For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ, ದರ್ಶನ್ ನಂತರ ಪುನೀತ್ ಚಿತ್ರದಲ್ಲಿ ಡಾಲಿ ಧನಂಜಯ್

  |
  ಶಿವಣ್ಣ, ದರ್ಶನ್ ನಂತರ ಪುನೀತ್ ಚಿತ್ರದಲ್ಲಿ ಡಾಲಿ ಧನಂಜಯ್ | FILMIBEAT KANNADA

  ನಾಯಕನಾಗಿ ಹೇಳಿಕೊಳ್ಳುವಂತಹ ಯಶಸ್ಸು ಕಾಣದ ಧನಂಜಯ್, ವಿಲನ್ ಆಗಿ ತಮ್ಮ ಲಕ್ ಬದಲಾಯಿಸಿಕೊಂಡರು. ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ನಂತರ ಧನಂಜಯ್ ಬೇಡಿಕೆ ಹೆಚ್ಚಿದೆ.

  ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳಿಗೆ ಧನಂಜಯ್ ಬೇಡಿಕೆಯ ವಿಲನ್ ಆಗುತ್ತಿದ್ದಾರೆ. ಈಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಮಿಠಾಯಿ ಸೂರಿ ಪಾತ್ರದಲ್ಲಿ ಧನಂಜಯ್ ಕಮಾಲ್ ಮಾಡ್ತಿದ್ದಾರೆ.

  ಯಜಮಾನ ಚಿತ್ರದಲ್ಲಿ 'ಮಿಠಾಯಿ ಸೂರಿ' ವಿಲನ್ ಅಲ್ಲ.!ಯಜಮಾನ ಚಿತ್ರದಲ್ಲಿ 'ಮಿಠಾಯಿ ಸೂರಿ' ವಿಲನ್ ಅಲ್ಲ.!

  ಹೀಗಿರುವಾಗಲೇ ಇನ್ನೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಡಾಲಿ. ಹೌದು, ಶಿವಣ್ಣ, ದರ್ಶನ್ ಚಿತ್ರಗಳ ನಂತರ ಈಗ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ವಿಲನ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಯಾವ ಚಿತ್ರ, ಯಾವ ಪಾತ್ರ? ಮುಂದೆ ಓದಿ.....

  ಯುವರತ್ನನ ಜೊತೆ ಡಾಲಿ

  ಯುವರತ್ನನ ಜೊತೆ ಡಾಲಿ

  ರಾಜಕುಮಾರ ಚಿತ್ರದ ನಂತರ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯಲ್ಲಿ ಬರ್ತಿರುವ ಯುವರತ್ನ ಚಿತ್ರಕ್ಕೆ ಈಗ ಧನಂಜಯ್ ಸೇರ್ಪಡೆಯಾಗಿದ್ದಾರೆ. ಈ ವಿಷ್ಯವನ್ನ ಖುದ್ದು ನಿರ್ದೇಶಕರೇ ಖಚಿತಪಡಿಸಿದ್ದಾರೆ.

  ಕೊನೆಗೂ 'ಡಾಲಿ' ಆಗ್ಬಿಟ್ರು ನಟ ಧನಂಜಯ್.!ಕೊನೆಗೂ 'ಡಾಲಿ' ಆಗ್ಬಿಟ್ರು ನಟ ಧನಂಜಯ್.!

  ಪುನೀತ್ ಎದುರು ವಿಲನ್?

  ಪುನೀತ್ ಎದುರು ವಿಲನ್?

  ಶಿವಣ್ಣನ ಎದುರು ವಿಲನ್ ಆಗಿದ್ದು ಆಯ್ತು. ದರ್ಶನ್ ಎದುರು ಸೌಂಡು ಮಾಡಿದ್ದು ಆಯ್ತು. ಈಗ ಪುನೀತ್ ರಾಜ್ ಕುಮಾರ್ ಸರದಿ. ಯುವರತ್ನ ಚಿತ್ರದಲ್ಲಿ ಧನಂಜಯ್ ವಿಲನ್ ಎಂದು ಹೇಳಲಾಗ್ತಿದೆ. ಸದ್ಯಕ್ಕೆ ಧನಂಜಯ್ ಪಾತ್ರದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಬಟ್, ವಿಲನ್ ಪಾತ್ರಕ್ಕಾಗಿಯೇ ಆಯ್ಕೆ ಮಾಡಲಾಗಿದೆಯಂತೆ.

  ಧನಂಜಯ್ ಗೆ 'ರೇಂಜ್ ರೋವರ್' ಕಾರು ಕೊಡಿಸಿದ್ದು ಇವರೇ.!ಧನಂಜಯ್ ಗೆ 'ರೇಂಜ್ ರೋವರ್' ಕಾರು ಕೊಡಿಸಿದ್ದು ಇವರೇ.!

  ದುನಿಯಾ ವಿಜಯ್ ಚಿತ್ರಕ್ಕೂ ಡಾಲಿ

  ದುನಿಯಾ ವಿಜಯ್ ಚಿತ್ರಕ್ಕೂ ಡಾಲಿ

  ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಧನಂಜಯ್ ಜೊತೆ ಜೊತೆಗೆ ವಿಲನ್ ಆಗಿಯೂ ಅಭಿನಯಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ದುನಿಯಾ ವಿಜಯ್ ನಟಿಸುತ್ತಿರುವ 'ಸಲಗ' ಹಾಗೂ ಜಗ್ಗೇಶ್ ನಟನೆಯ ತೋತಾಪುರಿ ಚಿತ್ರಗಳಿಂದಲೂ ಧನಂಜಯ್ ಗೆ ಆಫರ್ ಬಂದಿದೆಯಂತೆ.

  ಫೆಬ್ರವರಿ 14ಕ್ಕೆ ಆರಂಭ

  ಫೆಬ್ರವರಿ 14ಕ್ಕೆ ಆರಂಭ

  ರಾಜಕುಮಾರ ಚಿತ್ರ ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಈ ಹೊಸ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಪ್ಪು ಕಾಲೇಜ್ ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಫೆಬ್ರವರಿ 14ರಿಂದ ಮಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

  English summary
  Dhananjay will take up the challenge of playing a negative character opposite Power Star Puneeth Rajkumar in Yuvaratna.The Santhosh Ananddram’s directorial, made under Hombale Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X