»   » 'ದೀಪಾವಳಿ' ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಕನ್ನಡದ ಹಾಡುಗಳಿವು

'ದೀಪಾವಳಿ' ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಕನ್ನಡದ ಹಾಡುಗಳಿವು

Posted By:
Subscribe to Filmibeat Kannada

'ದೀಪಾವಳಿ' ಅಂದ ಕೂಡಲೆ ಥಟ್ ಅಂತ ನೆನಪಾಗುವುದು ದೀಪ ಹಾಗೂ ಪಟಾಕಿ. ಅದರ ಜೊತೆಗೆ ಕನ್ನಡದ ಕೆಲವು ಹಾಡುಗಳು.

'ದೀಪಾವಳಿ ಹಬ್ಬ'ದ ಸಂಭ್ರಮವನ್ನ ಹೆಚ್ಚು ಮಾಡುವ ಹಾಡುಗಳು ಕನ್ನಡ ಚಿತ್ರಗಳಲ್ಲಿವೆ. ಸಿನಿಮಾದ ಕಥೆ-ಸಂದರ್ಭಕ್ಕೆ ತಕ್ಕ ಹಾಗೆ ಹುಟ್ಟಿಕೊಂಡ ಈ ಹಾಡುಗಳು ಎಷ್ಟೋ 'ದೀಪಾವಳಿ' ಕಳೆದರೂ ಮತ್ತೆ ಮತ್ತೆ ನೆನಪಾಗುತ್ತದೆ. ಅಂದಹಾಗೆ, ದೀಪಾವಳಿ ಹಬ್ಬದ ವಿಶೇಷವಾಗಿ ಕನ್ನಡದ ಹಾಡುಗಳನ್ನು ಕೇಳಲು ಫೋಟೋ ಸ್ಲೈಡ್ ಗಳತ್ತ ಗಮನ ಹರಿಸಿ...

ದೀಪಾವಳಿ.. ದೀಪಾವಳಿ..

'ಮುದ್ದಿನ ಮಾವ' ಚಿತ್ರದ ದೀಪಾವಳಿ.. ದೀಪಾವಳಿ.. ಹಾಡನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ. ಡಾ.ರಾಜ್ ಕುಮಾರ್ ಹಾಡಿರುವ ಈ ಹಾಡು ದೀಪಾವಳಿ ಹಬ್ಬದ ಒಂದು ಭಾಗವಾಗಿಬಿಟ್ಟಿದೆ.

'ದೀಪದಿಂದ ದೀಪವ..'

'ದೀಪದಿಂದ ದೀಪವ..' ಎನ್ನುವ ಈ ಹಾಡು ಪ್ರತಿ ವರ್ಷ ದೀಪಾವಳಿ ಬಂದಾಗ ನೆನಪಾಗುತ್ತದೆ. ಶಿವರಾಜ್ ಕುಮಾರ್ ಅಭಿನಯದ 'ನಂಜುಂಡಿ' ಚಿತ್ರದ ಈ ಹಾಡಿನಲ್ಲಿ ದೀಪದ ರೀತಿ ಪ್ರೀತಿಯನ್ನು ಬೆಳಗಿ ಎಂಬ ಅರ್ಥ ಇದೆ

'ಪಟ ಪಟ ಪಟಾಕಿ..'

ದೀಪಾವಳಿ ಅಂದರೆ ಪಟಾಕಿ ಎನ್ನುವವರಿಗೂ ಒಂದು ಹಾಡು ಇದೆ. ಗಣೇಶ್ ಅಭಿನಯದ 'ಚೆಲ್ಲಾಟ' ಚಿತ್ರದಲ್ಲಿ 'ಪಟ ಪಟ ಪಟಾಕಿ..' ಹಾಡು ಸಣ್ಣ ಮಕ್ಕಳಿಗೆ ಸಖತ್ ಫೇವರೆಟ್.

'ಧರ್ಮದ ದೀಪ ಹಚ್ಚಬೇಕು..'

'ಧರ್ಮ ದೇವತೆ' ಚಿತ್ರದ 'ಧರ್ಮದ ದೀಪ ಹಚ್ಚಬೇಕು..' ಹಾಡು ದೀಪದ ಮಹತ್ವವನ್ನು ಸಾರಿದೆ.

English summary
Watch video : Deepavali festival special songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X