»   » ಕಾನ್ಸ್ ಟೇಬಲ್ ಸರೋಜಗೆ ಪೈಪೋಟಿ ನೀಡಲು ಬಂದ 'ಜಾಗ್ವಾರ್' ಜಾಣೆ

ಕಾನ್ಸ್ ಟೇಬಲ್ ಸರೋಜಗೆ ಪೈಪೋಟಿ ನೀಡಲು ಬಂದ 'ಜಾಗ್ವಾರ್' ಜಾಣೆ

Posted By:
Subscribe to Filmibeat Kannada

'ಟಗರು' ಎಂದ ಕೂಡಲೆ 'ಟಗರು ಶಿವ', 'ಡಾಲಿ', 'ಚಿಟ್ಟೆ', 'ಕಾಕ್ ರೋಚ್' ಹೆಸರುಗಳು ಎಷ್ಟು ಜನರ ನೆನಪಿಗೆ ಬರುತ್ತೋ, ಅದಕ್ಕಿಂತ ಹೆಚ್ಚು ಜನರಿಗೆ 'ಕಾನ್ಸ್ ಟೇಬಲ್ ಸರೋಜ' ಥಟ್ ಅಂತ ನೆನಪಾಗುತ್ತಾರೆ. ಅಷ್ಟರಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ ಕಾನ್ಸ್ ಟೇಬಲ್ ಸರೋಜ ಅಲಿಯಾಸ್ ತ್ರಿವೇಣಿ.

'ಟಗರು' ಸಿನಿಮಾದಲ್ಲಿ ಮಿಸ್ ಸಿ.ಎಸ್ ಅರ್ಥಾತ್ ಕಾನ್ಸ್ ಟೇಬಲ್ ಸರೋಜ ಕಾಣಿಸಿಕೊಳ್ಳುವುದು ಕೆಲವೇ ಕೆಲವು ನಿಮಿಷಗಳು ಮಾತ್ರ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದವರು ಕಾನ್ಸ್ ಟೇಬಲ್ ಸರೋಜ.

ಇಲ್ಲಿಯವರೆಗೂ ಸಣ್ಣ-ಪುಟ್ಟ ಪಾತ್ರಗಳನ್ನೇ ನಿಭಾಯಿಸಿಕೊಂಡು ಬಂದ ತ್ರಿವೇಣಿಗೆ 'ಟಗರು' ಚಿತ್ರದಿಂದ ಅದೃಷ್ಟ ಖುಲಾಯಿಸಿದೆ. ಕನ್ನಡದ 'ರಾಜಮಾರ್ತಾಂಡ' ಚಿತ್ರಕ್ಕೆ ನಾಯಕಿ ಆಗುವ ಅವಕಾಶ ತ್ರಿವೇಣಿಗೆ ಒಲಿದು ಬಂದಿದೆ. ಈ ನಡುವೆಯೇ ಕಾನ್ಸ್ ಟೇಬಲ್ ಸರೋಜಗೆ ಪೈಪೋಟಿ ನೀಡಲು 'ಜಾಗ್ವಾರ್' ಜಾಣೆ ಬಂದಿದ್ದಾರೆ. ಏನಪ್ಪಾ ಇದು ಅಂತ ಕನ್ ಫ್ಯೂಸ್ ಆಗುವ ಮುನ್ನ ಪೂರ ಸ್ಟೋರಿ ಓದಿರಿ...

'ರಾಜಮಾರ್ತಾಂಡ' ಚಿತ್ರದಲ್ಲಿ ಮೂವರು ನಾಯಕಿಯರು.!

ನೀವೆಲ್ಲ ಭಾವಿಸಿರುವ ಹಾಗೆ, 'ರಾಜಮಾರ್ತಾಂಡ' ಚಿತ್ರದಲ್ಲಿ ಕಾನ್ಸ್ ಟೇಬಲ್ ಸರೋಜ ಅಲಿಯಾಸ್ ತ್ರಿವೇಣಿ ಏಕೈಕ ನಾಯಕಿ ಅಲ್ಲ. ಅಷ್ಟಕ್ಕೂ, ಸಿನಿಮಾದಲ್ಲಿ ತ್ರಿವೇಣಿಗೆ ಲಭಿಸಿರುವುದು ಎರಡನೇ ನಾಯಕಿಯ ಪಾತ್ರ.

ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾದ 'ಕಾನ್ಸ್ ಟೇಬಲ್ ಸರೋಜ'

ಮೊದಲನೇ ನಾಯಕಿ ಯಾರು ಗೊತ್ತಾ.?

'ರಾಜಮಾರ್ತಾಂಡ' ಚಿತ್ರದಲ್ಲಿ ನಟನೆಯ ವಿಚಾರದಲ್ಲಿ ತ್ರಿವೇಣಿಗೆ ಪೈಪೋಟಿ ನೀಡಲು ಮೊದಲನೇ ನಾಯಕಿ ಆಗಿ ಆಯ್ಕೆ ಆಗಿರುವುದು ದೀಪ್ತಿ ಸತಿ. ಯಾರಪ್ಪಾ ಈ ದೀಪ್ತಿ ಸತಿ ಅಂತ ತಲೆಗೆ ಹುಳ ಬಿಟ್ಟುಕೊಳ್ತಿದ್ರೆ, ಮೊದಲು 'ಜಾಗ್ವಾರ್' ಸಿನಿಮಾ ನೆನಪಿಸಿಕೊಳ್ಳಿ....

ಮತ್ತೆ ಕನ್ನಡಕ್ಕೆ ಬಂದ 'ಜಾಗ್ವಾರ್' ನಾಯಕಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಜಾಗ್ವಾರ್'ನಲ್ಲಿ ನಾಯಕಿ ಆಗಿದ್ದವರು ಇದೇ ದೀಪ್ತಿ ಸತಿ. 'ಜಾಗ್ವಾರ್' ನಂತರ ಮತ್ತೆ ಸ್ಯಾಂಡಲ್ ವುಡ್ ಕಡೆಗೆ ಮುಖ ಮಾಡಲು ಮನಸ್ಸು ಮಾಡಿರುವ ದೀಪ್ತಿ 'ರಾಜಮಾರ್ತಾಂಡ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

ಮೂರನೇ ಹೀರೋಯಿನ್ ಕೂಡ ಇರ್ತಾರೆ.!

'ರಾಜಮಾರ್ತಾಂಡ' ಸಿನಿಮಾದಲ್ಲಿ ಮೂವರು ಹೀರೋಯಿನ್ ಗಳು ಇರ್ತಾರಂತೆ. ಈಗಾಗಲೇ ಮೊದಲನೇ ನಾಯಕಿಯಾಗಿ ದೀಪ್ತಿ ಸತಿ ಹಾಗೂ ಎರಡನೇ ನಾಯಕಿ ಆಗಿ ತ್ರಿವೇಣಿ ಫೈನಲ್ ಆಗಿದ್ದಾರೆ. ಮೂರನೇ ಹೀರೋಯಿನ್ ಗಾಗಿ ನಿರ್ದೇಶಕ ರಾಮ್ ನಾರಾಯಣ್ ಹುಡುಕಾಟ ಮುಂದುವರೆಸಿದ್ದಾರೆ.

ಡಾಲಿಯ ಡಾರ್ಲಿಂಗ್ 'ಕಾನ್ಸ್ ಟೇಬಲ್ ಸರೋಜ' ಸಂದರ್ಶನ

ಚಿರಂಜೀವಿ ಸರ್ಜಾ ಹೀರೋ

ಈಗಾಗಲೇ 'ಟೈಸನ್', 'ಕ್ರ್ಯಾಕ್' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾ 'ರಾಜಮಾರ್ತಾಂಡ'ಗೆ ಚಿರಂಜೀವಿ ಸರ್ಜಾ ಹೀರೋ. ಸಿನಿಮಾದಲ್ಲಿ ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುವ ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.

English summary
Kannada Actress Deepthi Sati of 'Jaguar' fame to play lead in Chiranjeevi Sarja's Raja Marthanda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada