For Quick Alerts
  ALLOW NOTIFICATIONS  
  For Daily Alerts

  ಡಾಲಿ ಧನಂಜಯ್ 'ಹೆಡ್‌ ಬುಷ್' ಸಿನಿಮಾ ಭರ್ಜರಿ ಮೊತ್ತಕ್ಕೆ ಸೇಲ್: ಮಾರಾಟ ಆಗಿದ್ದೆಷ್ಟಕ್ಕೆ?

  |

  ಸ್ಯಾಂಡಲ್‌ವುಡ್ ಹಿಂದೆಂದಿಗಿಂತಲೂ ಈ ವರ್ಷ ಯಶಸ್ಸಿನ ಉತ್ತುಂಗದಲ್ಲಿದೆ. 2022 ಕನ್ನಡ ಚಿತ್ರರಂಗಕ್ಕೆ ಗೋಲ್ಡನ್ ಇಯರ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಈ ವರ್ಷದ ಬ್ಲಾಕ್‌ಬಸ್ಟರ್ ಲಿಸ್ಟ್‌ಗೆ ಈಗಾಗಲೇ ಸಾಕಷ್ಟು ಸಿನಿಮಾ ಸೇರಿವೆ. ಈಗ ಇನ್ನೊಂದು ಸಿನಿಮಾ ಸೇರುತ್ತಾ? ಅನ್ನೋ ಲೆಕ್ಕಾಚಾರ ಶುರುವಾಗಿದೆ.

  'ಬಡವ ರಾಸ್ಕಲ್' ಸಿನಿಮಾ ನಿರ್ಮಾಣದ ಬಳಿಕ ಡಾಲಿ ಧನಂಜಯ್ ನಟ ಅಷ್ಟೇ ನಿರ್ಮಾಪಕ ಕೂಡ ಅನ್ನೋದು ಪ್ರೂವ್ ಆಗಿದೆ. 'ಬಡವ ರಾಸ್ಕಲ್' ಸಿನಿಮಾ ಗೆದ್ದ ಖುಷಿಯಲ್ಲಿಯೇ ಮತ್ತೊಂದು ಸಿನಿಮಾದ ನಿರ್ಮಾಣಕ್ಕೆ ಮುಂದಾಗಿದ್ದರು. ಅದುವೇ 'ಹೆಡ್ ಬುಷ್'

  ದೀಪಾವಳಿ ಹಬ್ಬಕ್ಕೆ 'ಹೆಡ್ ಬುಷ್' Vs 'ಕಾಂತಾರ': ಬಾಕ್ಸಾಫೀಸ್‌ ಕಥೆಯೇನು?ದೀಪಾವಳಿ ಹಬ್ಬಕ್ಕೆ 'ಹೆಡ್ ಬುಷ್' Vs 'ಕಾಂತಾರ': ಬಾಕ್ಸಾಫೀಸ್‌ ಕಥೆಯೇನು?

  ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಪ್ರಚಾರ ಮಾಡಿದ್ದ ಡಾಲಿ, ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಸೇಲ್ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ಎರಡು ದಿನ ಇದೆ ಅನ್ನುವಾಗಲೇ ಆ ಮೊತ್ತ ಕೂಡ ರಿವೀಲ್ ಆಗಿದೆ. ಅಷ್ಟಕ್ಕೂ 'ಹೆಡ್ ಬುಷ್' ಕ್ರೇಜ್ ಹೇಗಿದೆ? ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

  70 ರ ದಶಕದ ಭೂಗತಲೋಕದ ಕಥೆ

  70 ರ ದಶಕದ ಭೂಗತಲೋಕದ ಕಥೆ

  'ಹೆಡ್‌ ಬುಷ್' ಸಿನಿಮಾ 70ರ ದಶಕದ ಬೆಂಗಳೂರಿನ ಭೂಗತಲೋಕದ ಕಥೆ. ಲೇಖಕ ಅಗ್ನಿ ಶ್ರೀಧರ್ ಬರೆದಿರೋ 'ಮೈ ಡೇಸ್ ಇನ್ ಅಂಡರ್‌ವರ್ಲ್ಡ್: ರೈಸ್ ಆಫ್ ದಿ ಬೆಂಗಳೂರು ಮಾಫಿಯಾ' ಪುಸ್ತಕವನ್ನು ಆಧರಿಸಿದ ಸಿನಿಮಾ. ಅಂಡರ್‌ವರ್ಲ್ಡ್‌ ಡಾನ್ ಎನಿಸಿಕೊಂಡಿದ್ದ ಜಯರಾಜ್ ಅವರ ಚರಿತ್ರೆಯನ್ನು ಆಧರಿಸಿ, ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎನ್ನಲಾಗುತ್ತಿದೆ. ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್, ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 21ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು, ಬಾಕ್ಸಾಫೀಸ್ ಮೇಲೆ ಎಲ್ಲರ ಕಣ್ಣಿದೆ. ಆದರೆ, ಅದಕ್ಕೂ ಮುನ್ನ ಪ್ರತಿಷ್ಠಿತ ಸಂಸ್ಥೆ ಈ ಸಿನಿಮಾ ದುಬಾರಿ ಮೊತ್ತಕ್ಕೆ ಕೊಂಡುಕೊಂಡಿದೆ.

  ಯಾವ ಮೊತ್ತಕ್ಕೆ 'ಹೆಡ್ ಬುಷ್' ಸೇಲ್ ?

  ಯಾವ ಮೊತ್ತಕ್ಕೆ 'ಹೆಡ್ ಬುಷ್' ಸೇಲ್ ?

  ಡಾಲಿ ಧನಂಜಯ್ ಸಿನಿಮಾ 'ಹೆಡ್ ಬುಷ್' ಕೆಲವು ದಿನಗಳ ಹಿಂದೆನೇ ಮಾರಾಟ ಆಗಿದೆ. ಪ್ರತಿಷ್ಠಿತ ವಿತರಣಾ ಸಂಸ್ಥೆ ಜೀ ಸ್ಟುಡಿಯೋ ಈ ಸಿನಿಮಾವನ್ನು ದುಬಾರಿ ಮೊತ್ತ ಕೊಟ್ಟು ಕೊಂಡುಕೊಂಡಿದೆ. ಚಿತ್ರರಂಗದ ಮೂಲಗಳ ಪ್ರಕಾರ, ಧನಂಜಯ್ ಸಿನಿಮಾ ಸುಮಾರು 22 ಕೋಟಿ ರೂಪಾಯಿ ಮೊತ್ತಕ್ಕೆ ಸೇಲ್ ಆಗಿದೆ. ಸ್ಯಾಂಡಲ್‌ವುಡ್ ಮಂದಿ ಪ್ರಕಾರ, ಇದು ಚಿತ್ರರಂಗಕ್ಕೆ ಸಿಕ್ಕಿರೋ ದೊಡ್ಡ ಮೊತ್ತ. ಕನ್ನಡ ಸಿನಿಮಾಗಳ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಮಾರಾಟ ಕೂಡ ದೊಡ್ಡ ಮೊತ್ತಕ್ಕೇ ಆಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

  'ಹೆಡ್ ಬುಷ್' ಬ್ಯುಸಿನೆಸ್ ಲೆಕ್ಕಾಚಾರವೇನು?

  'ಹೆಡ್ ಬುಷ್' ಬ್ಯುಸಿನೆಸ್ ಲೆಕ್ಕಾಚಾರವೇನು?

  'ಹೆಡ್ ಬುಷ್' ಸಿನಿಮಾ 22 ಕೋಟಿ ರೂಪಾಯಿಗೆ ಸೇಲ್ ಆಗಿದ್ದು, ಧನಂಜಯ್ ಬ್ಯುಸಿನೆಸ್ ಸೆನ್ಸ್ ಅನ್ನು ತೋರಿಸಿದೆ. ಈ ಬೆನ್ನಲ್ಲೇ 'ಹೆಡ್ ಬುಷ್' ಬ್ಯುಸಿನೆಸ್ ಲೆಕ್ಕಚಾರದ ಬಗ್ಗೆನೂ ಚರ್ಚೆ ನಡೆಯುತ್ತಿದೆ. ಧನಂಜಯ್ ನಿರ್ಮಾಣದ ಸಿನಿಮಾ 'ಬಡವ ರಾಸ್ಕಲ್' ಬಾಕ್ಸಾಫೀಸ್‌ನಲ್ಲಿ ಉತ್ತಮ ಬ್ಯುಸಿನೆಸ್ ಮಾಡಿತ್ತು. ಒಂದು ಅಂದಾಜಿನ ಪ್ರಕಾರ, ಈ ಸಿನಿಮಾ 16 ರಿಂದ 18 ಕೋಟಿ ರೂಪಾಯಿ ಎನ್ನಲಾಗಿತ್ತು. ಈಗ ಡಾಲಿ ನಿರ್ಮಾಣದ 'ಹೆಡ್‌ ಬುಷ್‌' ಅನ್ನು ಹಿಂದಿನ ಸಿನಿಮಾದ ಗಳಿಕೆಯನ್ನುಗಮನಿಸಿ ಅದಕ್ಕಿಂತಲೂ ಹೆಚ್ಚಿನ ಮೊತ್ತ ಕೊಟ್ಟು ಖರೀದಿ ಮಾಡಲಾಗಿದೆ ಅನ್ನೋದು ಚರ್ಚೆ.

  ಅಡ್ವಾನ್ಸ್ ಬುಕಿಂಗ್ ಆರಂಭ

  ಅಡ್ವಾನ್ಸ್ ಬುಕಿಂಗ್ ಆರಂಭ

  ಡಾಲಿ ಧನಂಜಯ್ ಸಿನಿಮಾ 'ಹೆಡ್‌ ಬುಷ್' ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಸಿನಿಮಾ ಬಿಡುಗಡೆ ಎರಡು ದಿನವಿರುವಾಗಲೇ ಬುಕ್ ಮೈ ಶೋನಲ್ಲಿ ಬುಕಿಂಗ್ ಓಪನ್ ಆಗಿದೆ. ದೀಪಾವಳಿ ಹಬ್ಬಕ್ಕೆ ಸ್ಯಾಂಡಲ್‌ವುಡ್‌ ಕಡೆಯಿಂದ ಮತ್ತೊಂದು ಅದ್ಭುತ ಸಿನಿಮಾ ಸಿಗುತ್ತಾ? ಮತ್ತೆ ಬಾಕ್ಸಾಫೀಸ್‌ನಲ್ಲಿ ಕ್ರಾಂತಿ ಮಾಡುತ್ತಾ? ಅನ್ನೋ ಕುತೂಹಲವಿದೆ. 'ಹೆಡ್ ಬುಷ್' ಸಿನಿಮಾನೂ ಗೆದ್ದರೆ, ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ಗೆ ಕಾಂಪಿಟೇಷನ್ ಕೊಡೋರೇ ಇರೋಲ್ಲ.

  ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ತಮಿಳು ನಟಿ ಪ್ರಿಯಾ ಭವಾನಿ ಶಂಕರ್!ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ತಮಿಳು ನಟಿ ಪ್ರಿಯಾ ಭವಾನಿ ಶಂಕರ್!

  English summary
  Dhananjay And Yogi Starrer Head Bush Movie Sold For 22Crore To Zee Studio, Know More.
  Wednesday, October 19, 2022, 15:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X