ಧೃವ ಸರ್ಜಾ ಸಿನಿಮಾಕ್ಕೆ ತಮಿಳಿನಲ್ಲೂ ಭಾರಿ ಡಿಮ್ಯಾಂಡ್
ನಟ ಧೃವ ಸರ್ಜಾ ನಟನೆಯ ಪೊಗರು ಸಿನಿಮಾ ಈಗಾಗಲೇ ಭಾರಿ ಕ್ರೇಜ್ ಹುಟ್ಟಿಸಿದೆ. ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಈಗ ತಮಿಳು ಡಬ್ಬಿಂಗ್ ಹಕ್ಕುಗಳಿಗೂ ಭಾರಿ ಡಿಮ್ಯಾಂಡ್ ಬಂದಿದೆಯಂತೆ.
Recommended Video
ಪೊಗರು ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕುಗಳು 7.2 ಕೋಟಿ ರೂಪಾಯಿಗೆ ಮಾರಾಟವಾಗಿವೆ. ನಿರ್ಮಾಪಕ ಆರ್‌ಕೆ ದಗ್ಗಲ್ ಅವರು ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿದ್ದಾರೆ.
ಪೊಗರು ಸಿನಿಮಾದ ತಮಿಳು ಹಕ್ಕುಗಳಿಗಾಗಿ ಸಖತ್ ಬೇಡಿಕೆ ಬರುತ್ತಿದೆಯಂತೆ. ತಮಿಳಿನ ಮೂರ್ನಾಲ್ಕು ನಿರ್ಮಾಣ ಸಂಸ್ಥೆಗಳು ಪೊಗರು ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಖರೀದಿಸಲು ಚಿತ್ರತಂಡವನ್ನು ಎಡತಾಕಿವೆಯಂತೆ. ಚಿತ್ರತಂಡವು ಮಾತುಕತೆ ನಡೆಸುತ್ತಿದ್ದು, ಒಳ್ಳೆಯ ಮೊತ್ತಕ್ಕೆ ಸಿನಿಮಾದ ಹಕ್ಕು ಮಾರಾಟವಾಗುವ ಸಾಧ್ಯತೆ ಇದೆ.

ಪಕ್ಕಾ ಆಕ್ಷನ್ ಸಿನಿಮಾ ಆಗಿರುವ ಪೊಗರು ನಲ್ಲಿ ವಿದೇಶದ ಭಾರಿ ದೈತ್ಯದೇಹಿಗಳು ನಟಿಸಿದ್ದಾರೆ. ಅದರಲ್ಲಿ ಕಾಯ್ ಗ್ರೀನ್ ಸಹ ಒಬ್ಬರು. ಸಿನಿಮಾವಂತೂ ಆಕ್ಷನ್ ಪ್ರಿಯರಿಗೆ ಹಬ್ಬದೂಟವೆಂದೇ ಹೇಳಲಾಗುತ್ತಿದೆ.
ಪೊಗರು ಸಿನಿಮಾವನ್ನು ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಕ್ರಿಸ್ಮಸ್ ಅಥವಾ ಸಂಕ್ರಾಂತಿ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











