»   » ಸಿನಿಮಾ ನೋಡಿ ಡಾಲಿ ಕೈಗೆ ಹಣ ಕೊಟ್ಟ ಪ್ರೇಕ್ಷಕ

ಸಿನಿಮಾ ನೋಡಿ ಡಾಲಿ ಕೈಗೆ ಹಣ ಕೊಟ್ಟ ಪ್ರೇಕ್ಷಕ

Posted By:
Subscribe to Filmibeat Kannada
ಸಿನಿಮಾ ನೋಡಿ ಡಾಲಿ ಕೈಗೆ ಹಣ ಕೊಟ್ಟ ಅಭಿಮಾನಿ | Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಡಾಲಿ ಎಂಬ ನಟ ರಾಕ್ಷಸನಿಗೆ ಜನರು ಮನಸೋತಿದ್ದಾರೆ. ತೆರೆ ಮೇಲೆ ಅಭಿನಯದ ಮೂಲಕ ಅಬ್ಬರಿಸಿರುವ ಧನಂಜಯನಿಗೆ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಟಗರು ಚಿತ್ರ ನೋಡಿ ಬರುತ್ತಿರುವ ಪ್ರತಿ ಪ್ರೇಕ್ಷಕ ಡಾಲಿಯನ್ನ ಜೊತೆಯಲ್ಲೇ ಕರೆದುಕೊಂಡು ಬರುತ್ತಿದ್ದಾರೆ.

ಸಾಕಷ್ಟು ದಿನಗಳಿಂದ ನಾಯಕನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಧನಂಜಯ ಈಗ ಖಳನಾಯಕನಾಗಿ ಅಭಿನಯಿಸಿರುವುದು ಸಿನಿಮಾ ಪ್ರೇಕ್ಷಕರಿಗೂ ಖುಷಿಯನ್ನ ತಂದುಕೊಟ್ಟಿದೆ. ಯಾವುದೇ ಬೇಸರವಿಲ್ಲದೆ ಡಾಲಿಯನ್ನ ಮನಸ್ಸು ಪೂರ್ತಿಯಾಗಿ ಸ್ವೀಕರಿಸಿದ್ದಾರೆ.

'ಟಗರು' ನೋಡಿದ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಏನು ಇಷ್ಟ ಆಯ್ತು?

ಧನಂಜಯ ಅಭಿನಯಿಸಿದ ಸಿನಿಮಾ ನೋಡಿ ಪ್ರೇಕ್ಷಕರೊಬ್ಬರು ಮನೆಗೆ ಆಹ್ವಾನಿಸಿ ಕೈಗೆ ಹಣವಿಟ್ಟು ಕಳುಹಿಸಿದ್ದಾರಂತೆ. ಸಿನಿಮಾ ನೋಡಿ ಹಣ ಯಾಕೆ ಕೊಟ್ಟರು ಅನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತೆ. ಆದರೆ ಇದು ಸತ್ಯ.ಈ ಬಗ್ಗೆ ನಟ ಧನಂಜಯ ಅವರೇ ಹೇಳಿಕೊಂಡಿದ್ದಾರೆ. ಯಾರು ಆ ಪ್ರೇಕ್ಷಕ? ಡಾಲಿಗೆ ಹಣ ಕೊಟ್ಟಿದ್ದೇಕೆ ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಡಾಲಿ ಕೈಗೆ ಹಣಕೊಟ್ಟ ಪ್ರೇಕ್ಷಕ

ಸ್ಯಾಂಡಲ್ ವುಡ್ ನ ಸ್ಪೆಷಲ್ ಸ್ಟಾರ್ ಧನಂಜಯ್ ಸಿನಿಮಾ ನೋಡಿ ಅಭಿಮಾನಿಯೊಬ್ಬರು ಹಣವನ್ನ ಕೊಟ್ಟಿದ್ದಾರೆ. ಇಂತದೊಂದು ಸಂಗತಿ ನಡೆದಿದ್ದು ಸುಮಾರು ತಿಂಗಳುಗಳ ಹಿಂದೆ.

ಅಲ್ಲಮ ಚಿತ್ರ ನೋಡಿ ಮೆಚ್ಚಿದ ಅಭಿಮಾನಿ

ಅಲ್ಲಮ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಇಂಥದೊಂದು ಪ್ರಸಂಗ ನಡೆದಿತ್ತು ಎಂದು ನಟ ಧನಂಜಯ ಅವರೇ ಹೇಳಿಕೊಂಡಿದ್ದಾರೆ ಆರ್ ಜೆ ಮಯೂರ್ ರಾಘವೇಂದ್ರ ನಡೆಸಿಕೊಡುವ ಸಿನಿಮಾ ಸೂತ್ರ ಕಾರ್ಯಕ್ರಮದಲ್ಲಿ ಈ ಬಗ್ಗೆ ಡಾಲಿ ಹೇಳಿದ್ದಾರೆ.

ಉಡುಗೊರೆಯಾಗಿ ಹಣ ನೀಡಿದ ಪ್ರೇಕ್ಷಕ

ಅಲ್ಲಮನ ಪಾತ್ರದಲ್ಲಿ ಧನಂಜಯರನ್ನ ನೋಡಿ ಸಾಕಷ್ಟು ಜನರು ಮೆಚ್ಚಿಕೊಂಡಿದ್ದರು. ಅದರಂತೆ ಒಬ್ಬ ಹಿರಿಯ ಸಿನಿಮಾ ಪ್ರೇಕ್ಷಕರು ಚಿತ್ರ ನೋಡಿ ಧನಂಜಯ ಅವರಿಗೆ ಪ್ರತಿನಿತ್ಯ ಕರೆ ಮಾಡುತ್ತಿದ್ದರಂತೆ,. ಒಂದು ದಿನ ಮನೆಗೆ ಕರೆಸಿಕೊಂಡು ಉಡುಗೊರೆಯ ರೂಪದಲ್ಲಿ 50 ಸಾವಿರ ಹಣ ಕೊಟ್ಟು "ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಕು ಚೆನ್ನಾಗಿ ಅಭಿನಯಿಸು" ಎಂದು ಹೇಳಿದ್ದಾರೆ.

ವಿಭಿನ್ನ ಎನ್ನಿಸಿದ ಪ್ರೇಕ್ಷಕ

ಹಣವನ್ನ ಹಿಂತಿರುಗಿಸಲು ಹೋದಾಗ ಅದನ್ನ ಪಡೆಯದ ಪ್ರೇಕ್ಷಕ ಎಲ್ಲರ ಮಧ್ಯೆ ವಿಭಿನ್ನ ಎನ್ನಿಸಿದ್ದಾರೆ. ಟಗರು ಸಿನಿಮಾ ಬಿಡುಗಡೆ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಧನಂಜಯ ಮಾತನಾಡಿದ್ದಾರೆ.

English summary
Kannada Actor Dhananjay reveals that a fan gave him Rs.50,000 after watching his film 'Allama'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada