»   » ಶಿವಣ್ಣ ಮತ್ತು ಸುದೀಪ್ ಇಬ್ಬರ 'ದಿ ವಿಲನ್' ಅಡ್ಡಕ್ಕೆ ಕನ್ನಡದ ಮತ್ತೊಬ್ಬ ನಟನ ಎಂಟ್ರಿ!

ಶಿವಣ್ಣ ಮತ್ತು ಸುದೀಪ್ ಇಬ್ಬರ 'ದಿ ವಿಲನ್' ಅಡ್ಡಕ್ಕೆ ಕನ್ನಡದ ಮತ್ತೊಬ್ಬ ನಟನ ಎಂಟ್ರಿ!

Posted By:
Subscribe to Filmibeat Kannada
ದಿ ವಿಲನ್ ಸಿನಿಮಾಗೆ ಕನ್ನಡದ ಹಿರಿಯ ನಟ ದೇವರಾಜ್ ಎಂಟ್ರಿ | Filmibeat Kannada

'ದಿ ವಿಲನ್' ಸಿನಿಮಾ ಕಳೆದ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿತ್ತು. ಆದರೆ ಆ ಸಿನಿಮಾದ ಮೇಲೆ ಇದ್ದ ನಿರೀಕ್ಷೆ ಈ ವರ್ಷಕ್ಕೂ ಮುಂದುವರೆದಿದೆ. ಸಿನಿಮಾ ಶುರುವಾದ ಪ್ರತಿ ಹಂತದಲ್ಲಿಯೂ ದೊಡ್ಡ ಸದ್ದು ಮಾಡುತ್ತಿದ್ದ 'ದಿ ವಿಲನ್ ಇದೀಗ ಮತ್ತೆ ಸುದ್ದಿ ಮಾಡಿದೆ.

ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು 'ದಿ ವಿಲನ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಆಮಿ ಜಾಕ್ಸನ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಇವುಗಳ ಜೊತೆಗೆ ಈಗ ಕನ್ನಡದ ಇನ್ನೊಬ್ಬ ನಟ ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ದಿ ವಿಲನ್' ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಇಂದಿನಿಂದ ಶುರು ಆಗಿದ್ದು, ಶೂಟಿಂಗ್ ನಲ್ಲಿ ಆ ನಟ ಕೂಡ ಭಾಗಿಯಾಗಿದ್ದಾರೆ. ಮಾತ್ರವಲ್ಲದೆ ತಮಿಳಿನ ಪೋಷಕ ನಟಿ ಕೂಡ ಪ್ರೇಮ್ ಕನಸಿನ ಸಿನಿಮಾ 'ದಿ ವಿಲನ್' ನಲ್ಲಿ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದೆ ಓದಿ.....

ದೇವರಾಜ್

ನಟ ದೇವರಾಜ್ 'ದಿ ವಿಲನ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇಂದಿನಿಂದ ದೇವರಾಜ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ತಾಯಿಯಾಗಿ ಸರಣ್ಯ

ಪ್ರೇಮ್ ಸಿನಿಮಾಗಳಲ್ಲಿ ತಾಯಿ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಇನ್ನು 'ದಿ ವಿಲನ್' ಚಿತ್ರದಲ್ಲಿಯೂ ಅದು ಮುಂದುವರೆದಿದೆ. ಈ ಚಿತ್ರದ ತಾಯಿಯ ಪಾತ್ರದಲ್ಲಿ ತಮಿಳಿನ ಖ್ಯಾತ ಪೋಷಕ ನಟಿ ಸರಣ್ಯ ಅಭಿನಯಿಸುತ್ತಿದ್ದಾರೆ.

ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ನಿರ್ದೇಶಕ ಪ್ರೇಮ್

ಶೂಟಿಂಗ್ ಮುಗಿಸಿದ ಆಮಿ ಜಾಕ್ಸನ್

ಸುದೀಪ್ ಮತ್ತು ಆಮಿ ಜಾಕ್ಸನ್ ನಡುವಿನ ಹಾಡಿನ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿದಿದೆ. ಈ ಮೂಲಕ ಚಿತ್ರದ ಆಮಿ ಜಾಕ್ಸನ್ ಶೂಟಿಂಗ್ ಕಂಪ್ಲೀಟ್ ಆಗಿದೆ.

ಈ 7 ವಿಶೇಷತೆಗಳು 'ದಿ ವಿಲನ್' ಚಿತ್ರದಲ್ಲಿ ರಾಮ-ರಾವಣನ ಪವರ್ ಹೆಚ್ಚಿಸಿದೆ!

ಇಂಟ್ರೊಡಕ್ಷನ್ ಸಾಂಗ್

'ದಿ ವಿಲನ್' ಚಿತ್ರದ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣ ಇನ್ನೂ ಬಾಕಿ ಉಳಿದಿದೆ. ಈ ಹಾಡಿನಲ್ಲಿ ಸುದೀಪ್ ಮತ್ತು ಶಿವಣ್ಣ ಇಬ್ಬರು ಕಾಣಿಸಿಕೊಳ್ಳಲಿದ್ದಾರೆ.

'ದಿ ವಿಲನ್' ಸಿನಿಮಾದ ಬಿಡುಗಡೆ ಸುದ್ದಿ ಬಂದೇ ಬಿಟ್ಟಿತು!

ರಿಲೀಸ್ ಯಾವಾಗ

ಸದ್ಯ 'ದಿ ವಿಲನ್' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ.

English summary
Kannada actor Devaraj playing an important role in 'The Villain' movie. Actor Sudeep and Shivarajkumar starrer Kannada Movie 'The Villain' movie is directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X