ್ಲರೂ ಹುಷಾರಾಗಿ ಇದ್ದಾರೆ.'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

ಅಭಿಮಾನಿಗಳಿಗೆ ದರ್ಶನ್ ಮನವಿ
''ಎಲ್ಲರಿಗೂ ನಮಸ್ಕಾರ. ಅಭಿಮಾನಿಗಳನ್ನು ನಾನು ಅನ್ನದಾತರು ಎಂದು ಕರೆಯಲು ಇಷ್ಟ ಪಡುತ್ತಾನೆ. ನಿಮ್ಮ ದಯೆಯಿಂದ ನಾನು ಆರಾಮಾಗಿದ್ದೇನೆ. ನನಗೆ ಏನು ಆಗಿಲ್ಲ.'' ಎಂದು ಹೇಳುವ ಮೂಲಕ ಎಲ್ಲರಲ್ಲಿ ಇದ್ದ ಆತಂಕದ ವಾತವರಣವನ್ನು ಮರೆಯಾಗುವಂತೆ ಮಾಡಿದ್ದಾರೆ.
ಊಹಾಪೋಹಗಳನ್ನು
ಬಿಡಿ
:
ದರ್ಶನ್
ರನ್ನ
ಕಣ್ಣಾರೆ
ಕಂಡ
ಸಂದೇಶ್
ನಾಗರಾಜ್
ಹೇಳಿದಿಷ್ಟು!

ಆಸ್ಪತ್ರೆಗೆ ಯಾರು ಬರಬೇಡಿ
''ದಯವಿಟ್ಟು ಆಸ್ಪತ್ರೆಗೆ ಯಾರು ಬರಬೇಡಿ. ಇದು ನನ್ನ ಮನವಿ ಅಂತ ತಿಳಿದುಕೊಳ್ಳಿ. ಆಸ್ಪತ್ರೆಯಲ್ಲಿ ಇರುವ ಬೇರೆಯರಿಗೆ ನಮ್ಮಿಂದ ತೊಂದರೆ ಆಗಬಾರದು. ಇಂದು ಸಂಜೆ ಅಥವಾ ನಾಳೆ ನಿಮ್ಮ ಮುಂದೆ ನಾನೇ ಬರುತ್ತೇನೆ'' ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು
ಅಪಘಾತವಾದ ಆಡಿ ಕ್ಯೂ 7 ಕಾರು ದರ್ಶನ್ ಅವರದಾಗಿತ್ತು. ಕಾರಿನಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಸ್ನೇಹಿತ ಈ ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು. ದರ್ಶನ್ ಫ್ರೆಂಡ್ ಕಾರ್ ಡೈವಿಂಗ್ ಮಾಡುತ್ತಿದ್ದು, ದರ್ಶನ್ ಮುಂದಿನ ಸೀಟ್ ನಲ್ಲಿ ಕುಳಿತಿದ್ದರು.