»   » ಕಿಚ್ಚ ಸುದೀಪ್ ಬಚ್ಚನ್ 'ಸನ್ನಿಧಿ'ಯಿಂದ ದೀಪಾ ಔಟ್

ಕಿಚ್ಚ ಸುದೀಪ್ ಬಚ್ಚನ್ 'ಸನ್ನಿಧಿ'ಯಿಂದ ದೀಪಾ ಔಟ್

Posted By:
Subscribe to Filmibeat Kannada

ಸುದೀಪ್ ನಟನೆ, ಶಶಾಂಕ್ ನಿರ್ದೇಶನದ ಬಚ್ಚನ್ ಚಿತ್ರದಿಂದ ದೀಪಾ ಸನ್ನಿಧಿ ಔಟ್ ಆಗಿದ್ದಾರೆ. ಬಚ್ಚನ್ ಚಿತ್ರದ ಮೂವರು ನಾಯಕಿಯರಲ್ಲಿ ಒಬ್ಬರಾಗಿದ್ದ ದೀಪಾ, ಈಗ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅರೇ, ಮೂವರಲ್ಲಿ ಮೊದಲು ಆಯ್ಕೆಯಾಗಿದ್ದೇ ದೀಪಾ ತಾನೇ ಎಂಬುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರ 'ಹೌದು'. ಆದರೆ ಈಗ ಹೊರಹೋಗಿರುವುದೂ ಹೌದು.

ಬಚ್ಚನ್ ಚಿತ್ರಕ್ಕೆ ದೀಪಾ ಸನ್ನಿಧಿ, ಪಾರುಲ್ ಯಾದವ್ ಹಾಗೂ ಜಾಕಿ ಭಾವನಾ ಆಯ್ಕೆಯಾಗಿದ್ದರು. ಅವರಲ್ಲಿ ಮೊದಲು ಆಯ್ಕೆಯಾಗಿದ್ದೇ ದೀಪಾ, ನಂತರ ಪಾರುಲ್ ಬಂದರು. ಜಾಕಿ ಖ್ಯಾತಿಯ ಭಾವನಾ ಜಾಗಕ್ಕೆ ನಯನತಾರಾ ಬರಬೇಕಿತ್ತು. ಆದರೆ ಕೊನೆ ಘಳಿಗೆಯಲ್ಲಿ ಕೈಎತ್ತಿದ ನಯನತಾರಾ ಬದಲಿಗೆ ಬಂದವರು ಭಾವನಾ. ಈಗ ದೀಪಾ ಔಟ್!

ಈ ವಿಷಯವನ್ನು ನಟಿ ದೀಪಾ ಸನ್ನಿಧಿ ಹಾಗೂ ನಿರ್ದೇಶಕ ಶಶಾಂಕ್ ಇಬ್ಬರೂ ಹೌದೆಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಯಾಕೆ ಎಂಬುದೀಗ ಎಲ್ಲರ ಕುತೂಹಲ. ಅದಕ್ಕೆ ಕೂಡ ಈ ಇಬ್ಬರೂ ಕಾರಣವನ್ನು ವಿವರಿಸಿದ್ದಾರೆ. ಇಬ್ಬರೂ ಕೊಟ್ಟಿರುವ ಸ್ಪಷ್ಟೀಕರಣ ಒಂದೇ ಆಗಿರುವುದರಿಂದ ಯಾವುದನ್ನು ಹೇಳಿದರೂ ಒಂದೇ, ಓದಿಕೊಳ್ಳಿ...

"ಈ ಮೊದಲು ಇದ್ದಂತೆ ದೀಪಾ ಪಾತ್ರವಿಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೀಗಾಗಿ ಈಗ ಆ ಪಾತ್ರ ದೀಪಾ ಸನ್ನಿಧಿಗೆ ಸೂಟ್ ಆಗುವುದಿಲ್ಲ. ಈ ವಿಷಯವನ್ನು ನಟಿ ದೀಪಾ ಸನ್ನಿಧಿ ಹಾಗೂ ನಿರ್ದೇಶಕ ಶಶಾಂಕ್ ಇಬ್ಬರೂ ಪರಸ್ಪರ ಕುಳಿತು ಚರ್ಚಿಸಿದ್ದಾರೆ. ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ದೀಪಾ ನಟಿಸುವುದಿಲ್ಲ ಎಂಬುದು ಪಕ್ಕಾ ಸುದ್ದಿ. ದೀಪಾ ಜಾಗಕ್ಕೆ ಸದ್ಯ ಯಾರೂ ಆಯ್ಕೆಯಾಗಿಲ್ಲ.

ಈ ವಿಷಯ ನಟಿ ಹಾಗೂ ನಿರ್ದೇಶಕ ಇಬ್ಬರ ಕಡೆಯಿಂದಲೂ ಎಳ್ಳಷ್ಟೂ ಸಂಶಯಕ್ಕೆ ಅವಕಾಶವಿಲ್ಲದಂತೆ ಹೊರಬಿದ್ದಿದೆ. ಆದರೆ ಗಾಂಧಿನಗರದಲ್ಲಿ ಮಾತ್ರ ಬೇರೆಯದೇ ಸುದ್ದಿ ಓಡಾಡುತ್ತಿದೆ. 'ದೀಪಾ ಸನ್ನಿಧಿಯನ್ನು ಚಿತ್ರದಿಂದ ಹೊರಹಾಕಲು ಸೂಚಿಸಿದ್ದು ಬಚ್ಚನ್ ನಾಯಕ ಸುದೀಪ್' ಎಂಬುದು ಗಾಂಧಿನಗರದ ವರ್ತಮಾನ.

ಆದರೆ ಇದನ್ನು ದೀಪಾ ಆಗಲಿ, ಶಶಾಂಕ್ ಆಗಲೀ ಎಲ್ಲೂ ಹೇಳಿಲ್ಲ. ಆದರೂ ಹೀಗೆ ಸುದ್ದಿ ಹಬ್ಬಿರುವುದು ಹೌದು. ಈ ಸುದ್ದಿಗೆ ಸುದೀಪ್ ಅವರನ್ನು ಕೇಳುವ ಧೈರ್ಯವನ್ನು ಯಾರೂ ಮಾಡಿಲ್ಲ. ಅಷ್ಟಕ್ಕೂ ಸುದೀಪ್ ಅವರನ್ನು ಯಾಕೆ ಕೇಳಬೇಕು ಹೇಳಿ? ಹೊರಹಾಕಿದ ನಿರ್ದೇಶಕ, ಹೊರಬಂದ ನಟಿ ಇಬ್ಬರೂ ಸ್ಟಷ್ಟವಾಗಿ ಹೇಳಿದ ಮೇಲೆ ಇದಕ್ಕೆ ಫುಲ್ ಸ್ಟಾಪ್ ಹಾಕುವುದೇ ಒಳ್ಳೆಯದು, ನೀವೇನಂತೀರಾ? (ಒನ್ ಇಂಡಿಯಾ ಕನ್ನಡ)

English summary
Actress Deepa Sannidhi went out from Shashank Movie Bachchan. Kichcha Sudeep is Lead in Bachchan movie and Deepa was the one of Heroine in the three. But now, because of some changes in the script, deepa will not act in this movie.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada